ನಾಗರಿಕ ಸೌಲಭ್ಯದ (ಸಿ.ಎ) ನಿವೇಶನ ಪಾರದರ್ಶಕ ಹಂಚಿಕೆ, ಯಾವ ಅಕ್ರಮವೂ ಇಲ್ಲ: ಸಚಿವ ಎಂ ಬಿ ಪಾಟೀಲ್‌

Date:

Advertisements

ಬೃಹತ್‌ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್‌ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌ಗೆ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಎಂಬುವರು ದೂರು ಸಲ್ಲಿಸಿದ ಬೆನ್ನಲ್ಲೇ ಸಚಿವರು ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ.

ಕೆಐಎಡಿಬಿಯಲ್ಲಿ ಸಿ.ಎ ನಿವೇಶನಗಳ ಹಂಚಿಕೆಗೆ ಕೈಗೊಂಡ ಪಾರದರ್ಶಕ ಕ್ರಮಗಳ ಬಗ್ಗೆ ಸಚಿವ ಎಂ ಬಿ ಪಾಟೀಲ್‌ ದಿಢೀರ್ ಪತ್ರಿಕಾಗೋಷ್ಠಿ‌ ಕರೆದು ಮಾಹಿತಿ ನೀಡಿದರು.

“ಸಿ.ಎ ನಿವೇಶನಗಳನ್ನು ಅತ್ಯಂತ ಪಾರದರ್ಶಕ ವ್ಯವಸ್ಥೆ ಮೂಲಕ ನಿಯಮಾನುಸಾರ ಹಂಚಿಕೆ ಮಾಡಲಾಗುತ್ತಿದೆ. ನಾಗರಿಕ ಸೌಲಭ್ಯದ (CA) ನಿವೇಶನಗಳನ್ನು ಅರ್ಹ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಯಾವ ಅಕ್ರಮವೂ ಆಗಿಲ್ಲ” ಎಂದರು.

Advertisements

“ಇಷ್ಟಕ್ಕೂ ಸಿ.ಎ ನಿವೇಶನಗಳನ್ನು ಪ್ರಕಾರ ಹರಾಜು ಹಾಕುವ ಪದ್ದತಿಯಿಲ್ಲ. ವಾಣಿಜ್ಯ ಉದ್ದೇಶದ ನಿವೇಶನಗಳನ್ನು ಮಾತ್ರ ಹರಾಜು ಹಾಕಲು ಅವಕಾಶ ಇದೆ. ಸಿ.ಎ ನಿವೇಶನಗಳ ಹಂಚಿಕೆಗಾಗಿ ಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರ ಕೊಡುವುದರ ಜತೆಗೆ ಇಲಾಖಾ ವೆಬ್ ಸೈಟ್ ನಲ್ಲೂ ಪ್ರಕಟಿಸಲಾಗಿದೆ. ವೆಬ್ ಸೈಟ್ ನಲ್ಲಿ ಹಾಕುವ ವ್ಯವಸ್ಥೆ ಮೊದಲು ಇರಲಿಲ್ಲ. ಇದೇ ಮೊದಲು” ಎಂದು ಹೇಳಿದರು.

“ಸಿ.ಎ ನಿವೇಶನಗಳ ಹಂಚಿಕೆಯನ್ನು ಹಿಂದೆಲ್ಲ ಸರ್ಕಾರದಿಂದ ಅನುಮೋದನೆ ಪಡೆದು ನೇರವಾಗಿ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಹಂಚಿಕೆ ಹೆಚ್ಚು ಪಾರದರ್ಶಕವಾಗಿ ನಡೆಯಲಿ ಎನ್ನುವ ಕಾರಣಕ್ಕೆ ಮೊದಲು ಸಿ.ಇ.ಒ., ಇವರ ಅಧ್ಯಕ್ಷತೆಯಲ್ಲಿನ ಉಪಸಮಿತಿ ಅರ್ಹತೆಯನ್ನು ಪರಿಶೀಲಿಸಿ ಇಲಾಖಾ ಸಚಿವರ ಅಧ್ಯಕ್ಷತೆಯ ರಾಜ್ಯ ಮಟ್ಟದ ಏಕ ಗವಾಕ್ಷಿ ಸಮಿತಿಗೆ ಶಿಫಾರಸ್ಸು ಮಾಡಿದ ನಂತರ ಈ ರಾಜ್ಯ ಮಟ್ಟದ ಸಮಿತಿ ತೀರ್ಮಾನದ ಮೂಲಕ ಅರ್ಹರಿಗೇ ಹಂಚಿಕೆ ಮಾಡಲಾಗಿದೆ” ಎಂದರು.

“ಈ ಸಮಿತಿಯಲ್ಲಿ ಅಭಿವೃದ್ಧಿ ಆಯುಕ್ತರು, ಇಲಾಖಾ ಪ್ರಧಾನ ಕಾರ್ಯದರ್ಶಿ, ಇತರೆ ಇಲಾಖೆಯ ಪ್ರಧಾನ ಕಾರ್ಯದರ್ಶಿ/ಇಲಾಖಾ ಮುಖ್ಯಸ್ಥರು, ಕೈಗಾರಿಕಾ ಆಯುಕ್ತರು, ಸಿ.ಇ.ಒ., ಕೆಐಎಡಿಬಿ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಉದ್ಯೋಗ ಮಿತ್ರ ಹಾಗೂ ಇತರೆ ಎಲ್ಲಾ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿರುತ್ತಾರೆ” ಎಂದು ವಿವರಿಸಿದರು.

“ಈ ಬಾರಿ ಒಟ್ಟು 377.69 ಎಕರೆ ಪ್ರದೇಶದ 193 ನಿವೇಶನಗಳಿಗೆ ಅರ್ಜಿ ಅಹ್ವಾನಿಸಲಾಗಿದ್ದರೂ ಕೇವಲ 43 ನಿವೇಶನಗಳನ್ನು (96.59 ಎಕರೆ) ಮಾತ್ರ ಹಂಚಿಕೆ ಮಾಡಲಾಗಿದೆ. ಅಂದರೆ ಅಂದಾಜು 25% ಮಾತ್ರ ಹಂಚಿಕೆ ಮಾಡಿದ್ದು ಉಳಿದ ನಿವೇಶನಗಳು ಹಂಚಿಕೆಗೆ ಬಾಕಿ ಇವೆ” ಎಂದರು.

“ಒಂದೊಂದೇ ಅರ್ಜಿ ಬಂದ ಪ್ರಕರಣಗಳಲ್ಲಿ ಅಂತಹ ಹಂಚಿಕೆಯನ್ನು ಮಾಡಲು ಅವಕಾಶವಿದ್ದರೂ (ಇದು ಟೆಂಡರ್ ಪ್ರಕ್ರಿಯೆ ಅಲ್ಲ) ಇದನ್ನು ಪರಿಗಣಿಸದೆ ಹೊಸದಾಗಿ ನೋಟಿಫಿಕೇಷನ್ ಮಾಡಲಾಗುತ್ತಿದೆ. ಇದರಿಂದ ಅರ್ಹರಿಗೆ ಇನ್ನಷ್ಟೂ ಅವಕಾಶ ಲಭ್ಯವಾಗಲಿದೆ. 41 ಕಡೆ ಒಂದೊಂದೇ ಅರ್ಜಿ ಬಂದಿತ್ತು. ಅದನ್ನು ಮತ್ತೆ ಹೊಸದಾಗಿ ಕರೆದಿದ್ದೇವೆ” ಎಂದು ಹೇಳಿದರು.

“ಮತ್ತೊಂದು ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಸಿ.ಎ ನಿವೇಶನಗಳ ಹಂಚಿಕೆಯಲ್ಲೂ ಪರಿಶಿಷ್ಟ ಜಾತಿ/ಪಂಗಡದವರಿಗೆ ಶೇ 24.10 ರಷ್ಟು ಮೀಸಲಿಡುವ ಐತಿಹಾಸಿಕ ತೀರ್ಮಾನ ನನ್ನ ಅವಧಿಯಲ್ಲಿ ಆಗಿದೆ. 2018ರ ಸರ್ಕಾರದ ತೀರ್ಮಾನದಂತೆ 1½ ಪಟ್ಟು ಹಂಚಿಕೆ ದರ ಇದ್ದಿದ್ದನ್ನು ದಿನಾಂಕ: 07.06.2021ರಂದು ಸರ್ಕಾರದಲ್ಲಿ prevailing allotment rate ಗೆ ಹಂಚಿಕೆ ಮಾಡಲು ತೀರ್ಮಾನಿಸಿ ಅದರಂತೆ ಕೆಐಎಡಿಬಿ ಗೆ ಸೂಚನೆ ನೀಡಲಾಗಿದೆ. ಹಾಗಾಗಿ ನನ್ನ ಅವಧಿಯಲ್ಲಿ ಸಿಎ ನಿವೇಶನಗಳ ಹಂಚಿಕೆ ದರವನ್ನು ಕಡಿಮೆ ಮಾಡಿಲ್ಲ. ಬದಲಿಗೆ ಹಂಚಿಕೆಯನ್ನು ಪಾರದರ್ಶಕವಾಗಿ ಮಾಡಲು ಕ್ರಮವಹಿಸಿದೆ” ಎಂದು ವಿವರಿಸಿದರು.

“ಸಿ.ಎ ನಿವೇಶನಗಳು ನಾಗರೀಕ ಸೌಲಭ್ಯದ ಉದ್ದೇಶಕ್ಕಾಗಿ ಮತ್ತು ಕೈಗಾರಿಕೆಗಳ ಪೂರಕ ಉದ್ಧೇಶಗಳಿಗೆ ಬಳಕೆಯಾಗುವುದರಿಂದ ಹೆಚ್ಚಿನ ದರ ವಿಧಿಸಲಾಗುತ್ತಿಲ್ಲ. ಅಲ್ಲದೇ ಕೆಐಎಡಿಬಿಯು no profit no loss ಸಂಸ್ಥೆಯಾಗಿರುತ್ತದೆ. ಕೆಐಎಡಿಬಿ ನಿಯಮಾವಳಿಗಳ ನಿಯಮ 7 ರಲ್ಲಿ ಕೆಐಎಡಿಬಿ ನಿವೇಶನಗಳ ಹಂಚಿಕೆಗಾಗಿ ವ್ಯಾಪಕ ಪ್ರಚಾರ/ಪತ್ರಿಕಾ ಪ್ರಕಟಣೆ ನೀಡಬೇಕೆಂಬ ನಿಯಮವಿದ್ದು ಅದರಂತೆ ವ್ಯಾಪಕ ಪ್ರಚಾರ ನೀಡಲಾಗಿದೆ. ಹಾಗಾಗಿ ನಿಯಮ ಉಲ್ಲಂಘನೆಯಾಗಿಲ್ಲ” ಎಂದರು.

“ಬೆಂಗಳೂರು ಮಾತ್ರವಲ್ಲದೇ ರಾಜ್ಯದ 21 ಜಿಲ್ಲೆಗಳಲ್ಲೂ ಇರುವ ಸಿಎ ನಿವೇಶನಗಳ ಹಂಚಿಕೆಗೆ ಅರ್ಜಿ ಅಹ್ವಾನಿಸಿ ಹಂಚಿಕೆ ಮಾಡಲಾಗಿದೆ” ಎಂದು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X