ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕನ್ನಡಿಗ ದೊಡ್ಡ ಗಣೇಶ್ ನೇಮಕ

Date:

Advertisements

ಟೀಮ್ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ದೊಡ್ಡ ಗಣೇಶ್ ಅವರು ಕೀನ್ಯಾ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ. 2012-13 ರಲ್ಲಿ ಗೋವಾ ತಂಡದ ಕೋಚ್ ಆಗಿ ಕರ್ನಾಟಕ ವೇಗಿ ದೊಡ್ಡ ಗಣೇಶ್ ಕಾರ್ಯ ನಿರ್ವಹಿಸಿದ್ದರು,

ದೊಡ್ಡ ಗಣೇಶ್ ಅವರ ನೇತೃತ್ವದಲ್ಲಿ ಕೀನ್ಯಾ ತಂಡವು ಮುಂಬರುವ ಐಸಿಸಿ ಡಿವಿಷನ್ 2 ಚಾಲೆಂಜ್ ಲೀಗ್​​ನಲ್ಲಿ ಕಣಕ್ಕಿಳಿಯಲಿದೆ. ಈ ಲೀಗ್​ನಲ್ಲಿ ಕೀನ್ಯಾ ತಂಡದ ಎದುರಾಳಿಗಳಾಗಿ ಪಪುವಾ ನ್ಯೂಗಿನಿಯಾ, ಕತಾರ್, ಡೆನ್ಮಾರ್ಕ್ ಮತ್ತು ಜರ್ಸಿ ತಂಡಗಳು ಕಾಣಿಸಿಕೊಳ್ಳಲಿದೆ.

ಅಕ್ಟೋಬರ್ ತಿಂಗಳಲ್ಲಿ ಟಿ20 ವಿಶ್ವಕಪ್ ಆಫ್ರಿಕಾ ವಿಭಾಗದ ಅರ್ಹತಾ ಸುತ್ತು ನಡೆಯಲಿದ್ದು, ಈ ಸುತ್ತಿನಲ್ಲಿ ಕೀನ್ಯಾ ತಂಡ ಕಾಣಿಸಿಕೊಳ್ಳಲಿದೆ. ಹೀಗಾಗಿ ಒಂದು ಕಾಲದ ಬಲಿಷ್ಠ ತಂಡ ಎನಿಸಿಕೊಂಡಿದ್ದ ಕೀನ್ಯಾ ತಂಡವನ್ನು ಮತ್ತೆ ಮುನ್ನಲೆಗೆ ತರುವ ಮಹತ್ವದ ಜವಾಬ್ದಾರಿ ದೊಡ್ಡ ಗಣೇಶ್ ಅವರ ಮುಂದಿದೆ.

Advertisements

ಈ ಸುದ್ದಿ ಓದಿದ್ದೀರಾ? ಪ್ಯಾರಿಸ್ ಒಲಿಂಪಿಕ್ಸ್‌ಗೆ ವರ್ಣರಂಜಿತ ತೆರೆ: ಲಾಸ್ ಏಂಜಲೀಸ್‌ಗೆ ಧ್ವಜ ಹಸ್ತಾಂತರ

1990-2000 ರಲ್ಲಿ ದೇಶೀಯ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ್ದ ದೊಡ್ಡ ಗಣೇಶ್ ಟೀಮ್ ಇಂಡಿಯಾ ಪರ ಒಟ್ಟು 5 ಪಂದ್ಯಗಳನ್ನಾಡಿದ್ದಾರೆ. ಭಾರತದ ಪರ 4 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕರ್ನಾಟಕ ವೇಗಿ 5 ವಿಕೆಟ್ ಕಬಳಿಸಿದ್ದರು. ಹಾಗೆಯೇ 1997 ರಲ್ಲಿ ನಡೆದ ಝಿಂಬಾಬ್ವೆ ವಿರುದ್ಧ ಏಕೈಕ ಏಕದಿನ ಪಂದ್ಯವಾಡಿದ್ದ ದೊಡ್ಡ ಗಣೇಶ್ ಅವರು ಒಂದು ವಿಕೆಟ್ ಪಡೆದಿದ್ದರು.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 104 ಪಂದ್ಯಗಳಲ್ಲಿ 20355 ಎಸೆತಗಳನ್ನು ಎಸೆದಿರುವ ದೊಡ್ಡ ಗಣೇಶ್ 10739 ರನ್​ಗಳನ್ನು ನೀಡಿ 365 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 89 ಲೀಸ್ಟ್ ಎ ಕ್ರಿಕೆಟ್​ನಲ್ಲಿ 4346 ಎಸೆತಗಳ ಮೂಲಕ ಒಟ್ಟು 128 ವಿಕೆಟ್ ಉರುಳಿಸಿದ್ದಾರೆ.ವಿಶೇಷ ಎಂದರೆ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ದೊಡ್ಡ ಗಣೇಶ್ 6 ಬಾರಿ 10 ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 20 ಬಾರಿ 5 ಕ್ಕೂ ಹೆಚ್ಚು ವಿಕೆಟ್ ಉರುಳಿಸಿ ಕರ್ನಾಟಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯಾಕಪ್​ಗೆ ಅಚ್ಚರಿಯ ಭಾರತ ತಂಡ ಪ್ರಕಟ; ಹಲವರಿಗೆ ಕೊಕ್‌, ಪ್ರಮುಖರ ಆಗಮನ

ಮಹತ್ವದ ಟಿ20 ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ...

ಏಷ್ಯನ್ ಚಾಂಪಿಯನ್‌ಶಿಪ್‌ | 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚು ಗೆದ್ದ ಮನು ಭಾಕರ್

ಕಝಾಕಿಸ್ತಾನದ ಶಿಮ್ಕೆಂಟ್‌ನಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 10 ಮೀಟರ್...

ಬುಲಾ ಚೌಧರಿ ಪದ್ಮಶ್ರೀ ಪದಕ ಕಳವು: ‘ಎಲ್ಲವನ್ನೂ ಕಳೆದುಕೊಂಡೆ’ ಎಂದ ಈಜುಪಟು

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಮ್ಮ ಪೂರ್ವಜರ ಮನೆಯಿಂದ ಪದ್ಮಶ್ರೀ ಪದಕ...

RCBಯದ್ದು ಕಳ್ಳ ಒಪ್ಪಂದ; ಆರ್‌ ಅಶ್ವಿನ್ ಬಹಿರಂಗ ಟೀಕೆ

2025ರ ಐಪಿಎಲ್‌ ಟೂರ್ನಿಗಾಗಿ ನಡೆದ ಮೆಗಾ ಹರಾಜಿನ ಸಮಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್...

Download Eedina App Android / iOS

X