ಸರ್ಕಾರಿ ನೌಕರರು ಈ ಹಿಂದೆ ನೀಲಿ ಬಣ್ಣದ ಐಡಿ ಟ್ಯಾಗ್ ಹಾಕುತ್ತಿದ್ದರು. ಆದರೆ ಇದೀಗ ಸರ್ಕಾರ ಹೊಸ ಸುತ್ತೋಲೆ ಹೊರಡಿಸಿದ್ದು, ಕೆಂಪು ಹಾಗೂ ಹಳದಿ ಬಣ್ಣದ ಟ್ಯಾಗ್ ಹಾಕುವುದನ್ನು ಕಡ್ಡಾಯಗೊಳಿಸಿದೆ.
ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷಗಳು ಪೂರೈಸಿದೆ. ಇಂತಹ ಸಂದರ್ಭದಲ್ಲಿ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಅಭಿಯಾನದಡಿಯಲ್ಲಿ ರಾಜ್ಯದ ಎಲ್ಲ ಸರ್ಕಾರಿ ನೌಕರರು ಕೆಂಪು ಹಾಗೂ ಹಳದಿ ಬಣ್ಣದ ಕೊರಳುದಾರ ( ಟ್ಯಾಗ್) ಹೊಂದಿದ ಗುರುತಿನ ಚೀಟಿಯನ್ನು ಧರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು, ನಿಗಮ ಮಂಡಳಿ, ನಿರ್ದೇಶನಾಲಯ, ಆಯುಕ್ತಾಲಯ ಹಾಗೂ ಸರ್ಕಾರಿ ಸ್ವಾಮ್ಯದ ಎಲ್ಲ ಕಚೇರಿಗಳಲ್ಲಿ ಎಲ್ಲ ಅಧಿಕಾರಿಗಳು/ಸಿಬ್ಬಂದಿಗಳಿಗೆ ಕೆಂಪು ಹಳದಿ ಬಣ್ಣದ ಟ್ಯಾಗ್ ಒದಗಿಸಿಕೊಡಬೇಕು ಎಂದು ಸೂಚಿಸಲಾಗಿದೆ.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು ಸಿಎಂ ಸಿದ್ದರಾಮಯ್ಯ ಪದೇ ಪದೆ ಹೇಳುತ್ತಿರುತ್ತಾರೆ. ಇದೀಗ ಸರ್ಕಾರಿ ನೌಕರರ ಐಡಿ ಟ್ಯಾಗ್‌ನಲ್ಲಿ ಕರ್ನಾಟಕದ ಬಾವುಟದ ಬಣ್ಣ ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವುದು ಕನ್ನಡಿಗರು ಹೆಮ್ಮೆ ಪಡಬೇಕಾದ ಸಂಗತಿಯಾಗಿದೆ.

Yas good work
ಅದ್ಭುತ ಸಂಗತಿ! ಇದು ಮೊದಲಿಗೆ ಕನ್ನಡ ಭಾಷೆಯ ಚಿಂತಕರಿಗೆ ಹಾಗೂ ಚಳುವಳಿಗಾರರಿಗೆ ಹೊಳೆಯ ಬೇಕಿತ್ತು. ಆದರೆ ಸಾಹಿತ್ಯ ಹಾಗೂ ಚಳುವಳಿಯ ಪ್ರಭಾವ ಹೊಂದಿರುವ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಹೊಳೆದಿರುವುದು ಮತ್ತೊಂದು ಭಾಗ್ಯದ ಸಂಗತಿಯಾಗಿದೆ. ಸರ್ಕಾರಕ್ಕೆ ಅಭಿನಂದನೆಗಳು ಮತ್ತು ಧನ್ಯವಾದಗಳು! ಇನ್ನು ಹಳದಿ ಕೆಂಪು ಕೊರಳ ಪಟ್ಟಿ,ಸರ್ಕಾರಿ ಅಧಿಕಾರಿಗಳ ಕೊರಳಲ್ಲಿ ರಾರಾಜಿಸಲಿ! ಹಾಗೆಯೇ, ಸರ್ಕಾರಿ ನೌಕರರರಲ್ಲದವರಿಗೂ ಅದೇ ಹಳದಿ ಕೆಂಪು ಕೊರಳ ಪಟ್ಟಿಯನ್ನು ಕೊಂಚ ಭಿನ್ನತೆಯೊಂದಿಗೆ ಧರಿಸಲು ಚಿಂತಿಸಬೇಕು.