ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪೌರಕಾರ್ಮಿಕರ ಮತ್ತು ನೌಕರರ ಸಂಘಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ಕೊಠಡಿ ಒದಗಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ ʼಈದಿನ.ಕಾಮ್ʼ ಜೊತೆಗೆ ಮಾತನಾಡಿ, ʼಪೌರಕಾರ್ಮಿಕರಿಗೆ ಕೊಠಡಿ ಒದಗಿಸುವ ಬಗ್ಗೆ 2022 ರಲ್ಲಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವ್ ಪಾಸ್ ಮಾಡಲಾಗಿದೆ. ಆದರೆ 2 ವರ್ಷ ಕಳೆದರೂ ಇಲ್ಲಿಯವರೆಗೆ ಪೌರಾಯುಕ್ತರು ಕೊಠಡಿ ನೀಡಲು ಮುಂದಾಗುತ್ತಿಲ್ಲʼ ಎಂದು ಬೇಸರ ವ್ಯಕ್ತಪಡಿಸಿದರು.
ʼಪೌರ ಕಾರ್ಮಿಕರು ಕಾರ್ಯ ಚಟುವಟಿಕೆ ನಡೆಸಲು ಕಾರ್ಮಿಕರ ಸಂಘಕ್ಕೆ ಒಂದು ಕೊಠಡಿ ನೀಡುವಂತೆ ಆದೇಶ ಮಾಡಬೇಕು. ಸದರಿ ಕೊಠಡಿಯ ಉದ್ಘಾಟಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರಿಗೆ ಮನವಿ ಸಲ್ಲಿಸಿದ್ದೇವೆʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಬಾಲೆಹೊಸೂರು ಗ್ರಾಮದ ರಸ್ತೆಯುದ್ಧಕ್ಕೂ ತಗ್ಗು ಗುಂಡಿಗಳು; ದುರಸ್ತಿಗೆ ಸ್ಥಳೀಯರ ಆಗ್ರಹ
ಈ ಸಂದರ್ಭದಲ್ಲಿ ಪೌರಕಾರ್ಮಿಕರಾದ ಬಸಪ್ಪ ಮಾದರ, ಗಾಳೆಪ್ಪಾ ದ್ವಾಸಲಕೇರಿ, ಸೋಮು ಮೊರಬದ, ಲಕ್ಷ್ಮೀ ಬೇತಾಪಲ್ಲಿ, ಜಮುನಾ ಬೆನಸಮಟ್ಟಿ, ಎಸ್ಟುರೆಮ್ಮ ಭಂಡಾರಿ, ಶರೀಫ್ ಮಸರಕಲ, ಮೈಲಾರಿ ದೊಡ್ಡಮನಿ, ಲಕ್ಷ್ಮೀ ವಾಲಿ, ಮಂಜುಳಾ ವಜ್ಜನವರ, ಶಂಕರ ರೋಣ, ನಾಗರಾಜ ಬೆಳಗುಂದಿ, ಆನಂದ ಸವಣೂರ, ರೇಣುಕಾ ಸಾಂಬ್ರಾಣಿ ಇದ್ದರು.