ಕೇರಳದ ವಯನಾಡ್ ಭೂಕುಸಿತ ಪ್ರಕರಣದಲ್ಲಿ ಮೃತರ ಸಂಖ್ಯೆ ಏರಿಕೆಯಾಗುತ್ತಲೇ ಸಾಗುತ್ತಿದ್ದು, ಈವರೆಗೆ 43 ಮಂದಿ ಸಾವನ್ನಪ್ಪಿರುವುದು ಖಚಿತವಾಗಿದೆ. ನೂರಾರು ಮಂದಿ ಅವಶೇಷಗಳಲ್ಲಿ ಸಿಲುಕಿರುವ ಶಂಕೆಯಿದ್ದು ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ವಯನಾಡ್ ಜಿಲ್ಲೆಯ ಮುಂಡಕ್ಕೈ, ಚೂರಲ್‌ಮಲಾ, ಅಟ್ಟಮಲ ಮತ್ತು ನೂಲ್‌ಪುಳದ ಕುಗ್ರಾಮದಲ್ಲಿ ಭೂಕುಸಿತ ಉಂಟಾಗಿದೆ. ಮಣ್ಣು, ಮರಗಳು ಮತ್ತು ಬಂಡೆಗಳ ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ತಮ್ಮ ಪ್ರೀತಿಪಾತ್ರರ ರಕ್ಷಣೆಗಾಗಿ ಜನರ ಆಕ್ರಂದನವು ಮುಗಿಲುಮುಟ್ಟಿದೆ.
ಮುಂಡಕ್ಕೈ ಪ್ರದೇಶದಲ್ಲಿ ಸೇತುವೆ ಕೊಚ್ಚಿಹೋಗಿದ್ದು ಈವರೆಗೆ ಎಷ್ಟು ಮಂದಿಗೆ ಹಾನಿಯಾಗಿದೆ ಎಂಬ ಬಗ್ಗೆ ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿಲ್ಲ. 90 ಕಿಮೀ ದೂರದಲ್ಲಿರುವ ನೆರೆಯ ಮಲಪ್ಪುರಂ ಜಿಲ್ಲೆಯ ನಿಲಂಬೂರ್ ಪ್ರದೇಶದಲ್ಲಿ ಚಾಲಿಯಾರ್ ನದಿಯ ಕೆಳಭಾಗದಲ್ಲಿ ಹಲವಾರು ಮೃತದೇಹಗಳನ್ನು ಪತ್ತೆಯಾಗಿದೆ ಎಂದು ವರದಿಯಾಗಿದೆ.
The death toll in the Wayanad landslides has risen to 8. Those dead also include three children.
— Vani Mehrotra (@vani_mehrotra) July 30, 2024
The first landslide was reported at nearly 2 am. Later, at nearly 4.10 am, the district was struck by another landslide. #WayanadLandslide #Wayanad #Kerala pic.twitter.com/TCAWfMdaCz
ಇದನ್ನು ಓದಿದ್ದೀರಾ? ಕೇರಳ | ವಯನಾಡ್‌ನಲ್ಲಿ ಭೀಕರ ಭೂಕುಸಿತ: 7 ಮಂದಿ ಮೃತ್ಯು; 400 ಕುಟುಂಬ ಅತಂತ್ರ
ಕಾಂಗ್ರೆಸ್ ಸಂಸದ ಕೆ.ಸುರೇಶ್ ಸುದ್ದಿಗಾರರೊಂದಿಗೆ ಮಾತನಾಡಿ, “ವಯನಾಡಿನಲ್ಲಿ ಪರಿಸ್ಥಿತಿ ಕಲ್ಪನೆಗೂ ಮೀರಿದೆ. ಮೊದಲ ಮಾಹಿತಿಯ ಪ್ರಕಾರ, 11 ಜನರು ಸಾವನ್ನಪ್ಪಿದ್ದಾರೆ. ಆದರೆ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು. ಸೇತುವೆ ಕುಸಿದಿದೆ ಮತ್ತು ನೀರು ಹರಿಯುತ್ತಿದೆ. ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಒಂದು ಗ್ರಾಮವು ಸಂಪೂರ್ಣವಾಗಿ ಪ್ರತ್ಯೇಕವಾಗಿ, ಕೊಚ್ಚಿಹೋಗಿದೆ. ಕೇರಳ ಸರ್ಕಾರ ಈಗಾಗಲೇ ಪರಿಹಾರ ಕ್ರಮಗಳನ್ನು ಪ್ರಾರಂಭಿಸಿದೆ. ಎನ್‌ಡಿಆರ್‌ಎಫ್ ಮತ್ತು ವಾಯುಪಡೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ” ಎಂದು ಮಾಹಿತಿ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಮೃತರ ಕುಟುಂಬಕ್ಕೆ ಪಿಎಂಎನ್‌ಆರ್‌ಎಫ್ ನಿಧಿಯಿಂದ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ ಮತ್ತು ಗಾಯಾಳುಗಳಿಗೆ 50,000 ರೂಪಾಯಿಗಳನ್ನು ನೀಡಲಾಗುವುದು ಎಂದು ಪ್ರಧಾನ ಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.
Kerala Minister A.K. Saseendran visits the injured in the Wayanad landslide at the Meppady Hospital
— ANI (@ANI) July 30, 2024
(Source : AK Saseendran's Office) pic.twitter.com/bNUyaYjG0w