ಸಿಎಂ ಸಿದ್ದರಾಮಯ್ಯನವರು ಕಳಂಕಿತ ವ್ಯಕ್ತಿ ಆಗಲು ಸಾಧ್ಯವಿಲ್ಲ. ಇದೊಂದು ಅವರ ವಿರುದ್ಧ ಮಾಡಿದ ಷಡ್ಯಂತ್ರ ಎಂದು ಕಾಂಗ್ರೆಸ್ ಮುಖಂಡ ಎಸ್ ಟಿ ಪಾಟೀಲ್ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಮಾತನಾಡಿದ ಅವರು, “ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿ ಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ. ಕಾಯ್ದೆ ಬಾಹಿರವಾಗಿ ನೋಟಿಸ್ ಕೊಟ್ಟಿದ್ದಾರೆ. ನಾವೆಲ್ಲ ಕಾನೂನಾತ್ಮಕ ಹೋರಾಟ ಮಾಡುವುದಕ್ಕೆ ಗಟ್ಟಿಯಾಗಿದ್ದೇವೆ” ಎಂದು ತಿಳಿಸಿದರು.
“ಇಡೀ ದೇಶದಲ್ಲಿ ಇಷ್ಟು ಸ್ವಚ್ಛ ಪ್ರಾಮಾಣಿಕ ಮತ್ತು ಬಡವರ ಮೇಲೆ ಕಾಳಜಿ ಇರುವ ವ್ಯಕ್ತಿ ಸಿಗಲು ಸಾಧ್ಯವಿಲ್ಲ. ದೇವರಾಜ ಅರಸರ ನಂತರದ ಈ ರೀತಿಯಲ್ಲಿ ಕೆಲಸ ಮಾಡುತ್ತಿರುವ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಇವರ ಆಡಳಿತದ ಏಳಿಗೆಯನ್ನ ಸಹಿಸಲಾಗದೆ, ಸ್ಥಿರವಿದ್ದ ಸರ್ಕಾರವನ್ನ ಕೆಡವಿ, ಶಾಸಕರುಗಳನ್ನು ಖರೀದಿಸಿ ಬಿಜೆಪಿ ನೇತೃತ್ವದಲ್ಲಿ ಸರ್ಕಾರವನ್ನ ರಚಿಸಬೇಕೆಂಬ ಕೆಟ್ಟ ಉದ್ದೇಶದಿಂದ ಮಾಡಿರುವ ಹುನ್ನಾರವಿದೆ” ಎಂದು ಆರೋಪಿಸಿದರು.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರು ಮೇಲೆ ಕಳಂಕಿತ ಎಂದು ಬರಲು ಸಾಧ್ಯವಿಲ್ಲ, ಇಡೀ ಪಕ್ಷ ಅವರ ಬೆನ್ನಿಗೆ ಇದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಧಾರವಾಡ | ಸಿಎಂ ಸಿದ್ಧರಾಮಯ್ಯ ರಾಜೀನಾಮೆ ವಿಚಾರ ಅವರ ಪಕ್ಷಕ್ಕೆ ಬಿಟ್ಟಿದ್ದು: ಎಸ್ ಆರ್ ಹಿರೇಮಠ್
ಈ ವೇಳೆ ಸತ್ಯಪ್ಪ ಮೆಲ್ನಾಡ, ಅನವಿರಯ್ಯ ಪ್ಯಾಟಿಮಠ,ಎಂ ಎಲ್ ಕೆಂಪಲಿಂಗಣ್ಣವರ್, ಸಿದ್ದು ಸಾರಾವರಿ,ಶಿವಪ್ಪ ಗಾಳಿ, ಬಸವರಾಜ್ ಬಗಲಿ, ಮಲ್ಲು ಹೋಳಿ, ರಸೂಲ್ ಮುಜಾವರ್, ಯಮನಪ್ಪ ರೊಳ್ಳಿ,ಶಿವಾನಂದ ಮಾದರ, ಅನಿಲ್ ಗಚ್ಚಿನಮನಿ, ಪಾಂಡು ಮಮದಾಪುರ ಉಪಸ್ಥಿತರಿದ್ದರು.
ವರದಿ: ಖಾಜಾಮೈನುದ್ದಿನ ತಹಶೀಲ್ದಾರ್, ಸಿಟಿಝನ್ ಜರ್ನಲಿಸ್ಟ್, ಬೀಳಗಿ
