ಪಿಎಸ್‌ಐ ಸಾವು ಪ್ರಕರಣ : ಯಾದಗಿರಿಗೆ ಆಗಮಿಸಿದ ಸಿಐಡಿ ತಂಡ

Date:

Advertisements

ಯಾದಗಿರಿ ನಗರ ಠಾಣೆ ಪಿಎಸ್‌ಐ ಪರಶುರಾಮ್ ಅನುಮಾನಾಸ್ಪಾದ ಸಾವು ಪ್ರಕರಣದ ತನಿಖೆಗೆ ಸಿಐಡಿ ತಂಡ ಭಾನುವಾರ ಯಾದಗಿರಿ ನಗರಕ್ಕೆ ಆಗಮಿಸಿದೆ.

ಎರಡು ಕಾರುಗಳಲ್ಲಿ ಆಗಮಿಸಿರುವ ಸಿಐಡಿ ಡಿವೈಎಸ್ಪಿ ಪುನೀತ್‌ ನೇತ್ರತ್ವದ ತಂಡ ನಗರದ ಎಸ್.ಪಿ. ಕಚೇರಿಯಲ್ಲಿ ಮಾಹಿತಿ ಪಡೆಯುತ್ತಿದೆ. ಸಿಪಿಐ ಸುನಿಲ್ ಮೂಲಿಮನಿ ಗ್ರಾಮೀಣ ಠಾಣೆ ಪಿಎಸ್‌ಐ ಹನುಮಂತ ಬಂಕಲಗಿ ಜೊತೆಗಿದ್ದಾರೆ.

ಪಿಎಸ್ಐ ಪರಶುರಾಮ್ ಸಾವಿಗೆ ಸಂಬಂಧಿಸಿದಂತೆ ಯಾದಗಿರಿ ಕಾಂಗ್ರೆಸ್ ಶಾಸಕ ಚನ್ನರಟ್ಟಿ ಪಾಟೀಲ್ ತುನ್ನೂರ್ ಅವರ ಪುತ್ರ ಪಂಪನಗೌಡ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisements

ಪಿಎಸ್ಐ ಪರಶುರಾಮ್ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಶನಿವಾರ ಸಂಜೆ ಸಿಐಡಿಗೆ ವಹಿಸಿತ್ತು.

ಒಂದೇ ದಿನದಲ್ಲಿ ಯಾದಗಿರಿ ನಗರಕ್ಕೆ ತನಿಖೆ ತಂಡ ಆಗಮಿಸಿದೆ, ಯಾದಗಿರಿ ನಗರ ಪೊಲೀಸರಿಂದ ಪ್ರಕರಣದ ಸಂಪೂರ್ಣ ಮಾಹಿತಿ ಸಿಐಡಿ ತಂಡ ಪಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ ರೆಡ್ಡಿ ಗೌಡರ ಲಿಂಗಾಯತರ ಹಳೆಯ ಹೊಲಸು ಪಾಳೇಗಾರಿಕೆ ಇನ್ಜೂ ಜೀವಂತವಾಗಿರುವುದು ದುಃಖದ ವಿಷಯ.45 ವರ್ಷಗಳ ಹಿಂದೆ ಅದೇ ಜಿಲ್ಹೆಯ ಕೃಷ್ಣಾ ನದಿ ದಂಡೆಯ ಚನ್ನೂರು ಗೌಡನ ಮನೆತನದ ದಬ್ಬಾಳಿಕೆಯನ್ನ ಕಣ್ಣಾರೆ ನೋಡಿದ್ದೆ.ಹಾಗಂತ ಎಲ್ಲ ರೆಡ್ಡಿ ಗೌಡರು ಕೆಟ್ಟವರಲ್ಲ.ಯಾದಗಿರಿಯ ಡಾ‌.ಮಲಕರೆಡ್ಡಿ ಮನೆತನ,ವಿಶ್ವನಾಥರೆಡ್ಡಿ ಮುದ್ನಾಳರ ಮನೆತನಗಳು ಎಂದಿನಿಂದಲೂ ಪ್ರಗತಿಶೀಲ ನಿಲುವಿನ ಜೊತೆ ನಿಂತಿದ್ದನ್ನೂ ನೋಡಬಹುದು.
    ತುಣ್ಣೂರಿನ ಈ ಸನ್ನಿರೆಡ್ಡಿ ಗೌಡನನ್ನು ಹೆಡಮುರಿಗೆ ಕಟ್ಟಿ ಒದ್ದು ಒಳಗೆ ಹಾಕಬೇಕು.ಕಾಂಗ್ರೆಸ್ಸಿನವನಾದರೆ ಏನಂತೆ?

  2. ಆ ಊರಿನ ಮೂಲ ಹೆಸರು ತುಣ್ಣೂರು.ಹೇಳಲು ನಾಚಿಗೆ ತರಸತ್ತೆ ಅಂತ ಅದನ್ನ ತೊನ್ನೂರು ತುನ್ನೂರು ಅಂತ ಬದಲಿಸಲು ಊರವರು ಹರಸಾಹಸ ಮಾಡುತ್ತಿದ್ದಾರೆ.
    ನಾನಂತೂ ಅದನ್ನ ಈಗ ಮೂಲ ಹೆಸರಿನಿಂದಲೇ ಕರೀತೇನೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

Download Eedina App Android / iOS

X