ವಿದ್ಯಾರ್ಥಿಗಳು ಮಾನಸಿಕ, ದೈಹಿಕ ಬೆಳವಣಿಗೆ ಆಗಬೇಕಾದರೆ ಕ್ರೀಡೆ ಅಗತ್ಯವಿದೆ. ಕ್ರೀಡಾಕೂಟಗಳು ಮಕ್ಕಳ ಕ್ರೀಡಾ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಿವೆ ಎಂದು ಹುಲಸೂರಿನ ಡಾ.ಶಿವಾನಂದ ಮಹಾಸ್ವಾಮಿ ಹೇಳಿದರು.
ಹುಲಸೂರ ಪಟ್ಟಣದ ವಿದ್ಯಾ ಜ್ಯೋತಿ ಪ್ರೌಢ ಶಾಲೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಹುಲಸೂರು ಬೇಲೂರ ಹಾಗೂ ಮಿರಖಲ್ ಕ್ಲಸ್ಟರ್ ವ್ಯಾಪ್ತಿಯ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಸಾನಿಧ್ಯ ವಹಿಸಿ ಮಾತನಾಡಿದರು.
ʼಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಕ್ರೀಡಾ ಆಸಕ್ತಿ ಬೆಳೆಯಲು ಸಾಧ್ಯವಿದೆ. ಮಕ್ಕಳ ಕ್ರೀಡಾ ಪ್ರತಿಭೆ ರಾಷ್ಟ್ರ ಮಟ್ಟಕ್ಕೆ ತಲುಪಿಸುವ ನಿಟ್ಟಿನಲ್ಲಿ ಶಿಕ್ಷಕರು ಮಾರ್ಗದರ್ಶನ ನೀಡಬೇಕುʼ ಎಂದು ಸಲಹೆ ನೀಡಿದರು.

ಹುಲಸೂರ ತಾಲೂಕು ತಹಶೀಲ್ದಾರ್ ಶಿವಾನಂದ ಮೇತ್ರೆ ಕ್ರೀಡಾ ಧ್ವಜಾರೋಹಣ ನೆರೆವೇರಿಸಿ ಮಾತನಾಡಿ, ʼಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿರುವ ಅಗಾಧ ಪ್ರತಿಭೆಯನ್ನು ಗುರುತಿಸಲು ಶಿಕ್ಷಕರು ಶ್ರಮಿಸಬೇಕು. ಅದರಲ್ಲೂ ಕ್ರೀಡೆ ಇಂದು ಜಾಗತಿಕ ಮಟ್ಟದಲ್ಲಿ ಆಸಕ್ತಿದಾಯಕವಾಗಿದೆ. ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಗಳಲ್ಲಿ ಭಾಗವಹಿಸಲು ಪ್ರೇರಣೆ ನೀಡಬೇಕು. ತಾಲೂಕಿನಲ್ಲಿ ಕ್ರೀಡಾ ಚಟುವಟಿಕೆ ಬೆಳವಣಿಗೆಗೆ ಅಗತ್ಯ ನೆರವು ನೀಡಲಾಗುವುದುʼ ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯಪಾಲರು ಸಂವಿಧಾನ ರಕ್ಷಿಸಬೇಕೇ ಅಥವಾ ತಮ್ಮ ಒಡೆಯರ ಅಡಿಯಾಳಾಗಬೇಕೇ?
ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ವೈಜಣ್ಣ ಫೂಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದನೂರ, ಎಂ.ಡಿ.ಹುಸೇನ್, ನಾಗನಾಥ ದುಬಲಗುಂಡೆ, ಶಿಕ್ಷಣ ಸಂಯೋಜಕ ಶಿವರಾಜ ಕನಕಟ್ಟೆ, ಮನೋಹರ ಕಂಟಿಕೋರೆ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಭೀಮಾಶಂಕರ ಆದೇಪ್ಪಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಕುಮಾರ ನಂದೋಡೆ, ಮಿರಖಲ್ ಸಿಆರ್‌ಪಿ ಡಾ.ಧರ್ಮೇಂದ್ರ ಭೋಸ್ಲೆ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ ಪತಂಗೆ, ಹುಲಸೂರ ಸಿಆರ್‌ಪಿ ಮಾರುತಿ ಬೇಂದ್ರೆ ಸೇರಿದಂತೆ ಶಿಕ್ಷಕರಾದ ಮಾಧವ ಸೂರ್ಯವಂಶಿ, ಗೀತಾ, ಮೇಬಲ್ ಹಾಗೂ ವಿವಿಧ ಶಾಲೆಯ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು. ಬೇಲೂರು ಸಿಆರ್‌ಪಿ ನಾಗರಾಜ ಹಾವಣ್ಣಾ ಸ್ವಾಗತಿಸಿ, ನಿರೂಪಿಸಿದರು.