ಸಮೂಹ ಮಾಧ್ಯಮಗಳು ಯಾವಾಗಲೂ ಸಮಾಜದ ಮಹತ್ವದ ಸ್ತಂಭಗಳಾಗಿ ಉಳಿದಿವೆ ಹಾಗೂ ಶೈಕ್ಷಣಿಕ ಸಾಮಾಜಿಕ ಕುರಿತಂತೆ ಎಲ್ಲ ಕ್ಷೇತ್ರಗಳ ಪ್ರಚಲಿತ ವಿದ್ಯಮಾನಗಳ ಬಗ್ಗೆ ವರದಿ ನೀಡುವುದಲ್ಲದೆ ಸಮಾಜದ ಸ್ವಾಸ್ಥ್ಯವನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮಹಿಳಾ ಪ್ರಗತಿಪರ ಸಾಹಿತಿ ಜ್ಯೋತಿ ಡಿ ಬೊಮ್ಮಾ ಹೇಳಿದರು.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದಾಪುರದ ಸಮಾಜ ಕಲ್ಯಾಣ ಇಲಾಖೆಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಭಾರತ ಜನ-ಸಂಗಮ ಸಮಿತಿ ಹಾಗೂ ಯೂನಿಟಿ ಆಫ್ ಮೂಲನಿವಾಸಿ ಬಹುಜನ ಸಂಘಟನೆಯಿಂದ ಹಮ್ಮಿಕೊಂಡಿದ್ದ ʼವಿದ್ಯಾರ್ಥಿಗಳ ಮೇಲೆ ಸಮೂಹ ಮಾಧ್ಯಮಗಳ ಪ್ರಭಾವ ಸರಣಿʼ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳು ಪ್ರಮುಖವಾದ ಸ್ಥಾನವನ್ನು ಅಲಂಕರಿಸಿವೆ ಅದಕ್ಕಾಗಿ ವಿದ್ಯಾರ್ಥಿಗಳು ಸಮೂಹ ಮಾಧ್ಯಮಗಳ ಸದುಪಯೋಗ ಪಡೆದುಕೊಳ್ಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಮೂಹ ಮಾಧ್ಯಮಗಳಿಂದ ದುರುಪಯೋಗ ಪಡೆದುಕೊಂಡು ಜೀವನ ವ್ಯರ್ಥಮಾಡಿಕೊಳ್ಳುತ್ತಿದ್ದಾರೆ. ತಮ್ಮ ಜೀವನದ ಉತ್ತಮ ಭವಿಷ್ಯಕ್ಕಾಗಿ ಮಾಧ್ಯಮಗಳನ್ನು ಬಳಸಿಕೊಂಡಾಗ ಮಾತ್ರ ಆದರ್ಶ ವ್ಯಕ್ತಿಗಳಾಗಲು ಸಾಧ್ಯ” ಎಂದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಹಾಸ್ಟೆಲ್‌ನಲ್ಲಿ ಫಂಗಸ್ ಸೋಂಕು; ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಅನಾರೋಗ್ಯ
ಚಿಂಚೋಳಿ ಡಿವೈಎಸ್‌ಪಿ ಸಂಗಮೇಶ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನರಸಮ್ಮ ಆವುಂಟಿ, ವೀರಣ್ಣಾ ಸುಗಂಧಿ, ಶೈಲಜಾ ಸಾಗರ, ಆನಂದಿ ಮಾತನಾಡಿದರು. ಮಾರುತಿ ಗಂಜಗಿರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೋಪಾಲ ಗಾರಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಿಟಿಜನ್ ಜರ್ನಲಿಸ್ಟ್: ಮಾರುತಿ ಗಂಜಗಿರಿ