ಶಿವಮೊಗ್ಗ | ಜನ ಸಂಪರ್ಕ ಸಭೆ; ಎಸ್‌ಪಿ ಮಿಥುನ್ ಕುಮಾರ್ ಭಾಗಿ

Date:

Advertisements

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ, ಸುನ್ನಿ ಜಾಮಿಯಾ ಮಸೀದಿ ಕಮಿಟಿ ಮತ್ತು ಸುನ್ನಿ ಜಮಾಯತುಲ್ ಉಲ್ಮಾ ಕಮಿಟಿಯ ಸಹಯೋಗದಲ್ಲಿ ಗಾಂಧಿ ಬಜಾರಿನ ಜಾಮಿಯಾ ಮಸೀದಿಯಲ್ಲಿ ಜನ ಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ ಮಾತನಾಡಿದ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್, “ನಮ್ಮ ಹಬ್ಬ ನಮ್ಮ ದೇವರಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಮಾಡಬೇಕು. ಆದರೆ, ಕೆಲವೊಂದು ಕಿಡಿಗೇಡಿಗಳಿಂದ ಹಬ್ಬಗಳ ಸಂದರ್ಭದಲ್ಲಿ ಎಲ್ಲರಿಗೂ ತೊಂದರೆಯಾಗುತ್ತದೆ. ಈ ವರ್ಷದಿಂದ ಮಸೀದಿ ಕಮಿಟಿಗಳಿಗೆ ಮೆರವಣಿಗೆ ಜವಾಬ್ದಾರಿ ನೀಡುತ್ತಿದ್ದೇವೆ. ಹಿಂದೂ ಮುಸ್ಲಿಂ ಎರಡೂ ಕಣ್ಣುಗಳು ನಮಗೆ ಮುಖ್ಯ. ಇಲಾಖೆಯ ನಂಬಿಕೆ ಉಳಿಸಿಕೊಂಡು ಭಾರತೀಯ ನಾಗರೀಕರಾಗಿ ಕೆಲಸ ಮಾಡಬೇಕು” ಎಂದು ಹೇಳಿದರು.

ಹಬ್ಬಗಳ ಆಚರಣೆ ವಿಭಿನ್ನವಾಗಿರುತ್ತದೆ. ಮೊಹಮ್ಮದ್ ಪೈಗಂಬರರ ಹುಟ್ಟು ಹಬ್ಬ ಆಚರಣೆ ಈದ್ ಮಿಲಾದ್, ಗಣಪತಿ ಹಬ್ಬದ ಆಚರಣೆ ದೇವರನ್ನು ಮೆಚ್ಚಿಸುವ ಹಾಗಿರಲಿ. ಪೈಪೋಟಿಗೆ ಬಿದ್ದು ಹಬ್ಬಗಳ ಆಚರಣೆ ನಡೆಯಬಾರದು ಎಂದು ಕಿವಿಮಾತು ಹೇಳಿದರು.

Advertisements

ನಾಲ್ಕಾರು ಜನ ನೋಡಿ ಹೆಮ್ಮೆ ಪಡುವಂತೆ ಹಬ್ಬಗಳ ಆಚರಣೆ ನಡೆಯಲಿ. ಭಯಮುಕ್ತವಾಗಿ ಹೆಣ್ಣುಮಕ್ಕಳು, ಮಕ್ಕಳು ಹಬ್ಬಗಳಲ್ಲಿ ಪಾಲ್ಗೊಳ್ಳುವಂತಿರಬೇಕು. ಕೆಲ ಕಿಡಿಗೇಡಿಗಳು ಕಾನೂನು ಮೀರಿ ಸಮಸ್ಯೆ ಉಂಟು ಮಾಡುತ್ತಾರೆ ಎಂದರು.

ಏನೇ ಆಚರಣೆ, ಮೆರವಣಿಗೆ ಇದ್ದರೂ ಮುಂಚಿತವಾಗಿ ಮಸೀದಿಯ ಜೊತೆಗೆ, ಪೊಲೀಸ್ ಇಲಾಖೆಯ ಜೊತೆಗೆ ಚರ್ಚೆಗಳು ನಡೆಯಬೇಕು. ಈವರೆಗೆ 277 ಸಭೆಗಳು ಗಣಪತಿ, ಈದ್ ಮಿಲಾದ್ ಸಭೆಗಳನ್ನು ಇಲಾಖೆ ಮಾಡಿದೆ. ಅತ್ಯಂತ ಹೆಚ್ಚಿನ ಸಭೆಗಳು ಆಗಿವೆ. ಒಳ್ಳೆಯ ನಾಗರಿಕರಿಗೆ ರಕ್ಷಣೆ ಕೊಡುವ ಕೆಲಸ ಇಲಾಖೆ ಮಾಡುತ್ತದೆ. ನಂಬಿಕೆ ಇಡಿ. ಹೊರಗಿನ ಜನ ಹೊಗಳೋ ಹಾಗೆ ಹಬ್ಬಗಳನ್ನು ಮಾಡೋಣ ಎಂದು ಮಿಥುನ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನು ಓದಿದ್ದೀರಾ? ‘ಈ ದಿನ’ ಫಲಶೃತಿ | ಚಿಕ್ಕಮಗಳೂರಿನ ಬೆಳಗೋಡು ಅಂಗನವಾಡಿಗೆ ‘ವಿದ್ಯುತ್ ಭಾಗ್ಯ’

ಸಂಭ್ರಮಾಚರಣೆ ಶೋಕಾಚರಣೆ ಆಗುತ್ತಿದೆ. ಭಕ್ತಿ ಬಿಟ್ಟು ತೋರ್ಪಡಿಕೆಯಲ್ಲಿ ಪೈಪೋಟಿ ನಡೆಯುತ್ತಿದೆ. ಕ್ಷುಲ್ಲಕ ಕಾರಣಕ್ಕಾಗಿ ರಾಗಿಗುಡ್ಡ ಘಟನೆ ನಡೆಯಿತು. ಮನೆ ಮಠ ಬಿಟ್ಟು ಓಡೋದೋರು ಇನ್ನೂ ಮನೆಗೆ ಬಾರದ ಸ್ಥಿತಿ ಬೇಕಾ? ಪ್ರಕರಣಗಳು ದಾಖಲಾಗುವಂತಾಯಿತು. ಸಂಭ್ರಮ ಶೋಕವಾಯ್ತು ಎಂದು ಅಡಿಷನಲ್ ಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ ಹೇಳಿದರು.

ಸಭೆಯಲ್ಲಿ ಅಬ್ದುಲ್ ಸತ್ತಾರ್ ಬೇಗ್, ಕಾರ್ಯದರ್ಶಿ ಏಜಾಜ್ ಪಾಷ, ಮಸೀದಿ ಅಧ್ಯಕ್ಷ ಮುನವರ್ ಪಾಷ, ವಕ್ಫ್ ಬೋರ್ಡ್ ಅಧಿಕಾರಿ ಸೈಯದ್ ಮಹತಾಬ್ ಸರ್ವರ್, ಡಿಎಸ್ ಪಿ ಆಂಜನಪ್ಪ, ಸಿಪಿಐ ರವಿ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X