ಉಡುಪಿ | ಉದ್ಘಾಟನೆ ಭಾಗ್ಯವಿಲ್ಲದೆ ಅನಾಥ ಸ್ಥಿತಿಯಲ್ಲಿದೆ ಬೀಡಿನಗುಡ್ಡೆಯ ಅನಿಲ ಚಿತಾಗಾರ!

Date:

Advertisements

ಉಡುಪಿ ನಗರದ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿ ಬಳಿ ನಗರಸಭೆ ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ಪರಿಸರ ಸ್ನೇಹಿಯಾಗಿರುವ ಅನಿಲ ಚಿತಾಗಾರವನ್ನು ನಿರ್ಮಿಸಿದೆ. ಸಿದ್ಧಗೊಂಡು ಹಲವು ಸಮಯ ಕಳೆದಿದ್ದರೂ ಅನಿಲ ಚಿತಾಗಾರವು ಇನ್ನೂ ಉದ್ಘಾಟನೆ ಭಾಗ್ಯ ಪಡೆಯದೆ ಅನಾಥ ಸ್ಥಿತಿಯಲ್ಲಿದೆ. ಶೀಘ್ರವಾಗಿ ಲೋಕಾರ್ಪಣೆಗೊಳಿಸುವಂತೆ ಸಾರ್ವಜನಿಕ ವಲಯದಿಂದ ಆಗ್ರಹಗಳು ಸಹ ವ್ಯಕ್ತವಾಗುತ್ತಿವೆ.

ತಂತ್ರಜ್ಞಾನ ಮುಂದುವರಿದರೂ ಇನ್ನೂ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ಕಟ್ಟಿಗೆಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಪದ್ಧತಿಯಂತೆ ಅಂತ್ಯಸಂಸ್ಕಾರಗಳು ನಡೆಯುತ್ತಿವೆ. ಈ ಪದ್ಧತಿಯಿಂದ ಮರಗಳ ವಿನಾಶ ಹಾಗೂ ಶವ ದಹನದಿಂದಾಗುವ ಧೂಮ, ಹಾರುವ ಬೂದಿಯಿಂದ ಸುತ್ತಮುತ್ತಲಿನ ಪರಿಸರದಲ್ಲಿ ‘ವಾಯುಮಾಲಿನ್ಯ’ ಆಗುತ್ತಿದೆ.

ಬೀಡಿನ ಗುಡ್ಡೆ

ಪರಿಸರ ರಕ್ಷಿಸುವ ದೃಷ್ಟಿಕೋನದಿಂದ ನಗರಸಭೆ ಶವಸಂಸ್ಕಾರಕ್ಕೆ ಆಧುನಿಕ ತಂತ್ರಜ್ಞಾನದ ಅನಿಲ ಚಿತಾಗಾರವನ್ನು ಸಾಂಪ್ರದಾಯಿಕ ಚಿತಾಗಾರದ ಸಮೀಪವೇ ಸ್ಥಾಪಿಸಿದೆ. ಈ ಪರಿಸರಸ್ನೇಹಿ ಯೋಜನೆಗೆ ಸಾರ್ವಜನಿಕ ವಲಯದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತಾದರೂ, ಇಲ್ಲಿಯವರೆಗೆ ಉದ್ಘಾಟನೆ ಆಗದಿದ್ದಕ್ಕೆ ಬೇಸರ ಕೂಡ ವ್ಯಕ್ತವಾಗಿದೆ.

Advertisements

ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಈ ದಿನ.ಕಾಮ್ ಜೊತೆಗೆ ಮಾತನಾಡಿದ್ದು, “ಕಟ್ಟಿಗೆಯಿಂದ ಶವ ದಹಿಸಲು ಸುಮಾರು 2 ರಿಂದ 3 ಗಂಟೆಗಳು ಬೇಕಾಗುತ್ತದೆ. ಅನಿಲ ಚಿತಾಗಾರದಲ್ಲಿ ಬಹಳ ಕಡಿಮೆ ಸಮಯದಲ್ಲಿ ಕಳೇಬರವನ್ನು ಭಸ್ಮಗೊಳಿಸಬಹುದು” ಎಂದು ತಿಳಿಸಿದರು.

“ಅನಿಲ ಚಿತಾಗಾರದಲ್ಲಿ ಶವವನ್ನು ದಹಿಸುವಾಗ ಉತ್ಪತ್ತಿಯಾಗುವ ಧೂಮವು ನೇರವಾಗಿ ಪರಿಸರದಲ್ಲಿ ಪಸರಿಸುವುದಿಲ್ಲ. ಈ ಚಿತಾಗಾರವು ಧೂಮದಲ್ಲಿನ ರಾಸಾಯನಿಕ ಹಾಗೂ ಧೂಮವನ್ನು ನಿಯಂತ್ರಿಸಿಕೊಂಡು, ಶುದ್ದೀಕರಿಸಿದ ಧೂಮವನ್ನು ಚಿಮಿಣಿಯ ಮೂಲಕ ಹೊರಹಾಕಿಸುವ ನೂತನ ವ್ಯವಸ್ಥೆ ಹೊಂದಿರುತ್ತದೆ. ಪರಿಸರಸ್ನೇಹಿಯಾಗಿ ಅನಿಲ ಚಿತಾಗಾರವು ಕೆಲಸ ನಿರ್ವಹಿಸುತ್ತದೆ. ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡಿರುವ ಅನಿಲ ಚಿತಾಗಾರವನ್ನು ನಗರಾಡಳಿತ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಶೀಘ್ರವೇ ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಬೇಕು” ಎಂದು ಆಗ್ರಹಿಸಿದ್ದಾರೆ.

WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

Download Eedina App Android / iOS

X