ದಾವಣಗೆರೆ | ಗಾಳಿಯ ಗುಣಮಟ್ಟ ಉತ್ತಮಗೊಳಿಸಲು ಕ್ರಿಯಾ ಯೋಜನೆ ರೂಪಿಸಬೇಕು: ಪಾಲಿಕೆ ಆಯುಕ್ತೆ ರೇಣುಕಾ

Date:

Advertisements

ಗಾಳಿಯ ಗುಣಮಟ್ಟ ಉತ್ತಮಗೊಳಿಸಲು ಸರ್ಕಾರದ ಎಲ್ಲ ಇಲಾಖೆಗಳು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕ್ರಿಯಾ ಯೋಜನೆ ರೂಪಿಸಬೇಕು ಎಂದು ದಾವಣಗೆರೆ ಪಾಲಿಕೆ ಆಯುಕ್ತೆ ರೇಣುಕಾ ಕರೆ ನೀಡಿದರು.

ನಗರದ ಪಾರ್ವತಿ ಪರ್ಲ್ಸ್ ಸಭಾಂಗಣದಲ್ಲಿ ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಿ-ಸ್ಪೆಪ್ ಇವರ ಸಹಯೋಗದಲ್ಲಿ ಕೈಗಾರಿಕಾ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಆರ್‌ಟಿಒ, ಕೆಎಸ್‌ಆರ್‌ಟಿ ಹಾಗೂ ಇತರೆ ಇಲಾಖಾ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಸ್ವಚ್ಛಗಾಳಿ ಕಾರ್ಯಕ್ರಮದಡಿ ನಗರದ ವಾಯುಗುಣಮಟ್ಟ ಉತ್ತಮ ಪಡಿಸುವ ನಿಟ್ಟಿನಲ್ಲಿ ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

“ನಗರದಲ್ಲಿ 10 ಪಿಎಂ ಗಾತ್ರದ ಧೂಳಿನ ಕಣಗಳನ್ನು ನಿಯಂತ್ರಿಸಲು ಯಾಂತ್ರೀಕೃತ ರಸ್ತೆಗುಡಿಸುವಿಕೆ ಯಂತ್ರಗಳನ್ನು ಖರೀದಿಸಿ ಉಪಯೋಗಿಸಲಾಗುತ್ತಿದ್ದು, ನಗರದ ಹಸಿರೀಕರಣ, ರಸ್ತೆಗಳಲ್ಲಿ ಎಂಡ್ ಟು ಎಂಡ್ ಪೇವರ್ ಆಳವಡಿಕೆ, ಇತರೆ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು ವಾಯು ಮಾಲಿನ್ಯಕ್ಕೆ ಕಾರಣವಾಗಿರುವ ಮಂಡಕ್ಕಿ ಭಟ್ಟಿಗಳಲ್ಲಿ ವಿದ್ಯುತ್, ಎಲ್‌ಪಿಜಿ, ಸಿಎನ್‌ಜಿಯಂತಹ ಬದಲಿ ಇಂಧನ ಉಪಯೋಗಿಸಿ ಆಧುನಿಕ ವೈಜ್ಞಾನಿಕ ಪದ್ದತಿಗಳನ್ನು ಅಳವಡಿಸಿಕೊಂಡು ಕಾರ್ಯಾಚರಿಸುವಂತೆ ಮಾಡಿ ವಾಯುಗುಣಮಟ್ಟ ಉತ್ತಮಗೊಳಿಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ” ಎಂದು ತಿಳಿಸಿದರು.

Advertisements

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಆತ್ಮಹತ್ಯೆಗಾಗಿ ಭೀಮಾ ನದಿಗೆ ಹಾರಿದ ಮಹಿಳೆ ಬಚಾವ್: ರಕ್ಷಣೆಗೆ ಹೋದ ಇಬ್ಬರು ನೀರುಪಾಲು!

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ನಿರ್ದೇಶಕ ಜಿ ಚಂದ್ರಬಾಬು, ಯೋಜನಾ ನಿರ್ದೇಶಕ ಡಾ ಎನ್ ಮಹಾಂತೇಶ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳಾದ ಡಾ ಹೆಚ್ ಲಕ್ಷ್ಮೀಕಾಂತ್, ರಾಜಶೇಖರ್ ಪುರಾಣಿಕ್ ಹಾಗೂ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿರ್ಲಕ್ಷ್ಯಕ್ಕೆ ಗುರಿಯಾಗಿ ದುಸ್ಥಿತಿಗೆ ಬಿದ್ದ ರಾಜ್ಯ ಹೆದ್ದಾರಿ; ಶಾಸಕರ ವಿರುದ್ಧ ಸಾರ್ವಜನಿಕರ ಆಕ್ರೋಶ

ಕಲಬುರಗಿ ಜಿಲ್ಲೆಯ ರಾಜ್ಯ ಹೆದ್ದಾರಿ 125, ಶಹಾಬಾದ್ ತಾಲೂಕಿನಿಂದ ಜೇವರ್ಗಿಯ ರಾಷ್ಟ್ರೀಯ...

ಕಲಬುರಗಿ | ಬೆಳೆ ಹಾನಿ: ಎಕರೆಗೆ 25 ಸಾವಿರ ಪರಿಹಾರ ನೀಡುವಂತೆ ಒತ್ತಾಯಿಸಿ ಎಐಕೆಕೆಎಂಎಸ್‌ ಪ್ರತಿಭಟನೆ

ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆ ನಷ್ಟಕ್ಕೆ ಕೂಡಲೇ ಪರಿಹಾರವನ್ನು ಬಿಡುಗಡೆ...

ಚಿಕ್ಕಬಳ್ಳಾಪುರ | ಮಂತ್ರಾಲಯದಲ್ಲಿ ಡಾ.ಕೈವಾರ ಶ್ರೀನಿವಾಸ್‌ರವರಿಗೆ ಕನ್ನಡಸಿರಿ ಪ್ರಶಸ್ತಿ ಪ್ರದಾನ

ಮಂತ್ರಾಲಯದ ಸದ್ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಪ್ರಪ್ರಥಮ ಅಂತಾರಾಜ್ಯ ಕನ್ನಡ...

ಕೋಲಾರ | ರಸ್ತೆ ವಿಸ್ತರಣೆಗೆ ಕಾನೂನು ಬಾಹಿರವಾಗಿ ಜಾಗ ಅತಿಕ್ರಮಣ; ಕುರ್ಕಿ ರಾಜೇಶ್ವರಿ ಆರೋಪ

ಕೋಲಾರ ತಾಲೂಕಿನ ನರಸಾಪುರ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗೆ...

Download Eedina App Android / iOS

X