ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ವಕೀಲರ ಸಂಘದಿಂದ ವಕೀಲರು ಸ್ವಯಂ ಪ್ರೇರಿತವಾಗಿ ನ್ಯಾಯಾಲಯದ ಕಾರ್ಯಕಲಾಪಗಳಿಂದ ಹೊರಗುಳಿದು, ಮಹಾತ್ಮ ಗಾಂಧಿ ಪುತ್ಥಳಿ ಎದುರು ಜಮಾಯಿಸಿ ಸಿಎಂ ಸಿದ್ದರಾಮಯ್ಯನವರಿಗೆ ಬೆಂಬಲ ಘೋಷಿಸಿದರು.
ವಕೀಲರ ಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿ, “ಮುಡಾ ಹಗರಣ ಸಂಬಂಧ ರಾಜ್ಯಪಾಲರು ಏಕಾಏಕಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದು ರಾಜಕೀಯ ದುರುದ್ದೇಶವಾಗಿದೆ. ಸಮಾಜವಾದಿ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ತೇಜೋವಧೆಗೆ ನಡೆಸಲಾದ ಸಂಚು ಈ ಮುಡಾ ಹಗರಣ. ಹಾಗಾಗಿ ಈ ಹಗರಣದಲ್ಲಿ ಯಾವುದೇ ಹುರುಳಿಲ್ಲ. ರಾಜ್ಯಪಾಲರ ಕಚೇರಿ ರಾಜಕೀಯವಾಗಿ ದುರ್ಬಳಕೆಯಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ವಕೀಲರೆಲ್ಲರು ಒಗ್ಗೂಡಿ, “ನಾವೆಲ್ಲರೂ ಸಿದ್ದರಾಮಯ್ಯರ ಜೊತೆ ಇದ್ದೇವೆ” ಎಂದು ಬೆಂಬಲ ಸೂಚಿಸಿ ಸಾಂಕೇತಿಕವಾಗಿ ಹೋರಾಟ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಬೀಳಗಿ | ಸಿದ್ದರಾಮಯ್ಯ ಕಳಂಕಿತ ವ್ಯಕ್ತಿ ಆಗಲು ಸಾಧ್ಯವಿಲ್ಲ: ಕಾಂಗ್ರೆಸ್ ಮುಖಂಡ ಎಸ್ ಟಿ ಪಾಟೀಲ್
ಪ್ರತಿಭಟನೆಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಎ ಜಿ ಸುಧೀರ್, ಉಪಾಧ್ಯಕ್ಷ ಚಂದ್ರಶೇಖರ್, ಕರ್ನಾಟಕ ವಕೀಲರ ಪರಿಷತ್ತಿನ ಸದಸ್ಯ ಚಂದ್ರಮೌಳಿ, ಜಂಟಿ ಕಾರ್ಯದರ್ಶಿ ಚರಣ್ ರಾಜ್ ಕೆ ಆರ್, ವಿನೋದ, ಹಿರಿಯ ವಕೀಲ ಸಿಎಂ ಜಗದೀಶ್, ಶಿವಣ್ಣೇಗೌಡ, ರಾಮಕೃಷ್ಣ, ತಿಮ್ಮಯ್ಯ, ಅರವಿಂದ, ನಾಗರಾಜು ಕೆ ಎಸ್, ಕಾಂತರಾಜ್, ಸುರೇಶ್ ಪಾಳ್ಯ, ಪ್ರೇಮ್, ಮಾಜಿ ಕಾರ್ಯದರ್ಶಿ ಉಮೇಶ್, ಸುನಿಲ್, ಶಿವಣ್ಣ ಕೆ, ಗಂಗಾಧರ್, ಮಂಜುನಾಥ್ ಹಾಗೂ ತನುಜ ಸೇರಿದಂತೆ ಹಲವು ವಕೀಲರು ಇದ್ದರು.