ಚಿಕ್ಕಮಗಳೂರು | ಸೆಲೂನ್‌ಗೆ ಹೋಗುತ್ತೇನೆಂದು ತಿಳಿಸಿ ಮನೆಬಿಟ್ಟಿದ್ದ ಹಿರಿಯ ವ್ಯಕ್ತಿ ನಾಪತ್ತೆ: ದೂರು ದಾಖಲು

Date:

Advertisements

ಶೇವಿಂಗ್ ಹಾಗೂ ಕಟ್ಟಿಂಗ್ ಮಾಡಿಸಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ನಡೆದಿದೆ.

ಕಳಸ ತಾಲೂಕಿನ ಹೊಸಮಠ ಬಾಲ್ಗಲ್ ಸಂಸೆ ಗ್ರಾಮದ ಕೃಷ್ಣೇಗೌಡ (74) ವರ್ಷದವರಾಗಿದ್ದು, ಕಳೆದ ಆಗಸ್ಟ್‌ 15ರಿಂದ ಕಾಣೆಯಾಗಿದ್ದಾರೆ.

ಇವರಿಗೆ 4 ಜನ ಮಕ್ಕಳಿದ್ದು, ಎಲ್ಲರೂ ಬೇರೆ ಬೇರೆ ಮನೆ ಮಾಡಿಕೊಂಡು ವಾಸವಿದ್ದಾರೆ. ಕೃಷ್ಣೇಗೌಡರ ಮಗನಾದ ರಘುನಾಥರವರ ಜೊತೆಯಲ್ಲಿ ವಾಸವಿದ್ದರು. ಆಗಸ್ಟ್ 15ರಂದು ಬೆಳಗ್ಗೆ 09.30 ಗಂಟೆಗೆ ಸಂಸೆಗೆ ಹೋಗಿ ಕಟಿಂಗ್ ಮತ್ತು ಶೇವಿಂಗ್ ಮಾಡಿಸಿಕೊಂಡು ಬರುತ್ತೇನೆ ಎಂದು ಮನೆಯಲ್ಲಿ ತಿಳಿಸಿ ಹೊರಗೆ ಹೋಗಿದ್ದರು. ಆದರೆ ಈವರೆಗೆ ಮನೆಗೆ ಹಿಂದಿರುಗಿ ಬಂದಿಲ್ಲ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ರಸ್ತೆಯಲ್ಲಿ ಓಡಾಡಿರುವು ದೃಶ್ಯವು ಸ್ಥಳೀಯ ಅಂಗಡಿಗಳಲ್ಲಿ ಹಾಕಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Advertisements

ಸಂಸೆಯಲ್ಲಿ ಕ್ಷೌರ ಮಾಡಿಸಿಕೊಂಡು ನಂತರ ಮಹಾವೀರ (ಬಾಳೆಕಾಯಿ) ರವರ ಜೀಪಿನಲ್ಲಿ ಕಳಸಕ್ಕೆ ಹೋಗಿ ಅರುಣ ಕೂಲ್ ಡ್ರಿಂಕ್ಸ್ ಹತ್ತಿರ ಇಳಿದುಕೊಂಡಿದ್ದಾಗಿ ಆಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ. ವಾಪಸ್ಸು ಮನೆಗೆ ಬಾರದ ಕಾರಣ ಕೃಷ್ಣೇಗೌಡರ ಸಂಬಂಧಿಕರ ಮನೆಗಳಲ್ಲಿ ಹಾಗೂ ಕಳಸ, ಹೊರನಾಡು, ಕಾರ್‌ಗದ್ದೆ, ಕೆಳಕೋಡುಗಳಲ್ಲಿ ಹುಡುಕಾಡಿದರು ಎಲ್ಲಿಯೂ ಸಿಗದ ಕಾರಣ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

photo 6203858596266098237 y 1

ಕಾಣೆಯಾದ ಕೃಷ್ಣೇಗೌಡರು ದುಂಡು ಮುಖ, ಸಾಧಾರಣ ಮೈಕಟ್ಟು, ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು ಮತ್ತು ಮೀಸೆ ಹೊಂದಿದ್ದಾರೆ. ಸುಮಾರು 5.2 ಅಡಿ ಎತ್ತರ ಇರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಇವರು ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಅಂಗಿ ಮತ್ತು ಪಂಚೆ ಧರಿಸಿರುತ್ತಾರೆ ಎಂದು ಕುದುರೆಮುಖ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿ ಪ್ರಸನ್ನವರ ಜೊತೆ ಗೂಡಿ ಮರಸಣಿಗೆ, ಹೀರೆಬೈಲ್ ಕಡೆಗಳಲ್ಲಿ ಹುಡುಕಾಡಿದರೂ ಎಲ್ಲಿಯೂ ಯಾವುದು ಸುಳಿವು ಸಿಕ್ಕಿಲ್ಲ. ಯಾರಾದರೂ ಕೃಷ್ಣೇಗೌಡರನ್ನು ನೋಡಿದರೆ ಕೂಡಲೇ ಮಾಹಿತಿ ತಿಳಿಸಿ ಅಥವಾ ಕುದುರೆಮುಖ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಎಂದು ನಾಪತ್ತೆಯಾಗಿರುವ ಕೃಷ್ಣೇಗೌಡ ಮಗ ಅರುಣ್ ಮಾಧ್ಯಮಗಳ ಮೂಲಕ ಕೇಳಿಕೊಂಡಿದ್ದಾರೆ.

ಒಂದು ವೇಳೆ ಕಂಡಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:

ಅರುಣ್ 6360711815

ಅಶೋಕ್ 8660779327

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

Download Eedina App Android / iOS

X