ಹರಿಯಾಣದ ಗುರುಗ್ರಾಮದ ಎಲ್ಲಾ ಮಾಲ್‌ಗಳಿಗೆ ಬಾಂಬ್ ಬೆದರಿಕೆ ಇಮೇಲ್ ಮಾಡಲಾಗಿದ್ದು, ಮಾಲ್‌ಗಳಿಂದ ಜನರನ್ನು ಸ್ಥಳಾಂತರಿಸಲಾಗಿದೆ. ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಹಲವಾರು ಮಾಲ್‌ಗಳಿಗೆ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಬ್ ಸ್ಕ್ವಾಡ್, ಪೊಲೀಸರು ಮತ್ತು ಅಗ್ನಿಶಾಮಕ ದಳಗಳು ಮಾಲ್‌ಗಳಿಗೆ ಧಾವಿಸಿ ಮಾಲ್‌ನಲ್ಲಿದ್ದ ಜನರನ್ನು ಸ್ಥಳಾಂತರಿಸಿದ್ದಾರೆ. ಸದ್ಯ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನು ಓದಿದ್ದೀರಾ? ಕಲಬುರಗಿ: ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ಈ ಬಗ್ಗೆ ಎಎನ್‌ಐಗೆ ಮಾಹಿತಿ ನೀಡಿರುವ ಗುರುಗ್ರಾಮದ ಮುಖ್ಯ ನಾಗರಿಕ ರಕ್ಷಣಾ ತಂಡದ ಮೋಹಿತ್ ಶರ್ಮಾ, “ಗುರುಗ್ರಾಮದ ಎಲ್ಲಾ ಮಾಲ್‌ಗಳಿಗೆ ಬಾಂಬ್ ಹಾಕುವ ಬಗ್ಗೆ ಜಿಲ್ಲಾಡಳಿತಕ್ಕೆ ಬೆಳಗ್ಗೆ 10 ಗಂಟೆ ಸುಮಾರಿಗೆ ಇಮೇಲ್ ಬಂದಿದೆ. ಇಮೇಲ್ ಬಂದ ನಂತರ ಜಿಲ್ಲಾಡಳಿತವು ಮಾಲ್‌ಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಪೊಲೀಸ್ ಆಡಳಿತ, ಶ್ವಾನ ದಳ, ನಾಗರಿಕ ರಕ್ಷಣಾ ತಂಡ ಶೋಧ ಕಾರ್ಯದಲ್ಲಿ ತೊಡಗಿದೆ” ಎಂದು ಹೇಳಿದ್ದಾರೆ.
ಇನ್ನು ಆಂಬಿಯನ್ಸ್ ಮಾಲ್ ಆಡಳಿತಕ್ಕೂ ಇಮೇಲ್ ಮೂಲಕ ಬೆದರಿಕೆ ಬಂದಿದೆ. “ಕಟ್ಟಡದಲ್ಲಿರುವ ಎಲ್ಲರನ್ನೂ ಕೊಲ್ಲುತ್ತೇವೆ” ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದ್ದು, ಬಾಂಬ್ ಬೆದರಿಕೆ ಹಾಕಲಾಗಿದೆ.
#WATCH | Gurugram, Haryana: Visitors and staff members have been evacuated from malls after the district administration received a bomb threat to all the malls in Gurugram via email.
— ANI (@ANI) August 17, 2024
Visuals from outside Ambience Mall. https://t.co/yQTRGbK8YK pic.twitter.com/HUs03kfP40
