ಚುನಾವಣಾ ಬಾಂಡ್ ದೇಣಿಗೆ ಮೂಲಕ ಕಾರ್ಪೊರೇಟ್ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳ ನಡುವೆ ‘ಕೊಡುಕೊಳ್ಳುವಿಕೆ’ ನಡೆದಿರುವ ಕುರಿತು ಎಸ್‌ಐಟಿ ತನಿಖೆಯನ್ನು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸಾಮಾನ್ಯ ಕ್ರಿಮಿನಲ್ ಕಾನೂನು ಪರಿಹಾರಗಳನ್ನು ಅನ್ವಯಿಸದಿದ್ದಾಗ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗೆಯೇ ಚುನಾವಣಾ ಬಾಂಡ್ ತನಿಖೆಗೆ ಎಸ್‌ಐಟಿ ರಚಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
“ಈ ರೀತಿಯ ವೈಯಕ್ತಿಕ ಸಮಸ್ಯೆಗಳನ್ನು ಬಹುಶಃ ಕಾನೂನಿನ ಅಡಿಯಲ್ಲಿ ಪರಿಹರಿಸಲು ನೋಡಬೇಕಾಗುತ್ತದೆ. ತನಿಖೆಗೆ ನಿರಾಕರಣೆ ಇದ್ದಲ್ಲಿ ಕಾನೂನಿನ ಅಡಿಯಲ್ಲಿ ಅಥವಾ ಆರ್ಟಿಕಲ್ 226 ರ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು” ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.
#BREAKING| SupremeCourt refuses to consitute SIT to probe into the Quid Pro Quo Arrangements In The EB Scheme
— Live Law (@LiveLawIndia) August 2, 2024
CJI: Individual grievances of this nature would perhaps have to be pursued on the basis of the remedies available under the law . Likewise where there is refusal to…