ಉತ್ತರಾಖಂಡದ ರುದ್ರಪ್ರಯಾಗದ ಫಾಂಟಾ ಹೆಲಿಪ್ಯಾಡ್ ಬಳಿ ನಡೆದ ದುರಂತ ಘಟನೆಯಲ್ಲಿ, ಅವಶೇಷಗಳಡಿ ಸಿಲುಕಿ ನಾಲ್ವರು ನೇಪಾಳಿ ಪ್ರಜೆಗಳು ಸಾವನ್ನಪ್ಪಿದ್ದಾರೆ.
ರಾತ್ರಿ ಸುಮಾರು 1:20 ಗಂಟೆಗೆ ನೇಪಾಳಿ ಪ್ರಜೆಗೆಳು ಅವಶೇಷಗಳಡಿ ಸಿಲುಕಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ರವಾನಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜವರ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರಾಖಂಡ | ಭಾರೀ ಮಳೆ – ಭೂಕುಸಿತ; ಭದರಿನಾಥ ಹೆದ್ದಾರಿ ಬಂದ್
ಹಲವಾರು ಗಂಟೆಗಳ ತೀವ್ರ ಶೋಧ ಮತ್ತು ರಕ್ಷಣಾ ಪ್ರಯತ್ನಗಳ ನಂತರ, ನಾಲ್ವರೂ ನೇಪಾಳಿ ಪ್ರಜೆಗಳು ಶವವಾಗಿ ಪತ್ತೆಯಾಗಿದ್ದಾರೆ.
“ಅವಶೇಷಗಳಲ್ಲಿ ಸಿಲುಕಿದ್ದ ನಾಲ್ಕು ಜನರೂ ಕೂಡಾ ರಕ್ಷಣಾ ತಂಡಕ್ಕೆ ಶವವಾಗಿ ಪತ್ತೆಯಾಗಿದ್ದಾರೆ. ಅವರೆಲ್ಲರೂ ನೇಪಾಳಿ ಪ್ರಜೆಗಳಾಗಿದ್ದು, ಅವರ ಮೃತದೇಹಗಳನ್ನು ಡಿಡಿಆರ್‌ಎಫ್ ತಂಡವು ರುದ್ರಪ್ರಯಾಗಕ್ಕೆ ತರುತ್ತಿದೆ” ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಹೇಳಿದ್ದಾರೆ.
#UPDATE | Rudrapyarag, Uttarakhand: All 4 people trapped in the debris were found dead by the rescue teams. All of them are Nepali nationals and their bodies are being brought to Rudraprayag by the DDRF team: District Disaster Management Officer Nandan Singh Rajwar https://t.co/VuX95FhEBz
— ANI UP/Uttarakhand (@ANINewsUP) August 23, 2024