ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತಾರಾನಗರ ಗ್ರಾಮದ ಹಿಂಭಾಗದ ದೋಣಿಮಲೈ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿನ ಗುಹೆಯೊಳಗೆ ಹೋಗಲು ಸುರಂಗ ನಿರ್ಮಾಣ ಮಾಡಿ ನಿಧಿ ಶೋಧ ನಡೆಸಿದ ಆಂಧ್ರಪ್ರದೇಶದ ಐವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
“ನಿಧಿ ಶೋಧಕ್ಕೆ ಒಟ್ಟು 11 ಜನರ ತಂಡ ಬಂದಿತ್ತು. ಅದರಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಶ್ರೀನಿವಾಸ್(45), ಆಕಾಶ್(20), ಶ್ರೀನಿವಾಸ್, ವೆಂಕಟ್ ರಾವ್, ಗದಗ ಮೂಲದ ಭಗತ್ ದೊಡ್ಡಮನಿ ಅವರನ್ನು ಬಂಧಿಸಲಾಗಿದೆ. ಉಳಿದ ಆರು ಮಂದಿ ಪರಾರಿಯಾಗಿದ್ದಾರೆ” ಎಂದು ಸಂಡೂರಿನ ಪ್ರಾದೇಶಿಕ ಅರಣ್ಯಾಧಿಕಾರಿ ಸಯ್ಯದ್ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಅಗ್ನಿ ಅವಘಡದಿಂದ ಯುವಕ ಸಾವು; ಪರಿಹಾರಕ್ಕೆ ಆಗ್ರಹ
“ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಪೊಲೀಸರ ವಿಶೇಷ ತಂಡ ರಚನೆ ಮಾಡಲಾಗಿದೆ” ಎಂದು ತಿಳಿಸಿದರು.
ವರದಿ : ಸಿಟಿಜ಼ನ್ ಜರ್ನಲಿಸ್ಟ್- ರಾಧಾಕೃಷ್ಣ