ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಪುಂಡರ ಸ್ಕೂಟರ್‌ಗಳನ್ನು ಫ್ಲೈಓವರ್ ಮೇಲಿಂದ ಸಾರ್ವಜನಿಕರು ಎತ್ತಿ ಬೀಸಾಡಿದ್ದಾರೆ. ತುಮಕೂರು ರಸ್ತೆಯ ನೆಲಮಂಗಲದ ಅಡಕಮಾರನಹಳ್ಳಿ ಬಳಿಯ ಫ್ಲೈಓವರ್ ಮೇಲಿಂದ ಸರ್ವಿಸ್ ರಸ್ತೆಗೆ ಡಿಯೋ ಸ್ಕೂಟರ್ಗಳನ್ನ ಎಸೆಯಲಾಗಿದೆ.
ಎರಡು ಸ್ಕೂಟರ್‌ಗಳನ್ನು ಎಸೆಯಲಾಗಿದೆ. ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಭಯ ಹುಟ್ಟಿಸುವ ರೀತಿ ವ್ಹೀಲಿಂಗ್ ಮಾಡುತ್ತಿದ್ದರು. ಅಷ್ಟಲ್ಲದೇ ಒಂದು ವಾಹನಕ್ಕೆ ಡಿಕ್ಕಿ ಕೂಡ ಹೊಡೆದಿದ್ದಾರೆ. ಈ ವೇಳೆ ಬೈಕ್ ತಡೆದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಬೈಕ್ ಅನ್ನು ಎತ್ತಿ ಬಿಸಾಡಿದ್ದಾರೆ. ವ್ಹೀಲಿಂಗ್ ಮಾಡಿದ ಪುಂಡನ ಬೈಕ್ಅನ್ನು ಫ್ಲೈಓವರ್ ಮೇಲಿಂದ ಬಿಸಾಡಿರುವ ವಿಡಿಯೋ ವೈರಲ್ ಆಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯಪಾಲರ ಕಚೇರಿಯು ಕರ್ನಾಟಕಕ್ಕೆ ಮಾಡುತ್ತಿರುವ ಅವಮಾನವನ್ನು ಈ ರಾಜ್ಯ ಸಹಿಸಲ್ಲ
ಇತ್ತಿಚೆಗೆ ಬೆಂಗಳೂರು ನಗರ ಪೊಲೀಸರು ವಿಡಿಯೋವೊಂದನ್ನು ಹಂಚಿಕೊಂಡಿದ್ದು ವ್ಹೀಲಿಂಗ್ ಮಾಡುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. ನಗರದ ಜನನಿಬಿಡ ರಸ್ತೆಯಲ್ಲಿ ಅಪಾಯಕಾರಿ ಬೈಕ್ ಸ್ಟಂಟ್ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈಗ ಆ ರೀತಿ ಸ್ಟಂಟ್ ಮಾಡಿದ್ದ ಪುಂಡರ ಗುಂಪನ್ನು ಪೊಲೀಸರು ಬಂಧಿಸಿದ್ದರು.
“ನಗರದ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತೀರಾ? ನಿಮ್ಮ ಸಾಹಸವನ್ನು ನಿಲ್ಲಿಸಲು ನಮ್ಮ ಅಧಿಕಾರಿಗಳು ಯಾವಾಗಲೂ ಸಿದ್ಧರಾಗಿದ್ದಾರೆ” ಎಂದು ಬೆಂಗಳೂರು ನಗರ ಪೊಲೀಸರು ಸ್ಟಂಟ್ ಮಾಡುವ ವ್ಯಕ್ತಿಗಳ ವಿಡಿಯೋವನ್ನು ಹಂಚಿಕೊಂಡಿದ್ದು, ವ್ಹೀಲಿಂಗ್ ಮಾಡಿದ ಪುಂಡರನ್ನು ಬಂಧಿಸಿರುವ ಫೋಟೊಗಳನ್ನು ಹಂಚಿಕೊಂಡಿದ್ದರು.
ಕೆಲವು ದಿನಗಳ ಹಿಂದೆ ಬೆಂಗಳೂರು ಪೊಲೀಸರು ವ್ಹೀಲಿಂಗ್ ಮಾಡುತ್ತಿದ್ದ ಒಟ್ಟು 44 ಮಂದಿಯನ್ನು ಬಂಧಿಸಿದ್ದು, ಎಲ್ಲ ಸ್ಕೂಟರ್, ಬೈಕ್‌ಗಳನ್ನು ಜಪ್ತಿ ಮಾಡಿದ್ದರು. ಪೊಲೀಸರ ಮಾಹಿತಿ ಪ್ರಕಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಈ ರೀತಿ ವ್ಹೀಲಿಂಗ್ ಮಾಡಿದ್ದು, ಘಟನೆಗೆ ಸಂಬಂಧಿಸಿದಂತೆ 33 ಪ್ರಕರಣಗಳು ದಾಖಲಿಸಲಾಗಿದೆ.
