ತುಮಕೂರು ಗ್ರಾಮಾಂತರ ಭಾಗದ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಿಕೊಡುವಂತೆ ಕೋರಿ ಸೋಮವಾರ ಕರ್ನಾಟಕ ಮಹಾಜನ ಪರಿವಾರ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತುಮಕೂರು ತಾಲ್ಲೂಕು, ಕೋರಾ ಹೋಬಳಿ, ಮೆಳೇಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅತ್ಯಧಿಕವಾಗಿ ಪರಿಶಿಷ್ಠ ಜನಾಂಗಕ್ಕೆ ಸೇರಿದ ನಿವಾಸಿಗಳು ವಾಸವಾಗಿದ್ದು, ಬಹುತೇಕ ಎಲ್ಲರೂ ಕಡು ಬಡವರಾಗಿದ್ದು ಕೂಲಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ, ಪ್ರಸ್ತುತ ದಿನನಿತ್ಯ ಬಳಕೆ ವಸ್ತುಗಳು ಸೇರಿದಂತೆ ಬಹುತೇಕ ದುಬಾರಿ ಜೀವನದ ಪರಿಸ್ಥಿತಿಯಲ್ಲಿ ಜೀವನ ನಡೆಸುವುದೇ ಬಹಳ ಕಷ್ಠವಾಗಿದ್ದು, ಹೆಂಡತಿ ಮಕ್ಕಳನ್ನು ಸಾಕುವುದೋ ಅಥವಾ ಬಾಡಿಗೆ ಕಟ್ಟುವುದೋ ಎಂಬ ಯೋಚನೆಯಲ್ಲಿ ಬದುಕುತ್ತಿದ್ದಾರೆ, ಇಂತಹವರುಗಳನ್ನು ಸರ್ಕಾರ ಗುರ್ತಿಸಿ ಅವರಿಗೆ ನೆಲೆ ಮಾಡಿಕೊಡಬೇಕಾಗಿದೆ ಎಂದು ಕರ್ನಾಟಕ ಮಹಾಜನ ಪರಿವಾರ ಸಮಿತಿ ಜಿಲ್ಲಾ ಅಧ್ಯಕ್ಷ ಲವ ಎಂ.ಎ ತಿಳಿಸಿದರು.
ಜಿಲ್ಲಾ ಕಾರ್ಯದರ್ಶಿ ರಾಜಶೇಖರ್ ಮಾತನಾಡಿ ಈ ಭಾಗದ ಪರಿಶಿಷ್ಟ ಜನಾಂಗದವರು ವಾಸ ಮಾಡಲು ಅನುಕೂಲವಾಗುವಂತೆ ಮೆಳೇಹಳ್ಳಿ ಗ್ರಾಮದ ಸರ್ವೇ ನಂ. 61, & 64ರಲ್ಲಿ ಸರ್ಕಾರಿ ಜಮೀನು ಈ ಜಾಗದಲ್ಲಿ ದಲಿತರು ಮನೆ ಕಟ್ಟಿಕೊಂಡು ವಾಸ ಮಾಡಲು ಅನುಕೂಲವಾಗುವಂತೆ ಸರ್ಕಾರದ ಗಮನಸೆಳೆದು ಜಿಲ್ಲಾಡಳಿತದಿಂದ ಇಲ್ಲಿನ ಸರಿ ಸುಮಾರು 40 ರಿಂದ 50 ಕುಟುಂಬಗಳಿಗೆ ಅನುಕೂಲ ಮಾಡಿಕೊಡಬೇಕೆಂದು ನಮ್ಮ ಮನವಿಯಲ್ಲಿ ಜಿಲ್ಲಾಡಳಿತಕ್ಕೆ ತಿಳಿಸಿದ್ದೇವೆ, ಅವರು ಸಹ ನಮಗೆ ಪೂರಕವಾಗಿ ಸಹಕರಿಸುವುದಾಗಿ ತಿಳಿಸಿದ್ದಾರೆ ಎಂದರು.
ಮನವಿ ಪತ್ರವನ್ನು ನೀಡುವ ಸಂದರ್ಭದಲ್ಲಿ ಕರ್ನಾಟಕ ಮಹಾಜನ ಪರಿವಾರ ಸಮಿತಿ ರಾಜ್ಯಾಧ್ಯಕ್ಷ ಹಂಚಿಹಳ್ಳಿ ರಾಮುಸ್ವಾಮಿ, ಕಾರ್ಯದರ್ಶಿ ರಾಜಶೇಖರ್, ಮಹಿಳಾ ಅಧ್ಯಕ್ಷೆ ಕೆ.ಸುಮಾ, ಮಂಜುಳ, ಸಿದ್ಧಮ್ಮ, ಲಕ್ಷ್ಮೀ ಎಂ.ಎನ್, ಜಯಮ್ಮ, ಲೀಲಾವತಿ, ಮಂಜಮ್ಮ, ಉಮಾ, ಶಿವಗಂಗಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
