ನಾಲ್ವರು ವಲಸೆ ಕಾರ್ಮಿಕರನ್ನು ಸಾರ್ವಜನಿಕ ಶೌಚಾಲಯದಲ್ಲಿ ಇರಿಸಿ, ಗುತ್ತಿಗೆದಾರನೊಬ್ಬ ವಿಕೃತಿ ಮೆರೆದಿರುವ ಘಟನೆ ತಮಿಳುನಾಡಿನ ತಿರುಪುರದಲ್ಲಿ ನಡೆದಿದೆ. ಕಾರ್ಮಿಕರು ಶೌಚಾಲಯದಲ್ಲಿ ಅಡುಗೆ ಮಾಡಿಕೊಂಡು ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರ್ಮಿಕರಿಗೆ ಶೌಚಾಲಯದಲ್ಲಿ ವಸತಿ ನೀಡಿದ್ದ ಗುತ್ತಿಗೆದಾರಿನಿಗೆ ತಿರುಪುರ ಮುನ್ಸಿಪಲ್ ಕಾರ್ಪೊರೇಷನ್ ಕಮಿಷನರ್ ಪವನ್ ಕುಮಾರ್ ನೋಟಿಸ್ ಜಾರಿ ಮಾಡಿದ್ದಾರೆ.
ಕಳೆದೊಂದು ತಿಂಗಳಿಂದ ನಾಲ್ವರು ವಲಸೆ ಕಾರ್ಮಿಕರು ಶೌಚಾಲಯದಲ್ಲೇ ಜೀವನ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಲಸೆ ಕಾರ್ಮಿಕರೊಬ್ಬರು ಶೌಚಾಲಯದಲ್ಲಿ ತಾವು ಬದುಕುತ್ತಿರುವುದನ್ನು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ವಿಡಿಯೋವನ್ನು ನೋಡಿದ ನೆಟ್ಟಿಗರು ಗುತ್ತಿಗೆದಾರರ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ರಮಕ್ಕೆ ಆಗ್ರಹಿಸಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ, ಖಾಸಗಿ ಗುತ್ತಿಗೆದಾರನಿಗೆ ಪಾಲಿಕೆ ಆಯುಕ್ತರು ಗುರುವಾರ ನೋಟಿಸ್ ನೀಡಿದ್ದಾರೆ. ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ.
ಕಾರ್ಮಿಕರು ನೈರ್ಮಲ್ಯ ಕಾಮಗಾರಿಯಲ್ಲಿ ತೊಡಗಿಸಿದ್ದು, ಅವರನ್ನು ಅವರು ಕೆಲಸ ಮಾಡುತ್ತಿದ್ದ ಶೌಚಾಲಯದಲ್ಲಯೇ ಉಳಿಸಲಾಗಿದೆ ಎಂದು ವದಿಯಾಗಿದೆ. ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆ.