ತರಬೇತಿಗೆ ಆಗಮಿಸಿದ ಶಿಕ್ಷಕಿ ಜೊತೆಗೆ ಅನುಚಿತವಾಗಿ ವರ್ತಿಸಿದ ರಾಯಚೂರು ಸಮೀಪದ ಯರಮರಸ್ ಸರ್ಕಾರಿ ಆದರ್ಶ ವಿದ್ಯಾಲಯದ ಶಿಕ್ಷಕ ಮೆಹಬೂಬ್ ಅಲಿ ಅವರನ್ನು ಅಮಾನತು ಮಾಡಲಾಗಿದೆ.
ಆರೋಪಿ ಶಿಕ್ಷಕ ಮೆಹಬೂಬ್ ಅಲಿ ಶಿಕ್ಷಕಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ. ಇದರಿಂದ ಶಿಕ್ಷಕಿಯ ಸಂಬಂಧಿಕರು ಸೋಮವಾರ ಶಾಲೆಗೆ ತೆರಳಿ ಶಿಕ್ಷಕನಿಗೆ ಬಟ್ಟೆ ಹರಿದು ಹೋಗುವಂತೆ ಥಳಿಸಿ, ಕಾಲಿಗೆ ಬೀಳಿಸಿ ಕ್ಷಮೆ ಕೇಳುವಂತೆ ಮಾಡಿದ್ದಾರೆ. ಶಿಕ್ಷಕ ಶಿಕ್ಷಕಿ ಕಾಲಿಗೆ ಬಿದ್ದಿರುವ ವಿಡಿಯೋ ವೈರಲ್ ಆಗಿತ್ತು.
ಶಿಕ್ಷಕನ ಕಿರುಕುಳಕ್ಕೆ ಒಳಗಾದ ಶಿಕ್ಷಕಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದರು. ದೂರಿನ್ವಯ ಪರಿಶೀಲನೆ ನಡೆಸಿದ ಬಿಇಒ ಶಿಕ್ಷಕನ ತಪ್ಪೊಪ್ಪಿಗೆ ಪತ್ರ ಉಲ್ಲೇಖಿಸಿ ಅಮಾನತಿಗೆ ಶಿಫಾರಸು ಮಾಡಿದರು.
ಬಿಇಒ ನೀಡಿದ ವರದಿಯನ್ನು ಆಧರಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಡಿ.ಬಡಿಗೇರ್ ಇಲಾಖೆ ವಿಚಾರಣೆ ಕಾಯ್ದಿರಿಸಿ ತಕ್ಷಣಕ್ಕೆ ಬರುವಂತೆ ಆದೇಶ ಹೊರಡಿಸಿದ್ದಾರೆ.