ಕೇರಳದ ವಯನಾಡ್ ಭೂಕುಸಿತದಲ್ಲಿ ಮೃತರ ಸಂಖ್ಯೆಯು ಏರಿಕೆಯಾಗುತ್ತಲೇ ಇದ್ದು ಕರ್ನಾಟಕದ ಆರು ಮಂದಿ ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಯನಾಡ್ ಭೂಕುಸಿತದಿಂದಾಗಿ ಈವರೆಗೆ 156 ಮಂದಿ ಸಾವನ್ನಪ್ಪಿದ್ದಾರೆ.
ಚಾಮರಾಜನಗರ ಜಿಲ್ಲೆಯ 50 ವರ್ಷದ ರಾಜೇಂದ್ರ, 45 ವರ್ಷದ ರತ್ನಮ್ಮ, ವಯನಾಡಿನ ಮೇಪಾಡಿಯಲ್ಲಿ ವಾಸವಿದ್ದ 62 ವರ್ಷದ ಪುಟ್ಟಸಿದ್ದಶೆಟ್ಟಿ ಮತ್ತು 50 ವರ್ಷದ ರಾಣಿ ಎಂಬವರು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಇನ್ನು ಕೇರಳ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಮಂಡ್ಯ ಮೂಲದ ಲೀಲಾವತಿ ಮತ್ತು ಪುಟ್ಟ ಕಂದಮ್ಮ ನಿಹಾಲ್ ಮೃತದೇಹವು ನಿನ್ನೆ ಸಂಜೆಯ ವೇಳೆಗೆ ಪತ್ತೆಯಾಗಿದೆ. ಚಾಮರಾಜನಗರದ ನಾಲ್ವರು, ಮಂಡ್ಯದ ಇಬ್ಬರು ಸೇರಿ ಈವರೆಗೆ ವಯನಾಡ್ ಭೂಕುಸಿತದಿಂದ ಆರು ಮಂದಿ ಕನ್ನಡಿಗರು ಮೃತಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ವಯನಾಡ್ ಭೂಕುಸಿತ | ಮೃತರ ಸಂಖ್ಯೆ 84ಕ್ಕೆ ಏರಿಕೆ; ಕೇರಳದಲ್ಲಿ ಭಾರೀ ಮಳೆ
ಇನ್ನು ಇರಸವಾಡಿ ಗ್ರಾಮದವರಾದ ರಾಜೇಂದ್ರ ಮತ್ತು ರತ್ನಮ್ಮ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇಬ್ಬರೂ ಕೂಡಾ ಕೇರಳದ ಚೂರಲ್ಲಾದಲ್ಲಿ ಕೆಲಸ ಮಾಡಿಕೊಂಡಿದ್ದರು. ಇನ್ನು ಚಾಮರಾಜನಗರದ ಜಿಲ್ಲೆಯ ತ್ರಯಂಬಕಪುರದ ಸ್ವಾಮಿಶೆಟ್ಟಿ ಎಂಬವರಿಗೆ ಗಂಭೀರವಾಗಿ ಗಾಯಗಳಾಗಿದೆ.
ಸದ್ಯ ಗುಂಡ್ಲುಪೇಟೆ-ವಯನಾಡು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ತಾತ್ಕಾಲಿಕವಾಗಿ ಕೇರಳಕ್ಕೆ ಕೆಲ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
#WATCH | Kerala: Rescue and search operation underway in Wayanad's Chooralmala after a landslide broke out yesterday early morning claiming the lives of 143 people
— ANI (@ANI) July 31, 2024
(latest visuals) pic.twitter.com/aqAG9uZMEP
#WATCH | Kerala: Relief and rescue operation underway in Wayanad's Chooralmala after a landslide broke out yesterday early morning claiming the lives of 143 people
— ANI (@ANI) July 31, 2024
(latest visuals) pic.twitter.com/Cin8rzwAzJ