ತುಮಕೂರು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಎಂ.ಆರ್.ಮಮತ (47) ಬೆಂಗಳೂರಿನಲ್ಲಿ ಶುಕ್ರವಾರ ಕೊನೆಯುಸಿರೆಳೆದರು.
ಕಳೆದ 19 ವರ್ಷಗಳಿಂದ ವಾರ್ತಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ತುಮಕೂರಿನಲ್ಲಿ ಸಹಾಯಕ ಹಿರಿಯ ನಿರ್ದೇಶಕಿಯಾಗಿ 2 ವರ್ಷದಿಂದ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಮಿದುಳು ರಕ್ತಸ್ರಾವದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಕಳೆದ ಕೆಲ ದಿನಗಳಿಂದ ರಜೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು.
ಮೃತರು ಪತಿ ಹಿರಿಯ ಪತ್ರಕರ್ತ ಎಚ್.ಆರ್.ರವೀಶ್, ಮಗ ಪ್ರಜ್ವಲ್ ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.
ತುಮಕೂರು ತಾಲೂಕಿನ ಹಾಲನೂರು ಗ್ರಾಮದ ಅವರ ತೋಟದಲ್ಲಿ ನಾಳೆ (ಆ.3) ಶನಿವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.