ಅಪ್ರಾಪ್ತ ಮುಸ್ಲಿಂ ವಯಸ್ಸಿನ ಯುವಕರ ಕೈಯಲ್ಲಿ ನನ್ನ ಹತ್ಯೆ ಮಾಡಿಸಲು, ನನ್ನ ವಿರೋಧಿಗಳು ಸಂಚು ರೂಪಿಸಿದ್ದಾರೆ ಎಂದು ಧಾರವಾಡದ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯೀಲ್ ತಮಟಗಾರ ಆರೋಪಿಸಿದರು.
ಧಾರವಾಡದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ವಿದ್ಯಾಕೇಂದ್ರ.ಇಲ್ಲಿನ ಶಾಂತಿ ಸುವ್ಯವಸ್ಥೆ ಕಾಪಾಡಲು ಅವಳಿ ನಗರದ ಪೊಲೀಸರು ಮುಂದಾಗಬೇಕಿದೆ. ದುಶ್ಚಟಗಳಿಂದ ಯುವಕರನ್ನು ಹಾದಿ ತಪ್ಪಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಈ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅವಳಿ ನಗರದ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರಿಗೆ ದೂರು ನೀಡಲಾಗುವುದು ಎಂದರು.
ನನಗೆ ಜೀವ ಭಯ ಇರುವುದು ನಿಜ. ನಾನು ಯಾರ ಮೇಲೂ ಆರೋಪ ಮಾಡುತ್ತಿಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷದಲ್ಲೂ ಶತ್ರುಗಳಿದ್ದಾರೆ. ರಾಜಕೀಯದಲ್ಲಿ ನನ್ನನು ಮುಗಿಸಲು ಪ್ರಯತ್ನ ನಡೆಯುತ್ತಿದೆ. ಯಾರು ಈ ಕುತಂತ್ರದ ಹಿಂದೆ ಇದ್ದಾರೆಂಬುದು ಪೊಲೀಸರು ತನಿಖೆ ನಡೆಸಿ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪೊಲೀಸರಿಗೆ ಈ ಕುರಿತು ಎಲ್ಲ ಮಾಹಿತಿ ನೀಡಲಾಗಿದೆ. ನಶೆಯಲ್ಲಿ ಬಂದಿದ್ದ ಅಪ್ರಾಪ್ತ ವಯಸ್ಸಿನ ಯುವಕರ ಗುಂಪೊಂದು ನಶೆಯಲ್ಲಿ ನನ್ನನ್ನು ಕೊಲ್ಲುವ ಮಾತುಗಳನ್ನು ಆಡಿದ್ದಾರೆ. ಅವರು ನನಗೆ ಪರಿಚಯವಿಲ್ಲ. ಈ ಹಿಂದೆಯೂ ಸಹ ನನ್ನ ಹತ್ಯೆಗೆ ಯತ್ನಿಸಿದ್ದರು. ಇದೀಗ ಮುಸ್ಲಿಂ ಯುವಕರಿಗೆ ಸುಫಾರಿ ನೀಡಲಾಗಿದೆ ಎಂದರು.
