ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ನಿಂದ ವಾಕ್ ಪ್ರಹಾರಕ್ಕೆ ಗುರಿಯಾದರೂ ಕೂಡಾ ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ್ ಇನ್ನೂ ಕೂಡಾ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮುಂದುವರಿಸಿದೆ. ಕಾನೂನು ಪ್ರಕಾರ ಕೆಲವು ಕಾಯಿಲೆಗಳಿಗೆ ಔಷಧಿಯ ಜಾಹೀರಾತು ನೀಡುವಂತಿಲ್ಲ. ಆದರೆ ಪತಂಜಲಿ ಜಾಹೀರಾತು ನೀಡಿ ಈ ಕಾನೂನನ್ನು ನಿರಂತರವಾಗಿ ಉಲ್ಲಂಘಿಸುತ್ತಿದೆ.
ಪತಂಜಲಿ ಆಯುರ್ವೇದ್ ಜುಲೈ 9ರಂದು ಅಮಾನತುಗೊಳಿಸಿರುವ 14 ಆಯುರ್ವೇದ ಔಷಧಿಗಳ ಎಲ್ಲಾ ಜಾಹೀರಾತುಗಳನ್ನು ತೆಗೆದುಹಾಕಲಾಗುವುದು ಮತ್ತು ಹಿಂಪಡೆಯಲಾಗುವುದು ಎಂದು ಉತ್ತರಾಖಂಡದ ಡೆಹ್ರಾರೂನ್‌ನಲ್ಲಿ ರಾಜ್ಯ ಪರವಾನಗಿ ಪ್ರಾಧಿಕಾರಕ್ಕೆ ಭರವಸೆ ನೀಡಿತ್ತು.
ಆದರೆ ಪತಂಜಲಿ ದೃಷ್ಟಿ ಐ ಡ್ರಾಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ ಎಕ್ಸ್‌ನಲ್ಲಿ (ಈ ಹಿಂದಿನ ಟ್ವಿಟ್ಟರ್) ಪತಂಜಲಿ ಆಯುರ್ವೇದ್ ಎರಡು ಬಾರಿ ನಿಯಮವನ್ನು ಉಲ್ಲಂಘಿಸಿದೆ. ಮೊದಲು 2023ರ ನವೆಂಬರ್‌ನಲ್ಲಿ ಮತ್ತು ಅದಾದ ಬಳಿಕ 2024ರ ಜುಲೈ 9ರಂದು ಕಾನೂನು ಉಲ್ಲಂಘಿಸಿದೆ ಎಂದು ಕೇರಳ ಮೂಲದ ಆರ್‌ಟಿಐ ಕಾರ್ಯಕರ್ತ ಕೆ.ವಿ. ಬಾಬು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಟ್ರೇಡ್‌ಮಾರ್ಕ್ ಪ್ರಕರಣ | 50 ಲಕ್ಷ ರೂ. ಪಾವತಿಸಲು ಪತಂಜಲಿಗೆ ಬಾಂಬೆ ಹೈಕೋರ್ಟ್ ಆದೇಶ
ಈ ಬಗ್ಗೆ ಜುಲೈ 12ರಂದು ಆರ್‌ಟಿಐ ಕಾರ್ಯಕರ್ತ ಕೆ.ವಿ. ಬಾಬು ಅವರು ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರಕ್ಕೆ (ಎಸ್‌ಎಲ್‌ಎ) ದೂರು ಸಲ್ಲಿಸಿದ್ದಾರೆ. “ನನ್ನ ದೂರಿನ ಆಧಾರದ ಮೇಲೆ, ಎಸ್‌ಎಲ್‌ಎ ಜುಲೈ 15ರಂದು ಹರಿದ್ವಾರದ ಡ್ರಗ್ ಇನ್‌ಸ್ಪೆಕ್ಟರ್‌ಗೆ ಕ್ರಮಕೈಗೊಳ್ಳಲು ಸೂಚಿಸಿದೆ. ಈ ಹಿಂದಿನ ಜಾಹೀರಾತುಗಳನ್ನು ಅಳಿಸಿದರೂ ಕೂಡಾ ಸುಪ್ರೀಂಗೆ ನೀಡಿದ ಭರವಸೆಯನ್ನು ನೇರವಾಗಿ ಉಲ್ಲಂಘಿಸಿ ಮತ್ತೆ ಜಾಹೀರಾತು ಪ್ರಕಟಿಸಲಾಗಿದೆ” ಎಂದು ಆರೋಪಿಸಿದ್ದಾರೆ.
ಜುಲೈ 18ರಂದು ಮತ್ತೆ ಎಸ್‌ಎಲ್‌ಎಗೆ ದೂರು ನೀಡಿದ್ದೇನೆ. ಈ ವಿಡಿಯೋದಲ್ಲಿ ದೃಷ್ಟಿ ಐ ಡ್ರಾಪ್ ಯಾವುದೇ ಕಣ್ಣಿನ ಸಮಸ್ಯೆಗೆ ಪರಿಣಾಮಕಾರಿಯಾದ ಆಯುರ್ವೇದ ಔಷಧಿಯಾಗಿದ್ದು ಬಳಸಲು ಸುರಕ್ಷಿತವಾಗಿದೆ ಎಂದು ಹೇಳಿಕೊಳ್ಳಲಾಗಿದೆ. ಜೊತೆಗೆ ರಾಮ್‌ದೇವ್ ಅವರು ಔಷಧಿ ಪ್ರಚಾರ ಮಾಡುವ ವಿಡಿಯೋ ಇದೆ ಎಂದು ದೂರಿದ್ದಾರೆ.
#Patanjali #Ayurved continues to violate #SupremeCourt directions on misleading #ads#Drishti Eye Drop ad still on social media@NewIndianXpress @TheMornStandard @MoHFW_INDIA @JPNadda @JPNaddaoffice @drbabukv pic.twitter.com/kKAyQevDse
— Kavita Bajeli-Datt (@KavitaDatt) July 30, 2024
ಪತಂಜಲಿ ಆಯುರ್ವೇದ್‌ನ ಅಧಿಕೃತ ಹ್ಯಾಂಡಲ್‌ನಿಂದ ಇತ್ತೀಚೆಗೆ ಮಾಡಲಾದ ಎಕ್ಸ್ ಪೋಸ್ಟ್‌ನಲ್ಲಿ “ಗ್ಲುಕೋಮಾ ಅಥವಾ ಕಣ್ಣಿನ ಪೊರೆ, ರೆಟಿನೈಟಿಸ್ ಪಿಗ್ಮೆಂಟೋಸಾ, ರಾತ್ರಿ ಕುರುಡುತನಕ್ಕೆ ಚಿಕಿತ್ಸೆ ನೀಡಲು ಪತಂಜಲಿ ಆಯುರ್ವೇದ್‌ನ ಐ ಡ್ರಾಪ್ ಸಹಾಯ ಮಾಡುತ್ತದೆ” ಎಂದು ಹೇಳಲಾಗಿದೆ. ಸದ್ಯ ಹ್ಯಾಂಡಲ್‌ನಲ್ಲಿ ಈ ಜಾಹೀರಾತು ಕಾಣುತ್ತಿಲ್ಲ.
ನೇತ್ರತಜ್ಞರಾಗಿರುವ ಬಾಬು, ಚಿಕಿತ್ಸೆ ನೀಡಬಹುದಾದ ಪರಿಸ್ಥಿತಿಗಳಿಗೆ ಸರಿಯಾಗಿ ಐ ಡ್ರಾಪ್ಸ್‌ಗಳನ್ನು ನೀಡದಿರುವುದು ಕುರುಡುತನಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಹಾಗೆಯೇ ಅನೇಕ ವೈದ್ಯರು ಪತಂಜಲಿ ಐ ಡ್ರಾಪ್ ಅನ್ನು ಬಳಸದಂತೆ ಸಲಹೆ ನೀಡಿದ್ದಾರೆ.