ತಂಗಳಾನ್ | ಚಿನ್ನದ ಗಣಿಯಿಂದ ಚಿಮ್ಮಿದ ದಲಿತರು ಬ್ರಾಹ್ಮಣರಾಗುವ ಐತಿಹಾಸಿಕ ಕಥನ

Date:

Advertisements

ಇತಿಹಾಸದಲ್ಲಿ ಸಾಮಾಜಿಕ ಸಮಾನತೆಯನ್ನು ಪಡೆಯಲು ದಲಿತರು ನಾನಾ ದಾರಿಗಳನ್ನು ಹಿಡಿದಿದ್ದಾರೆ. ಹೇಗೆ ಅಪಾರ ಸಂಖ್ಯೆಯಲ್ಲಿ ಕ್ರೈಸ್ತರಾಗಿದ್ದಾರೆಯೋ, ಈಗ ಬಾಬಾಸಾಹೇಬ್ ಅಂಬೇಡ್ಕರರ ಹಾದಿಯಲ್ಲಿ ಬೌದ್ಧರಾಗುತ್ತಿದ್ದಾರೆಯೋ ಹಾಗೇ ಬ್ರಾಹ್ಮಣರಾಗುವ ಪ್ರಯತ್ನವನ್ನೂ ದಲಿತರು ಮಾಡಿದ್ದರು!

ಇದೀಗ ಬಿಡುಗಡೆಯಾಗಿ ವಿಮರ್ಶಕರಿಂದ ವ್ಯಾಪಕ ಮೆಚ್ಚುಗೆ ಗಳಿಸುತ್ತಿರುವ, ಹಾಗೆಯೇ ತುಂಬಿದ ಗೃಹಗಳಿಂದ ಪ್ರದರ್ಶನವನ್ನು ಕಾಣುತ್ತಿರುವ ಪಾ.ರಂಜಿತ್ ನಿರ್ದೇಶನದ, ಚಿಯಾನ್ ವಿಕ್ರಮ್ ಅಭಿನಯದ “ತಂಗಳಾನ್” ಚಿತ್ರದ ಒಂದು ವೈಶಿಷ್ಟ್ಯ ಸಂತ ರಾಮಾನುಜಂ. ರಾಮಾನುಜಂ ರಾಮಾನುಜಾಚಾರ್ಯ ಎಂದು ಪ್ರಸಿದ್ಧರು. ಅವರ ಅನುಯಾಯಿಗಳು ಮಂಡ್ಯ ಜಿಲ್ಲೆಯ ಮೇಲುಕೋಟೆಗೆ ಪ್ರತಿ ವರ್ಷ ಬಹುಸಂಖ್ಯೆಯಲ್ಲಿ ಬರುತ್ತಾರೆ. ಚಿತ್ರದಲ್ಲಿ ತಮಿಳುನಾಡಿನ ದಲಿತ ಸಮುದಾಯ 1800ರ ಆಸುಪಾಸಿನಲ್ಲಿ ಬಹು ಸಂಖ್ಯೆಯಲ್ಲಿ ರಾಮಾನುಜಂ ಅವರ ಅನುಯಾಯಿಗಳಾಗುವ ದೃಶ್ಯ ಇದೆ. ಎಲ್ಲರೂ ಬ್ರಾಹ್ಮಣರಾಗಬಹುದು ಎಂಬ ಸಂಭಾಷಣೆ ಇದೆ! ಚಿತ್ರದಲ್ಲಿ ರಾಮಾನುಜಂ ಅನುಯಾಯಿಯಾದ ಪಾತ್ರಧಾರಿ (ಪಶುಪತಿ) ಮಕ್ಕಳಿಗೆ ಪವಿತ್ರ ದಾರ ತೊಡಿಸುತ್ತಾರೆ. ಹಾಗೆ ತೊಡಿಸುತ್ತ ಮಾಂಸ ತಿನ್ನಬಾರದು, ಸ್ಲಂ ಜನರ ಜೊತೆ ಸೇರಬಾರದು ಎಂದು ಮಕ್ಕಳಿಗೆ ಬುದ್ಧಿವಾದ ಹೇಳುತ್ತಾರೆ.

ಇದರರ್ಥ ಬ್ರಾಹ್ಮಣರಾಗುವ ಪ್ರಯತ್ನದ ಮೂಲಕವೂ ದಲಿತರು ತಮಿಳುನಾಡಿನಲ್ಲಿ ಸಮಾನತೆಯೆಡೆಗೆ ಸಾಗಲು ಪ್ರಯತ್ನಿಸಿರುವ ಸಂದರ್ಭ ನಡೆದಿದೆ ಎಂಬುದು ಸಮಾನತೆಯೆಡೆಗೆ ತುಡಿತ. ಯಾಕೆಂದರೆ ಒಂದು ಸಂದರ್ಭದಲ್ಲಿ ಅದೇ ರಾಮಾನುಜಂ ಅನುಯಾಯಿ ಪಾತ್ರಧಾರಿ ಕಾಡಿಗೆ ಚಿನ್ನ ಹುಡುಕಲು ನಾಯಕ ತಂಗಳಾನ್(ವಿಕ್ರಮ್) ಜೊತೆ ಹೋಗುತ್ತಾರೆ, ಕರ್ನಾಟಕದ ಕೋಲಾರ ಜಿಲ್ಲೆಗೆ. ಅಲ್ಲಿ ಆತನನ್ನು ಎದುರಾಗುವ ಕನ್ನಡಿಗ ಶಾನುಭೋಗ ಪಾತ್ರಧಾರಿ ರಾಮಾನುಜಂ ಅನುಯಾಯಿಯಿಂದ ದಾರ ಕಿತ್ತುಕೊಳ್ಳುವ ಘಟನೆ ನಡೆಯುತ್ತದೆ. ಅದನ್ನು ಪ್ರತಿಭಟಿಸಿ ರಾಮಾನುಜಂ ಅನುಯಾಯಿ ಹೋರಾಟ ಮಾಡಿ ದಾರ ಉಳಿಸಿಕೊಳ್ಳುತ್ತಾರೆ!

Advertisements
ಪಾ ರಂಜಿತ್
ತಂಗಳಾನ್‌ ನಿರ್ದೇಶಕ ಪಾ ರಂಜಿತ್

ಮತ್ತೊಂದು ದೃಶ್ಯದಲ್ಲಿ, ಚಿನ್ನದ ಗಣಿಗಾರಿಕೆ ಮಾಡುತ್ತಿದ್ದ ದಲಿತರು ಕೊನೆಗೊಂದು ದಿನ ಹಸಿವಿನಿಂದ ಸಾಮೂಹಿಕವಾಗಿ ನರಳುವ ಸಂದರ್ಭ ಬರುತ್ತದೆ. ಆಗ ಇದ್ದಕ್ಕಿದ್ದಂಗೆ ಕೋಣವೊಂದು ಪ್ರತ್ಯಕ್ಷವಾಗುತ್ತದೆ. ದೃಶ್ಯದಲ್ಲಿ ಆ ಕೋಣವನ್ನು ತೋರಿಸುವ ಅವರನ್ನು ಗಣಿಗಾರಿಕೆಗೆ ಕರೆಸಿದ್ದ ಬ್ರಿಟಿಷ್ ಅಧಿಕಾರಿ ಕ್ಲೆಮೆಂಟ್ ದಲಿತ ಸಮುದಾಯದ ಬಂಧುಗಳಿಗೆ “ಹೋಗಿ ನಿಮ್ಮ ಆಹಾರ ಸಿಕ್ಕಿತು” ಎಂದು ಕೂಗಿ ಹೇಳುತ್ತಾನೆ. ತಕ್ಷಣ ಹಸಿವಿನಿಂದ ನರಳುತ್ತಿದ್ದ ದಲಿತರು ಅಪರಿಮಿತವಾಗಿ ಖುಷಿಗೊಂಡು ಆಹಾರಕ್ಕಾಗಿ ಆ ಕೋಣವನ್ನು ಬಲಿ ಪಡೆಯಲು ಆಯುಧಗಳ ಸಮೇತ ಅದರ ಬೆನ್ನತ್ತುತ್ತಾರೆ. ಅಂದಹಾಗೆ ಇದನ್ನು ನೋಡುತ್ತಲೇ ಅಲ್ಲಿಯೇ ಇದ್ದ ರಾಮಾನುಜಂ ಅನುಯಾಯಿ ಅಪಾರವಾಗಿ ದುಃಖಿತಗೊಳ್ಳುತ್ತಾನೆ. ಮಾಂಸ ತಿನ್ನಬೇಡಿ ಎಂದು ತಾನು ಯಾವ ಸಿದ್ದಾಂತವನ್ನು ಪ್ರತಿಪಾದಿಸಿದ್ದೇನೊ ಅದನ್ನು ತನ್ನ ಸಮುದಾಯ ಉಲ್ಲಂಘಿಸುತ್ತಿದೆಯಲ್ಲ ಎಂದು ಬೇಸರಗೊಳ್ಳುತ್ತಾನೆ. ಇದರರ್ಥ ಸಮಾನತೆಯೆಡೆಗೆ ಮಿಡಿಯುವ ಆ ರಾಮಾನುಜಂ ಅನುಯಾಯಿಯ ನಿರಂತರ ತುಡಿತ ಎಂಬುದು.

ಇತಿಹಾಸದಲ್ಲಿ ಸಾಮಾಜಿಕ ಸಮಾನತೆಯನ್ನು ಪಡೆಯಲು ದಲಿತರು ನಾನಾ ದಾರಿಗಳನ್ನು ಹಿಡಿದಿದ್ದಾರೆ. ಹೇಗೆ ಅಪಾರ ಸಂಖ್ಯೆಯಲ್ಲಿ ಕ್ರೈಸ್ತರಾಗಿದ್ದಾರೆಯೋ, ಈಗ ಬಾಬಾಸಾಹೇಬ್ ಅಂಬೇಡ್ಕರರ ಹಾದಿಯಲ್ಲಿ ಬೌದ್ಧರಾಗುತ್ತಿದ್ದಾರೆಯೋ ಹಾಗೆ ಬ್ರಾಹ್ಮಣರಾಗುವ ಪ್ರಯತ್ನವನ್ನು ಕೂಡ ದಲಿತರು ಮಾಡಿದ್ದಾರೆ ಮತ್ತು ಆಗಿದ್ದಾರೆ ಎಂಬುದು ನಾವು ಗಮನಿಸಬೇಕಾದ ವಿಚಾರ. ಈ ನಿಟ್ಟಿನಲ್ಲಿ ತಂಗಳಾನ್ ಚಿತ್ರದಲ್ಲಿ ನಿರ್ದೇಶಕ ಪಾ. ರಂಜಿತ್ ಇತಿಹಾಸದ ಅಂತಹ ಒಂದು ಸಣ್ಣ ಪ್ರಯತ್ನವನ್ನು, ಸಮಾನತೆಗೆ ನಡೆಯುವ ವಿಶಿಷ್ಟ ಪ್ರಯತ್ನವನ್ನು ಅತ್ಯಂತ ಯಶಸ್ವಿಯಾಗಿ ದಾಖಲಿಸಿದ್ದಾರೆ.

ರಾಮಾನುಜಂ
ರಾಮಾನುಜಾಚಾರ್ಯ

ಈ ನಿಟ್ಟಿನಲ್ಲಿ ಹೇಳಬಹುದಾದರೆ ನೂರಾರು ದಲಿತರು ರಾಮಾನುಜಂ ಅನುಯಾಯಿಗಳಾಗುವ, ಮಾಂಸ ತಿನ್ನುವುದನ್ನು ಬಿಡುವ, ಅಂತಹ ಒಂದು ಪ್ರಯತ್ನ ನಿಜವೇ ಎಂದು ಯಾರಿಗಾದರೂ ಅನ್ನಿಸಬಹುದು. ಆದರೆ, ಇದು ವಾಸ್ತವ. ಏಕೆಂದರೆ ಈಗಲೂ ನೂರಾರು ಸಂಖ್ಯೆಯಲ್ಲಿ ಉದಾಹರಣೆಗೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿರುವ ಮಹದೇಶ್ವರನಿಗೆ ದಲಿತರು ನೂರಾರು ಸಂಖ್ಯೆಯಲ್ಲಿ ಗುಡ್ಡಪ್ಪನನ್ನು ಬಿಡಿಸುತ್ತಾರೆ ಅಥವಾ ಗುಡ್ಡಪ್ಪಂದಿರು ಆಗುತ್ತಾರೆ. ಅವರೆಲ್ಲರ ಸಂಪ್ರದಾಯವೆಂದರೆ ಅವರು ಮದ್ಯಪಾನ ಮಾಡಬಾರದು ಮಾಂಸ ತಿನ್ನಬಾರದು ಇತ್ಯಾದಿ ಇತ್ಯಾದಿ. ಅಂದರೆ ಅಂದು ರಾಮಾನುಜಂ ಅನುಯಾಯಿಗಳು ಮಾಡಿರುವಂತೆ ಈಗಲೂ ಮಹದೇಶ್ವರನ ಭಕ್ತರು ಮಾಡುತ್ತಿರುವರೇ? ಖಂಡಿತ ಇದು ಗಮನಿಸಬೇಕಾದ ವಿಚಾರ. ಹಾಗೆ ಇದು ಕರ್ನಾಟಕದಲ್ಲಿ ಅಷ್ಟೇ ಅಲ್ಲ ದೂರದ ಉತ್ತರ ಪ್ರದೇಶದಲ್ಲಿ ಪಂಜಾಬಿನಲ್ಲಿ ರವಿದಾಸರ ಅನುಯಾಯಿಗಳು ಇದೇ ಮಾದರಿಯನ್ನು ಅನುಸರಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸಂತ ಕಬೀರರ ಹಾದಿಯಲ್ಲಿ ದಲಿತರು ಸಾಗಿದ್ದಾರೆ. ಈ ನಿಟ್ಟಿನಲ್ಲಿ ತಮಿಳುನಾಡಿನಲ್ಲಿ ದಲಿತರು ರಾಮಾನುಜಮ್ ಅನುಯಾಯಿಗಳಾಗುವ ಆ ಹಾದಿಯಲ್ಲಿ ಜನಿವಾರ ತೊಳಲು ಪ್ರಯತ್ನಿಸಿರುವ ಘಟನೆ ನಡೆದಿಲ್ಲ ಎಂದು ಯಾರೂ ಭಾವಿಸಬಾರದು.

thangalan

ಹಾಗೆಯೇ ತಂಗಳಾನ್ ಚಿತ್ರದಲ್ಲಿ ನಿರ್ದೇಶಕ ನಡೆದಿರುವ ಇತಿಹಾಸವನ್ನು ಕೋಲಾರ ಗೋಲ್ಡ್ ಫೀಲ್ಡ್ ಕೆಜಿಎಫ್‌ನಲ್ಲಿ ಚಿನ್ನ ತೆಗೆಯುವ ನಿಟ್ಟಿನಲ್ಲಿ ನಡೆದಿರುವ ಇತಿಹಾಸವನ್ನು ಮರು ಕಟ್ಟಿಕೊಟ್ಟಿದ್ದಾರೆ. ಅಂತಹ ಇತಿಹಾಸದಲ್ಲಿ ದಲಿತರು ಬ್ರಾಹ್ಮಣರಾಗುವ ಇಂತಹ ಒಂದು ಘಟನೆಯು ಚಿಲುಮೆಯಾಗಿ ಚಿಮ್ಮಿ ಬಂದಿದೆ, ಚಿನ್ನದ ಗಟ್ಟಿಯಾಗಿ ಹೊರ ಬಂದಿದೆ.

ಅಂದಹಾಗೆ ಇಂತಹ ಅಪರೂಪದ ಯಾರೂ ಮುಟ್ಟಿರದ ದಲಿತರು ಬ್ರಾಹ್ಮಣರಾಗುವ ಇತಿಹಾಸದ ದಾಖಲೀಕರಣ ಖಂಡಿತ ಪ್ರಗತಿಪರರನ್ನು ಒಳಗೊಂಡಂತೆ ಸಾಮಾಜಿಕ ಅಧ್ಯಯನ ಮಾಡುವ ಪ್ರತಿಯೊಬ್ಬರನ್ನು ಚಕಿತಗೊಳಿಸದಿರದು. ಆದರೆ, ಮಾನವ ಪ್ರಯತ್ನ ಬಲು ದೊಡ್ಡದು. ಆಯಾ ಕಾಲ ಘಟ್ಟದ ಆತನ ಚಿಂತನೆಯು ಒಂದೊಂದು ಬಗೆಯ ವೈಶಿಷ್ಟ್ಯ. ಈ ನಿಟ್ಟಿನಲ್ಲಿ ಇತಿಹಾಸದ ಈ ಘಟನೆಯನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು. ಹಾಗೆ ಇದನ್ನು ದಾಖಲಿಸಿದ ಪಾ.ರಂಜಿತ್ ಅವರ ಪ್ರಯತ್ನವನ್ನು, ಅವರ ಅಧ್ಯಯನವನ್ನು ಅಷ್ಟೇ ಮುಕ್ತ ಮನಸ್ಸಿನಿಂದ ಒಪ್ಪಬೇಕು.

ರಘೋತ್ತಮ ಹೊ ಬ
ರಘೋತ್ತಮ ಹೊ.ಬ
+ posts

ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

6 COMMENTS

  1. ಸ್ವಾಮಿ ಹೊಭ ಅವರೇ, ತಮಿಳಿನ ಚಿತ್ರ ಪ್ರಚಾರ ರ್ಕಾರ ರಾಗಬೇಡಿ, ತಮಿಳು ನಾಡಿನಲ್ಲಿ, ಜಾತಿ ಗಿಂತ ಮಾತೃ ಭಾಷೆ ಗೆ ಬಹಳ ಪ್ರಮುಖ್ಯತೆ ಕೊಡುತ್ತಾರೆ. ಭಾಷೆ ಮೊದಲು ಅಲ್ಲಿ ನಾನು ಅಲ್ಲಿ 3 ವರ್ಷ ಇದ್ದು ಬಂದ ವನು, ಅನಿವಾರ್ಯ ವಾಗಿ ಅಲ್ಲಿನ ಎಲ್ಲರೂ ಕಲಿಯಬೇಕು. ನಮ್ಮ ಕನ್ನಡ ಚಿತ್ರ ಈಗ ಬಂದು ಹೋಗಿದೆ “ಕಾಟೇರ” ತಂಗಳನ್ನ ಗಿಂತ ಜಾತಿಯ ಸುಲಭ ವಾಗಿ ಅರ್ಥ ಆಗುವ ಚಿತ್ರ. ಕನ್ನಡ ಪ್ರೇಮ ಇರಲಿ ಎನ್ನಡ ಪ್ರೇಮ ಬೇಡ.

    • ಅಣ್ಣಾ, ಒಂದು ಸಿನಿಮಾ ಸೃಷ್ಟಿಕಲೆಯ ಬಗ್ಗೆ ವಿಮರ್ಶೆ ಮಾಡಲು ಹೊರಟಾಗ, ಅದು ಕನ್ನಡ ಸಿನೆಮಾ ಮಾತ್ರವೇ ಆಗಿರಬೇಕಾ?

      ಅನ್ಯ ಭಾಷೆಯನ್ನು ಪ್ರೀತಿಸುವ ಉದಾಹರಣೆಗೆ ಈ ವಿಮರ್ಶೆ ಸಂಬಂಧ ಪಡಲಾರದು, ಅಣ್ಣಾ,

  2. ನಮ್ಮ ಕನ್ನಡ ಚಿತ್ರಗಳಿಗೆ ಇಲ್ಲದ ನಿಮ್ಮ ಪ್ರೋತ್ಸಾಹ ತಮಿಳು ಚಿತ್ರದ ಮೇಲೆ ಯಾಕೆ ಆಂತ ಅರ್ಥ ಆಗ್ಲಿಲ್ಲ.

    ನಮ್ಮ ಒಳ್ಳೆಯ ಕನ್ನಡ ಚಿತ್ರಗಳಿಗೆ ಆಲ್ಲಿ ಅವರು ಪ್ರೋತ್ಸಾಹ ಕೊಡಲ್ಲ ಸ್ವಾಮಿ…

  3. https://enantheeri.com/2024/08/20/tangalan/

    ಭಾರತ ವಿರೋಧಿ ಮನಸ್ಥಿತಿ, ತಮ್ಮ ಸೈದ್ಧಾಂತಿಕ ನಿಲುವು ಮತ್ತು ದುಡ್ಡು ಮತ್ತು ಪ್ರಶಸ್ತಿಯ ತೆವಲಿಗಾಗಿ KGF ಬಗ್ಗೆ ಇಲ್ಲ ಸಲ್ಲದ ಸುಳ್ಳು ಇತಿಹಾಸವನ್ನೇ ವೈಭವೀಕರಿಸಿ ಮುಂದಿನ‌‌ ಪೀಳಿಗೆಗೆ ಹಸೀ ಸುಳ್ಳು ಇತಿಹಾಸವನ್ನೇ ತಂಗಾಲಾನ್ ಚಿತ್ರದ ಮೂಲಕ ತೋರಿಸುವವರಿಗೆ ಧಿಕ್ಕಾರವಿರಲಿ.

    ನಿಮ್ಮವನೇ ಉಮಾಸುತ

  4. ಕಲೆಗೆ ಭಾಷೆ ಇಲ್ಲ ಒಳ್ಳೆಯ ಚಿತ್ರಗಳನ್ನು ಎಲ್ಲಾ ಭಾಷೆಯವರು ಮೆಚ್ಚುತ್ತಾರೆ. ಭಾಷೆಗೆ ಪ್ರಾಮುಖ್ಯತೆ ಕೊಟ್ಟಿದರೆ ಕೆಜಿಎಫ್ ಭಾಗ 1ಮತ್ತು 2 ಬಂದು ಜಗ ಮೆಚ್ಚುವ ಚಿತ್ರ ಆಗುತ್ತಿರಲಿಲ್ಲ ಈಗ ಕೆಜಿಎಫ್ ಭಾಗ 3 ಕ್ಕೆ ಕಾಯುತ್ತಿದ್ದಾರೆ ಕೆಜಿಎಫ್ ಚಿತ್ರವು ಜಗ ಮೆಚ್ಚುವ ಚಿತ್ರವಾಗಿದೆ ಅದೇ ರೀತಿ ಕಾಂತರಾ ಚಿತ್ರವು ಸೂಪರ್ಹಿಟ್ಟಾಗಿದೆ ಈಗ ಭಾಗ ಎರಡಕ್ಕೆ ಎಲ್ಲರೂ ಕಾಯುತ್ತಿದ್ದಾರೆ ಹಿಂದಿ ಭಾಷೆ ಮಾತನಾಡುವ ಜನ ಭಾರತದಲ್ಲಿ ತುಂಬಾ ಇದ್ದಾರೆ ಆದರೆ ಈಗ ಹಿಂದಿ ಚಿತ್ರರಂಗವು ಪಾತಾಳಕ್ಕೆ ಹೋಗಿದೆ ಒಬ್ಬ ಪ್ರೇಕ್ಷಕನಾಗಿ ಒಂದು ಚಲನಚಿತ್ರವನ್ನು ನೋಡಿದಾಗ ಮಾತ್ರ ಆ ಚಿತ್ರ ಯಶಸ್ವಿಯಾಗುತ್ತದೆ ಒಬ್ಬ ಪತ್ರಕರ್ತನಾಗಿ ನಿಮ್ಮ ಸಮಾನತೆಯನ್ನು ತೋರಿಸಿದ್ದೀರಾ ನಾನು ಮೆಚ್ಚುತ್ತೇನೆ

  5. ಇತಿಹಾಸ ದಲ್ಲಿ ಆಗಿಹೊಗಿರುವ ನೈಜ ಘಟನೆಗಳನ್ನು ಯಾವ ಭಾಷೆಯಲ್ಲಾದರೂ ಸಿನಿಮಾ ಮಾಡಿದರೆ ಪ್ರೋತ್ಸಾಹಿಸುವ ಮೂಲಕ ಇತಿಹಾಸವನ್ನ ತಿಳಿದುಕೊಳ್ಳೋಣ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X