ಗರ್ಭಿಣಿಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ತೆರಳುವ ವೇಳೆ ಆಟೊದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಪಟ್ಟಣದ ಸಂತೆ ಬಜಾರ್ ರಸ್ತೆಯ ಮನೆಯೊಂದರ ಗರ್ಭಿಣಿಗೆ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ತಕ್ಷಣ ಆಟೋ ಕರೆಸಿದ್ದರು. ಆಟೊದಲ್ಲಿ ಮಹಿಳೆಯನ್ನು ಕೂರಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಹೆರಿಗೆ ನೋವು ಹೆಚ್ಚಾಗಿದ್ದು, ಹೀಗಾಗಿ ಚಾಲಕ ತಕ್ಷಣ ಮಾರ್ಗ ಮಧ್ಯದಲ್ಲಿ ಆಟೋ ನಿಲ್ಲಿಸಿದ್ದಾನೆ.
ನೆರೆ ಹೊರೆ ಮಹಿಳೆಯರು ಹಾಗೂ ಕುಟುಂಬದ ಸದಸ್ಯರು ಆಟೋ ಸುತ್ತ ಪರದೆ ಕಟ್ಟಿ ಹೆರಿಗೆಗೆ ಸಹಕಾರ ನೀಡಿದ್ದಾರೆ. ಮಹಿಳೆಯು ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅನಧಿಕೃತ ಬಡಾವಣೆ, ತೋಟ, ಹೋಂ ಸ್ಟೇ, ರೆಸಾರ್ಟ್ ತೆರವಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಆಶಾ ಕಾರ್ಯಕರ್ತೆಯರು ಮಹಿಳೆ ಹಾಗೂ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲು ನೆರವಾಗಿದ್ದಾರೆ.