ಶಕ್ತಿ ಯೋಜನೆ ಜಾರಿ ಬಳಿಕ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯು 259ಕ್ಕೂ ಅಧಿಕ ಹೊಸ ಹಾಗೂ ಹಳೆಯ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಹಲವು ಮಾರ್ಗಗಳಲ್ಲಿ ಬಸ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಆ ಮಾರ್ಗದ ಜನರು ಬಸ್ ಸೇವೆಯಿಲ್ಲದೆ ತುಂಬಾ ತೊಂದರೆಗೀಡಾಗಿದ್ದರು. ಶಕ್ತಿ ಯೋಜನೆ ಜಾರಿ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಬಸ್‌ಗಳ ಕೊರತೆ ಉಂಟಾಗಿತ್ತು. ಅಲ್ಲದೇ ಬಸ್ ಸೇವೆಗೆ ಬೇಡಿಕೆ ಹೆಚ್ಚಾಗಿದೆ.
ಸಾರ್ವಜನಿರಿಂದ 404 ಮಾರ್ಗಗಳಲ್ಲಿ ಹೊಸದಾಗಿ ಬಸ್‌ಗಳನ್ನು ಓಡಿಸಲು ಕೆಎಸ್‌ಆರ್‌ಟಿಸಿಗೆ ಬೇಡಿಕೆಯಿತ್ತು. ಈ ಪೈಕಿ ಸದ್ಯ 259 ಮಾರ್ಗಗಳಲ್ಲಿ ಬಸ್ ಸೇವೆ ಒದಗಿಸಲಾಗಿದೆ. ವಿಭಾಗೀಯ ಮಟ್ಟದಲ್ಲಿ ಬಸ್‌ಗಳ ಕಾರ್ಯಾಚರಣೆಗೆ ಒಟ್ಟು 145 ಹೊಸ ಮಾರ್ಗಗಳನ್ನು ಗುರುತಿಸಲಾಗಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಅಗತ್ಯವಿರುವ ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸಲು ಕ್ರಮ ವಹಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದರು.
ಮೈಸೂರು ರಿಂಗ್ ರಸ್ತೆ ಬಸ್ ಸೌಲಭ್ಯ
ಮೈಸೂರು ನಗರ ಬಸ್ ನಿಲ್ದಾಣದಿಂದ ಹೊರವರ್ತುಲ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭವಾಗಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಮೈಸೂರು ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ.ವೀರೇಶ್ ಮಾತನಾಡಿ, ‘‘ಸಿಟಿ ಬಸ್ ನಿಲ್ದಾಣದಿಂದ ಕಲಾಮಂದಿರಕ್ಕೆ ಯಾವುದೇ ಬಸ್ ಇರಲಿಲ್ಲ. ಅಲ್ಲಿಗೆ ತೆರಳಬೇಕಾದರೆ ಜನರು ಮೆಟ್ರೋಪೋಲ್ ಸರ್ಕಲ್ ಬಳಿ ಇಳಿಯಬೇಕಾಗಿತ್ತು ಅಥವಾ ಸರಸ್ವತಿಪುರಂನ ಗೌರ್ನಮೆಂಟ್ ಪ್ರೆಸ್ ಬಳಿ ಇಳಿದು ನಡೆದುಕೊಂಡು ಹೋಗಬೇಕಾಗಿತ್ತು. ಈಗ ಅಲ್ಲಿಗೆ ಬಸ್ ಹೋಗುತ್ತದೆ. ಇದೇ ರೀತಿ ಹಲವು ಸ್ಥಳಗಳಿಗೆ ಬಸ್‌ಗಳು ಸಂಚಾರ ಮಾಡುವುದರಿಂದ ಜನರಿಗೆ ಅನುಕೂಲವಾಗಲಿದೆ,’’ ಎಂದು ಮಾಹಿತಿ ನೀಡಿದರು.
ಹೊಸ ಮಾರ್ಗಗಳು
ಮಾರ್ಗ- 1: ನಗರ ಬಸ್ ನಿಲ್ದಾಣ- ನಂಜು ಮಳಿಗೆ- ಪರಸಯ್ಯನ ಹುಂಡಿ-ದಟ್ಟಗಳ್ಳಿ- ಬೋಗಾದಿ- ಹಿನಕಲ್- ಕಲಾಮಂದಿರ- ಮೆಟ್ರೋಪೋಲ್ ಸರ್ಕಲ್- ನಗರಬಸ್ ನಿಲ್ದಾಣ.
ಮಾರ್ಗ -2: ನಗರಬಸ್ ನಿಲ್ದಾಣ-ಮೆಟ್ರೋಪೋಲ್ ಸರ್ಕಲ್- ಕಲಾಮಂದಿರ- ಹಿನಕಲ್- ಭಾರತ್ ಕ್ಯಾನ್ಸರ್ ಆಸ್ಪತ್ರೆ- ಮಣಿಪಾಲ್ ಆಸ್ಪತ್ರೆ- ಎಲ್‌ಐಸಿ ಸರ್ಕಲ್- ಹೈವೇ ವೃತ್ತ- ನಗರ ಬಸ್ ನಿಲ್ದಾಣ.
ಮಾರ್ಗ-3: ನಗರ ಬಸ್ ನಿಲ್ದಾಣ-ಹೈವೇ ವೃತ್ತ-ಎಲ್‌ಐಸಿ ಸರ್ಕಲ್- ಮಣಿಪಾಲ್ ಆಸ್ಪತ್ರೆ- ನಾರಾಯಣ ಹೃದಯಾಲಯ-ಸಾತಗಳ್ಳಿ ಬಸ್ ನಿಲ್ದಾಣ-ದೇವೇಗೌಡ ವೃತ್ತ- ನಜರಬಾದ್- ನಗರ ಬಸ್ ನಿಲ್ದಾಣ.
ಮಾರ್ಗ-4: ನಗರ ಬಸ್ ನಿಲ್ದಾಣ- ನಂಜು ಮಳಿಗೆ- ಪರಸಯ್ಯನ ಹುಂಡಿ- ನಂಜನಗೂಡು ರಸ್ತೆ ಜಂಕ್ಷನ್-ಉತ್ತನಹಳ್ಳಿ- ತಿ.ನರಸೀಪುರ ರಸ್ತೆ ಜಂಕ್ಷನ್- ದೇವೇಗೌಡ ವೃತ್ತ-ನಜರಬಾದ್- ನಗರ ಬಸ್ ನಿಲ್ದಾಣ.

Very nice
Kelgire Oni Hulkoti