ಮುಡಾ ಹಗರಣ ಪ್ರಕರಣ | ರಾಜ್ಯಪಾಲರ ನಡೆಗೆ ನುಡಿ ಖಂಡನೆ: ಹಿರಿಯ ರಂಗಕರ್ಮಿ ಸಿ ಬಸವಲಿಂಗಯ್ಯ

Date:

Advertisements

ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿ ಕರ್ನಾಟಕ ಜನರಂಗದಿಂದ ಮೈಸೂರಿನ ಜಲದರ್ಶಿನಿಯಲ್ಲಿ ʼಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ಗೌರವಿಸಿ’ ಎಂಬ ಸಭೆ ನಡೆಯಿತು.

ಹಿರಿಯ ರಂಗಕರ್ಮಿ ಸಿ ಬಸವಲಿಂಗಯ್ಯ ಮಾತನಾಡಿ, “ವಿರೋಧ ಪಕ್ಷದಲ್ಲಿರುವವರು ಸ್ವಸಾಮರ್ಥ್ಯದಿಂದ ವಿರೋಧಿಸಲಾಗದ ಹೇಡಿಗಳು, ರಾಜಭವನವನ್ನು ದುರ್ಬಳಕೆ ಮಾಡಿಕೊಂಡು, ದ್ವೇಷ ರಾಜಕಾರಣ ಮಾಡುತ್ತಿರುವುದು ಖಂಡನೀಯ. ಇದರ ವಿರುದ್ಧ ಪ್ರತಿಭಟಿಸುವುದು ಇಂದಿನ ಅತಿದೊಡ್ಡ ಜರೂರಾಗಿದೆ” ಎಂದು ಹೇಳಿದರು.

“ಸಂವಿಧಾನದ ಸದಾಶಯಗಳ ಅಡಿಯಲ್ಲಿ, ರಾಷ್ಟ್ರಪತಿಗಳ ನೇರ ಸುಪರ್ದಿನಲ್ಲಿ ಕಾರ್ಯ ನಿರ್ವಹಿಸಬೇಕಾದ ರಾಜ್ಯಪಾಲರು, ಪ್ರಧಾನಿ ಹಾಗೂ ಕೇಂದ್ರ ಗೃಹಸಚಿವರ ಆದೇಶಕ್ಕನುಗುಣವಾಗಿ ಕೆಲಸ ಮಾಡುವ ಮೂಲಕ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ಹಚ್ಚುತ್ತಲೇ ಭಾರತದ ಸಾರ್ವಭೌಮತೆಗೆ ಧಕ್ಕೆ ತಂದಿದ್ದಾರೆ” ಎಂದರು.

Advertisements

ಹಿರಿಯ ಪತ್ರಕರ್ತ ಟಿ ಗುರುರಾಜ್ ಮಾತನಾಡಿ, “ಭಾರತೀಯ ಜನತಾ ಪಕ್ಷ ಹಾಗೂ ಜಾತ್ಯತೀತ ಜನತಾದಳಕ್ಕೆ ಸೇರಿದ ನಾಲ್ಕಾರು ಮಂದಿ ಘಟಾನುಘಟಿ ಭ್ರಷ್ಟ ರಾಜಕಾರಣಿಗಳ ವಿರುದ್ಧ ಸ್ವತಂತ್ರ ತನಿಖಾ ಸಂಸ್ಥೆಯ ಮೂಲಕ ವರದಿ ಸಲ್ಲಿಸಿ, ಪ್ರಾಸಿಕ್ಯೂಷನ್ ನಡೆಸಲು ಅನುಮತಿ ಕೋರಿ ವರ್ಷಗಳೇ ಕಳೆದಿದ್ದರೂ, ಇದಕ್ಕೆ ಅನುಮತಿಸದ ರಾಜ್ಯಪಾಲರು, ಯಾರೋ ಓರ್ವ ಪ್ರಾಯೋಜಿತ, ಸ್ವಯಂ ಘೋಷಿತ ಸಮಾಜ ಸೇವಕ ನೀಡಿದ ದೂರನ್ನು ಏಕಾಏಕಿ ಸಮ್ಮತಿಸಿ, ಒಂದೇ ದಿನದಲ್ಲಿ ಶೋಕಾಸ್ ನೋಟಿಸ್ ನೀಡಿದ್ದೂ ಅಲ್ಲದೆ, ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದು ನಿಜಕ್ಕೂ ಸಂವಿಧಾನಬಾಹಿರ ಸಂಗತಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ ಬಿ ಜೆ ವಿಜಯ್ ಕುಮಾರ್ ಮಾತನಾಡಿ, “ಸಮಾಜವಾದಿ ಹಿನ್ನಲೆಯ, ಬಡವರ, ಶೋಷಿತರ ಪರ ಅಂತಃಕರಣ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಡಾ ಹಗರಣದಲ್ಲಿ ಸಿಲುಕಿಸುವ ಹುನ್ನಾರ ನಡೆದಿದೆ.
ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡುವುದಾಗಿದ್ದರೆ ಅವರ ಅಧಿಕಾರಾವಧಿಯಲ್ಲಿ ಆಗಬೇಕಿತ್ತು. ಬಳುವಳಿಯಾಗಿ ಪತ್ನಿಗೆ ಬಂದ ಆಸ್ತಿಯನ್ನು ಮುಡಾ ಬಳಸಿಕೊಂಡಿದ್ದು, ಅದರ ಬಾಬ್ತಾಗಿ ಪರ್ಯಾಯ ನಿವೇಶನ ನೀಡಿದೆ, ಅದುವೇ ಬಿಜೆಪಿ ಸರ್ಕಾರ ಇರುವಾಗ. ʼಈಗ ಸಿದ್ದರಾಮಯ್ಯ ದುರುಪಯೋಗ ಮಾಡಿಕೊಂಡಿದ್ದಾರೆ, ಲಾಭ ಮಾಡಿಕೊಂಡಿದ್ದಾರೆʼ ಅಂತ ಯಾರದ್ದೋ ದೂರಿಗೆ ರಾಜ್ಯಪಾಲರು ಯಾವುದೇ ಪೂರ್ವಾಪರ ಯೋಚಿಸದೆ, ತಿಳಿಯದೆ ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದು ಖಂಡನೀಯ. ರಾಜ್ಯಪಾಲರಿಗೆ ಲೋಕಾಯುಕ್ತ ಈಗಾಗಲೇ ಎಚ್ ಡಿ ಕುಮಾರಸ್ವಾಮಿ ಮೇಲೆ ಪ್ರಾಸಿಕ್ಯೂಷನ್ ಅನುಮತಿ ಕೋರಿ ಹತ್ತು ತಿಂಗಳು ಕಳೆದರೂ ನೀಡದೆ, ಸಿದ್ದರಾಮಯ್ಯ ಅವರ ಮೇಲೆ ದಿಢೀರ್ ತನಿಖೆಗೆ ಅನುಮತಿ ನೀಡಿರುವುದು ರಾಜ್ಯಪಾಲರ ಕಚೇರಿ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಅನ್ನುವುದಕ್ಕೆ ಸ್ಪಷ್ಟ ನಿದರ್ಶನ” ಎಂದರು.

ದಸಂಸ ಮುಖಂಡ ಮಲ್ಲಳ್ಳಿ ನಾರಾಯಣ ಮಾತನಾಡಿ, “ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷವೆಂದು ನಾವು ಸಭೆ ಸೇರಿಲ್ಲ. ನಾವು ಯಾವುದೇ ಪಕ್ಷದ ಮುಖಪುಟವೂ ಅಲ್ಲ. ನಾವು ಹೋರಾಟಗಾರರು ಸಂವಿಧಾನಕ್ಕೆ ಅಪಾಯ ಬಂದಾಗ ಅದನ್ನು ಖಂಡಿಸುವುದು ನಮ್ಮ ಕರ್ತವ್ಯ. ಸಿದ್ದರಾಮಯ್ಯ ಅವರು ಅಹಿಂದ ನಾಯಕರಾಗಿ ಬಂದವರು, ಜನರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡವರಲ್ಲ. ಹೀಗಾಗಿ ಯಾವುದೋ ಸಮಯದಲ್ಲಿ ನಡೆದ ಮುಡಾ ಪ್ರಕ್ರಿಯೆಗೆ, ಅವರ ಪಾತ್ರವೇ ಇಲ್ಲದ ಪ್ರಕರಣಕ್ಕೆ ರಾಜ್ಯಪಾಲರು ಅನುಮತಿ ನೀಡಿದ್ದು ಸರಿಯಲ್ಲ. ಇವತ್ತು ಇವರಿಗಾದ ಹಾಗೆ ನಾಳೆ ರಾಜ್ಯಪಾಲರನ್ನು ಬಳಸಿಕೊಂಡು ರಾಜಕೀಯವಾಗಿ ಹಣಿಯುವ ತಂತ್ರ ನಡೆಯುತ್ತದೆ. ಇದನ್ನು ತಡೆಯಬೇಕಿದೆ” ಎಂದರು.

ನೆಲೆ ಹಿನ್ನಲೆಯ ಜನಮನ ಗೋಪಾಲ್ ಮಾತನಾಡಿ, “ಬಹುಮತದಿಂದ ಆರಿಸಿ ಬಂದಿರುವ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ವಿರುದ್ಧ ಖಾಸಗಿ ವ್ಯಕ್ತಿ ತನಿಖೆಗೆ ಅನುಮತಿ ಕೋರಿದ ತಕ್ಷಣ ಸರಿಯಾ, ತಪ್ಪಾ? ಪರಾಮರ್ಶೆ ಮಾಡದೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದು, ಇದರಲ್ಲಿ ಬೇರೆಯದೇ ಸಂಚಿರುವಂತೆ ಕಾಣುತ್ತಿದೆ. ಸಿದ್ದರಾಮಯ್ಯ ಅವರದ್ದು ರಾಜಕೀಯ ನಿವೃತ್ತಿಯ ಸಮಯದಲ್ಲಿ, 50 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಕಳಂಕ ಇರದ ವ್ಯಕ್ತಿ ಮೇಲೆ ರಾಜಕೀಯವಾಗಿ ಹಣಿಯುವ, ಸುಭದ್ರ ಸರ್ಕಾರ ಅಸ್ಥಿರಗೊಳಿಸುವ ಪ್ರಕ್ರಿಯೆ ನಡೆಯುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಾದ ಕ್ರಮವಲ್ಲ. ನಾವು ಹೋರಾಟಗಾರರು ಯಾವುದೇ ಪಕ್ಷದವರಲ್ಲ. ಆದರೆ ತಪ್ಪಿಲ್ಲದ ತಪ್ಪಿಗೆ ತಪ್ಪು ಅನ್ನುವಾಗ ಕೈಕಟ್ಟಿ ಕೂರಲು ಸಾಧ್ಯವೇ ಇಲ್ಲ. ಹೋರಾಟದ ಮೂಲಕ ಪ್ರಶ್ನೆ ಮಾಡಬೇಕಿದೆ” ಎಂದರು.

ವಿಶ್ರಾಂತ ಕುಲಪತಿಗಳಾದ ಸಬಿಹಾ ಭೂಮಿಗೌಡ ಮಾತನಾಡಿ, “ರಾಜ್ಯಪಾಲರ ನಡೆ ಖಂಡನೀಯ. ಸಾರ್ವಜನಿಕ ಉನ್ನತ ಸ್ಥಾನದಲ್ಲಿರುವ ರಾಜ್ಯಪಾಲರು ಪೂರ್ವಗ್ರಹ ಪೀಡಿತರಾಗಿ, ಸಂವಿಧಾನ ಮೌಲ್ಯಗಳನ್ನು ಗಾಳಿಗೆ ತೂರಿ, ಕಾನೂನು ರೀತ್ಯಾ ನಡೆದುಕೊಳ್ಳದೆ. ಸರಿ ತಪ್ಪು ಗ್ರಹಿಸದೆ ತನಿಖೆಗೆ ಅನುಮತಿ ಕೊಟ್ಟಿರುವುದು ಸರಿಯಾದ ಕ್ರಮವಲ್ಲ” ಎಂದರು.

ಈ ಸುದ್ದಿ ಓದಿದ್ದೀರಾ? ಮುಡಾ ಹಗರಣ ಪ್ರಕರಣ | ಅಪರಾಧ ಪ್ರಕ್ರಿಯೆ ಸಂಹಿತೆ ಬದಲಿಗೆ ಬಿಎನ್‌ಎಸ್‌ಎಸ್‌ ಕಾಯ್ದೆ ಜಾರಿ: ಕಾನೂನು ತಜ್ಞ ವೇಣುಗೋಪಾಲ್

“ಇಂತಹ ಪಕ್ಷಪಾತಿ ರಾಜ್ಯಪಾಲರ ನಡೆಗಳನ್ನು ಖಂಡಿಸುವ ಸಲುವಾಗಿ ಕರ್ನಾಟಕ ಜನರಂಗ, ಎಲ್ಲ ಜನಪರ ಚಳವಳಿಗಾರರು ಹಾಗೂ ಪ್ರಗತಿಪರ ಸಂಘಟನೆಗಳೆಲ್ಲವನ್ನೂ ಒಳಗೊಂಡು ಇದೇ ಆಗಸ್ಟ್ 24ರ ಶನಿವಾರ ಸಂಜೆ 5 ಗಂಟೆಯಿಂದ ಆಗಸ್ಟ್ 25ರ ಭಾನುವಾರ ಸಂಜೆ 5 ಗಂಟೆಯವರೆಗೆ ಚಿಕ್ಕ ಗಡಿಯಾರ ವೃತ್ತದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು. ಇದು ಕೇವಲ ಒಂದು ಪಕ್ಷದ ಪರ, ಓರ್ವ ಮುಖ್ಯಮಂತ್ರಿಯ ಪರವಾದ ಹೋರಾಟ ಅಲ್ಲವೇ ಅಲ್ಲ. ರಾಜಭವನವನ್ನು ಬಳಸಿಕೊಂಡು ಪ್ರತೀಕಾರದ ರಾಜಕಾರಣ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸುವುದು ಈ ಹೋರಾಟದ ಪ್ರಮುಖ ಧ್ಯೇಯವಾಗಿದೆ” ಎಂದರು.

ಸಭೆಯಲ್ಲಿ ಸವಿತಾ ಪಾ ಮಲ್ಲೇಶ್, ಭೂಮಿಗೌಡ, ಎಂ ಎಫ್ ಕಲೀಮ್, ನೂರ್ ಮರ್ಚೆಂಟ್, ಸಂಚಾರಿ ಶ್ರೀನಿವಾಸ್, ಪತ್ರಕರ್ತ ಮೋಹನ್, ಅಸಾದುಲ್ಲಾ ಸೇರಿದಂತೆ ಪ್ರಗತಿಪರ ಸಂಘಟನೆಗಳ ಮುಖಂಡರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X