ಚಿತ್ರದುರ್ಗ | ಯಲ್ಲದಕೆರೆಗೆ ಬಸ್‌ ವ್ಯವಸ್ಥೆ ಮಾಡುವಂತೆ ವಿದ್ಯಾರ್ಥಿಗಳ ಆಗ್ರಹ

Date:

Advertisements

ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದಿರುವ ಕಾರಣ ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ಹೋಗಲು ಸಾಧ್ಯವಾಗುತ್ತಿಲ್ಲ. 10 ಗಂಟೆಯಾದರೂ ವಿದ್ಯಾರ್ಥಿಗಳು ಯಲ್ಲದಕೆರೆ ಬಳಿಯೇ ಇರುತ್ತಾರೆ. ಇದರಿಂದ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ರಸ್ತೆಯಲ್ಲಿಯೇ ಕೆಲಕಾಲ ಪ್ರತಿಭಟನೆ ನಡೆಸಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಯಲ್ಲದಕೆರೆ ಬಳಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, “ಯಲ್ಲದಕೆರೆ ವ್ಯಾಪ್ತಿಯಿಂದ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿರಿಯೂರು ಕಾಲೇಜಿಗೆ ಬರುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ಸಮರ್ಪಕ ಬಸ್‌ ವ್ಯವಸ್ಥೆ ಇಲ್ಲ” ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“9 ಗಂಟೆಗೆ ಬರಬೇಕಾದ ಯಡಿಯೂರು-ಗದಗ ಗಾಡಿ, 9-15ಕ್ಕೆ ಬರುತ್ತದೆ. 9-20ಕ್ಕೆ ಬರಬೇಕಾದ ಗಾಡಿ 9-35ಕ್ಕೆ ಬರುತ್ತದೆ. ಸಮಯಕ್ಕೆ ಸರಿಯಾಗಿ ಬಸ್‌ಗಳು ಬರದ ಕಾರಣ ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. 8-45ಕ್ಕೆ ಯಲ್ಲಾಡಕೆರೆಗೆ ಬಸ್ ಬಂದರೆ, ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಹಿರಿಯೂರು ತಲುಪಲು ಸಾಧ್ಯವಾಗುತ್ತದೆ. 200ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಇರುವುದರಿಂದ ಒಂದೇ ಬಸ್‌ ಸಾಕಾಗುವುದಿಲ್ಲ. ಹಾಗಾಗಿ ಈಗಿರುವ ಬಸ್ಸಿನ ಜತೆಗೆ ಇನ್ನೆರೆಡು ಬಸ್‌ಗಳ ವ್ಯವಸ್ಥೆ ಮಾಡಬೇಕು” ಎಂದು ಒತ್ತಾಯಿಸಿದರು.‌

Advertisements

ಹಳ್ಳಿಯಿಂದ ಬರುವ ವಿದ್ಯಾರ್ಥಿಗಳಿಗೆ ಒಂದು ಪ್ರತ್ಯೇಕ ಬಸ್ ಬೇಕು, ಹುಳಿಯಾರ್-ಹಿರುಯೂರು ಮಾರ್ಗದಲ್ಲಿ ಒಂದು ಬಸ್‌ ಸಂಚರಿಸಬೇಕು. ಯಲ್ಲದಕೆರೆಗೆ 8-30ಕ್ಕೆ ಬಸ್‌ ಬರಬೇಕು, ದಸುಡಿ ಮಾರ್ಗದಿಂದ, ಬ್ಯಾರಾಮಡು, ಚಿಗಳಿಕಟ್ಟೆ, ಹಂದಿಗನಾಡು, ಯಲ್ಲದಕೆರೆ ಮಾರ್ಗವಾಗಿ 8-45ಕ್ಕೆ ಯಲ್ಲದಕೆರೆಗೆ ಬಂದರೆ, ಹಿರಿಯೂರಿಗೆ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತದೆ. 200ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಇರುವುದರಿಂದ ಈಗ ಇರುವ ಬಸ್‌ನ ಜತೆಗೆ ಇನ್ನರೆಡು ಬಸ್ ವ್ಯವಸ್ಥೆ ಮಾಡಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಗದಗ | ಪಿಎಸ್‌ಐ ಪರಶುರಾಮ್ ಸಾವು ಪ್ರಕರಣ; ಆರೋಪಿಗಳ ಬಂಧನಕ್ಕೆ ಛಲವಾದಿ ಮಹಾಸಭಾ ಆಗ್ರಹ

“ಮಧ್ಯಾಹ್ನ 2-30ಕ್ಕೆ ಬಾಗಲಕೋಟೆ-ಮೈಸೂರ್ ಗಾಡಿ ಹಿರಿಯೂರಿಂದ ಹುಳಿಯಾರ್ ಮಾರ್ಗವಾಗಿ ಮೈಸೂರಿಗೆ ಹೋಗುತ್ತದೆ. ಅದಾದ ಬಳಿಕ ಯಾವುದೇ ಬಸ್ ಇಲ್ಲ. 2-30ಕ್ಕೆ ಮೈಸೂರು ಗಾಡಿ ಹೋದ ನಂತರ ಸಂಜೆ 6-30ರವರೆಗೂ ಯಾವುದೇ ಬಸ್ ಇಲ್ಲ. ಆದ್ದರಿಂದ ವಿದ್ಯಾರ್ಥಿಗಳು ಶಾಲೆ-ಕಾಲೇಜು ಮುಗಿಸಿ ಸಂಜೆ 7ರವರೆಗು ಹಿರಿಯೂರಿನಲ್ಲೇ ಇರುತ್ತಾರೆ. 4 ಗಂಟೆಗೆ ಸಿಂಧನೂರು-ಮೈಸೂರು ಗಾಡಿ ಬರುತ್ತಿತ್ತು. ಈಗ ಆ ಗಾಡಿ ಬರುತ್ತಿಲ್ಲ. 4-30ಕ್ಕೆ ತುರುವೇಕೆರೆ-ಮೈಸೂರು ಗಾಡಿ ಬರುತಿತ್ತು ಆ ಗಾಡಿಯೂ ಬರುತ್ತಿಲ್ಲ. ದಯವಿಟ್ಟು ವಿದ್ಯಾರ್ಥಿಗಳ ಭವಿಷ್ಯವನ್ನು ಮನಗಂಡು ಬಸ್ ವ್ಯವಸ್ಥೆ ಮಾಡಿಸಬೇಕು” ಎಂದು ಮನವಿ ಮಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

Download Eedina App Android / iOS

X