ಬೈಕ್‌ಗೆ ಸಾರಿಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ಹೊರವಲಯದ ನಂದಿಕೂರ ಕ್ರಾಸ್ ಬಳಿ ಸೋಮವಾರ ಬೆಳಿಗ್ಗಿನ ಜಾವ ನಡೆದಿದೆ.
ಮೃತರು ಜೇವರ್ಗಿ ತಾಲೂಕಿನ ಶಾಖಾಪುರ ಗ್ರಾಮದ ಅಭಿಷೇಕ ಮಾಲಿಪಾಟೀಲ (17), ತನೋಜ್ ತಳವಾರ (17) ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡ ಬೈಕ್ ಸವಾರ ಯಶಪಾಲ್ ರೆಡ್ಡಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
ಅಭಿಷೇಕ, ತನೋಜ್ ಮತ್ತು ಯಶಪಾಲ್ ರೆಡ್ಡಿ ಮೂವರು ಸ್ನೇಹಿತರಾಗಿದ್ದು, ಕಾಶಿಯಿಂದ ಆಗಮಿಸಿದ್ದ ಸ್ನೇಹಿತ ಯಶಪಾಲ್ ರೆಡ್ಡಿಗೆ ಕರೆಯಲು ಬೈಕ್ ಮೇಲೆ ಜೇವರ್ಗಿ ಕಡೆಗೆ ಹೋಗುವಾಗ ಎದುರಿನಿಂದ ಬಂದ ಸಾರಿಗೆ ಬಸ್ ನಡುವೆ ಅಪಾಘತ ಸಂಭವಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆಗ ಬರ, ಈಗ ನೆರೆ- ಸಂತ್ರಸ್ತರತ್ತ ಧಾವಿಸಲಿ ಸರ್ಕಾರ
ರಸ್ತೆ ಅಪಘಾತದ ತೀವ್ರತೆಗೆ ಬೈಕ್‌ಗೆ ಬೆಂಕಿ ಹತ್ತಿಕೊಂಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.
ಈ ಸಂಬಂಧ ಕಲಬುರಗಿ ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.