2019ರಲ್ಲೇ ಪೀಠ ತ್ಯಾಗದ ಬಗ್ಗೆ ಪತ್ರ ಬರೆದಿದ್ದ ಸಾಣೇಹಳ್ಳಿ ಶ್ರೀ

Date:

Advertisements

ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪೀಠದಿಂದ ನಿವೃತ್ತಿ ಘೋಷಿಸಿ ಮುಂದಿನ ಮರಿ ಅಥವಾ ಉತ್ತರಾಧಿಕಾರಿ ಘೋಷಣೆ ಮಾಡಬೇಕು. ಶ್ರೀಮಠದ ಏಕವ್ಯಕ್ತಿ ಡೀಡ್ ರದ್ದುಪಡಿಸಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಮೂಲ ಬೈಲಾ ಯಥವತ್ತಾಗಿ ಜಾರಿಗೊಳಿಸಬೇಕು ಎಂದು ಸಾದು ಲಿಂಗಾಯತ ಸಮಾಜ ನಿರ್ಣಯ ದಾವಣಗೆರೆಯಲ್ಲಿ ಭಾನುವಾರ ಸಭೆ ನಡೆಸಿ, ಕೈಗೊಂಡಿದೆ.

ಆದರೆ, 2019ರಲ್ಲೇ ಪೀಠ ತ್ಯಾಗದ ಬಗ್ಗೆ ಸಾಣೇಹಳ್ಳಿ ಶ್ರೀ ಪತ್ರ ಬರೆದಿರುವ ವಿಚಾರ ಮುನ್ನೆಲೆಗೆ ಬಂದಿದೆ.

ಸಾಣೇಹಳ್ಳಿ ಶ್ರೀಗಳು 2019ರ ನಾಟಕೋತ್ಸವದಲ್ಲಿ ತಮ್ಮನ್ನು ಪೀಠದ ಜವಾಬ್ದಾರಿಯಿಂದ ಬಿಡುಗಡೆಗೊಳಿಸಬೇಕೆಂದು ಸಂಘಕ್ಕೆ ಹಾಗೂ ಮೂಲ ಪೀಠಾಧಿಪತಿಗಳಿಗೆ ಪತ್ರ ಬರೆದಿದ್ದರು. ಈ ವಿಚಾರವು ಭಾನುವಾರ ದಾವಣಗೆರೆ ಹೊರವಲಯದ ಅಪೂರ್ವ ರೆಸಾರ್ಟ್‌ನಲ್ಲಿ ಅಖಿಲ ಭಾರತ ವೀರ‍ಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಪ್ರಸ್ತಾಪವಾಗಿರುವುದಾಗಿ ತಿಳಿದು ಬಂದಿದೆ.

Advertisements

ದಾವಣಗೆರೆಯಲ್ಲಿ ನಿನ್ನೆ “ತರಳಬಾಳು ಪೀಠ: ಅಂದು- ಇಂದು ಮುಂದು” ಎಂಬ ವಾಕ್ಯದಡಿ ಶ್ರೀಮಠದ ಸದ್ಭಕ್ತರ ಸಮಾಲೋಚನಾ ಸಭೆ ನಡೆಸಲಾಗಿದೆ.

pro 1

ಶಿವಕುಮಾರ ಶ್ರೀಗಳು ವಿಲ್ ಮಾಡಿರುವಂತೆ ಹಾಗೂ ಬೈಲಾ ಪ್ರಕಾರ ಬದಲಾವಣೆ ಮಾಡಿ ಹೊಸ ಪೀಠಾಧಿಪತಿಗಳ ನೇಮಕ ಆಗಬೇಕು. ಚಿತ್ರದುರ್ಗದ ಸಿರಿಗೆರೆ ಪೀಠಾಧಿಪತಿ ಹಾಗೂ ಸಾಣೇಹಳ್ಳಿಯ ಪೀಠಾಧಿಪತಿಗಳ ಬದಲಾವಣೆ ಆಗಬೇಕು. ಈಗಿರುವ ಇಬ್ಬರೂ ಶ್ರೀಗಳು ನಿವೃತ್ತಿ ಘೋಷಿಸಬೇಕು. 60 ವರ್ಷ ದಾಟಿದ ಬಳಿಕ ಪೀಠಾಧಿಪತಿ ಸ್ಥಾನ ಬಿಟ್ಟುಕೊಡಬೇಕೆಂಬ ನಿರ್ಣಯಕ್ಕೆ ಇಬ್ಬರೂ ಶ್ರೀಗಳು ಬದ್ಧರಾಗಬೇಕು ಎಂಬ ನಿರ್ಣಯವನ್ನು ಸಾದು ಲಿಂಗಾಯತ ಒಕ್ಕೂಟ ಅಂಗೀಕರಿಸಿದೆ.

1001199892

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, “ಈ ಹಿಂದೆಯೇ ಸಿರಿಗೆರೆ ಶ್ರೀಗಳು ಪೀಠ ತ್ಯಜಿಸುವ ಮಾತನಾಡಿದ್ದರು. ಆದರೆ, ಭಕ್ತರ ಒಕ್ಕೊರಲ ಒತ್ತಾಯದ ಮೇರೆಗೆ ಮುಂದುವರಿದಿದ್ದರು. ಶ್ರೀಗಳೇ ಬೇಡ ಎಂದರೂ ಮುಗ್ಧ ಭಕ್ತರು ಇದಕ್ಕೆ ತಡೆಯೊಡ್ಡಿದ್ದರು. ಇಂಥ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಶ್ರೀಗಳ ಮನವೊಲಿಸಿದ್ದರು. ಈಗ ಹಳೆಯ ಕಥೆ ಇದು. ಮೂರು ದಶಕಗಳ ಹಿಂದೆ ಮಾಡಿಸಿಕೊಂಡ ವ್ಯಕ್ತಿಯೊಬ್ಬರ ಡೀಡ್ ವಿಚಾರವೂ ಯಾರಿಗೂ ಗೊತ್ತಿರಲಿಲ್ಲ. ಈಗ ವಿಚಾರ ಬೆಳಕಿಗೆ ಬಂದಿದ್ದು, ಕೋರ್ಟ್ ನಲ್ಲಿ ಈ ವಿಷಯ ಇದೆ” ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಆಗಸ್ಟ್ 18ರಂದು ಸಿರಿಗೆರೆ ಶ್ರೀಗಳನ್ನು ಭೇಟಿ ಮಾಡಿ ಒಕ್ಕೂಟದ ನಿರ್ಣಯ ತಿಳಿಸೋಣ. ಈ ತೀರ್ಮಾನಕ್ಕೆ ಬದ್ಧರಾದರೆ ಸರಿ, ಇಲ್ಲದಿದ್ದರೆ ಒಕ್ಕೂಟದ ಮುಂದಿನ ನಡೆ ಏನಾಗಿರಬೇಕು ಎಂಬ ಕುರಿತಂತೆ ಸುದೀರ್ಘವಾಗಿ ಮತ್ತೊಮ್ಮೆ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರೋಣ ಎಂದು ಹೇಳಿದರು. ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು ಎನ್ನಲಾಗಿದೆ.

ಸಿರಿಗೆರೆ ಮಠಕ್ಕೆ ಕೋಟ್ಯಂತರ ಭಕ್ತರು ದೇಣಿಗೆ ನೀಡಿದ್ದಾರೆ. ಆದರೆ, ಸುಮಾರು 400 ಕೋಟಿ ಹಣ ಭಕ್ತರ ಕಾಣಿಕೆ ರೂಪದಲ್ಲಿ ಬಂದಿದ್ದು, ಒಬ್ಬ ವ್ಯಕ್ತಿಯ ಹೆಸರಲ್ಲಿದ್ದರೆ ಯಾರೂ ಒಪ್ಪಲು ಸಾಧ್ಯ. ಯಾವ ಸಮುದಾಯ, ಸಮಾಜವೂ ಒಪ್ಪುವುದಿಲ್ಲ. ಈ ವಿಚಾರ ದೊಡ್ಡದು ಮಾಡುವುದು ಬೇಡ. ಶಾಂತಿಯುತವಾಗಿ ಚರ್ಚಿಸಿ ಬಗೆಹರಿಸೋಣ ಎಂದು ಶಾಮನೂರು ಶಿವಶಂಕರಪ್ಪ ಸಲಹೆ ನೀಡಿದ್ದಾರೆ.

ಸಭೆಯಲ್ಲಿ ಮಾಜಿ ಸಚಿವ ಎಸ್ ಎ. ರವೀಂದ್ರನಾಥ್, ಮಾಜಿ ಸಚಿವ ಬಿ. ಸಿ. ಪಾಟೀಲ್, ಹರಿಹರ ಶಾಸಕ ಬಿ.ಪಿ.ಹರೀಶ್, ಸಮಾಜದ ಮುಖಂಡರಾದ ಅಣಬೇರು ರಾಜಣ್ಣ, ಹೆಚ್. ಎನ್. ಶೇಖರಪ್ಪ, ಚೇತನ ಎಲೇಬೇತೂರು, ಮಹೇಶ ಪಲ್ಲಾಗಟ್ಟೆ, ಎಂಎಲ್‌ಸಿ ರುದ್ರೇ ಗೌಡ, ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಟಿ.ಗುರುಸಿದ್ದನಗೌಡ, ಮಾಡಾಳ್ ಮಲ್ಲಿಕಾರ್ಜುನ್, ಜೆ.ಆರ್‌.ಷಣ್ಮುಗಪ್ಪ, ಎಚ್.ಎನ್.ಚಂದ್ರಶೇಖರಪ್ಪ, ಬೆನಕಪ್ಪ, ಪ್ರೊ.ಸಿದ್ದಪ್ಪ ಮತ್ತಿತರರು ಹಾಜರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X