ಬಸವತತ್ವ ಪ್ರಚಾರ, ಅನಾಥ ಮಕ್ಕಳ ಪಾಲನೆ ಹಾಗೂ ಶ್ರೀವಿಧಿ ದಾಸೋಹಿಯಂತೆ ಸದಾ ಸಮಾಜ ಪರಿವರ್ತನೆಗಾಗಿ ಶ್ರಮಿಸುತ್ತಿರುವ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರ ಕೊಡುಗೆ ಅಪಾರವಾಗಿದೆ ಎಂದು ಔರಾದ ತಾಲೂಕಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ಮುಕ್ತೆದಾರ ಹೇಳಿದರು.
ಔರಾದ ತಾಲೂಕಿನ ಸಂತಪೂರ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ನಾಡೋಜ ಡಾ. ಬಸವಲಿಂಗ ಪಟ್ಟದೇವರ 74ನೇ ಜನ್ಮದಿನದಂದು ಅನಾಥ (ಸುದೈವಿ) ಮಕ್ಕಳಿಗೆ ಬಟ್ಟೆ ಹಾಗೂ ಕಾಣಿಕೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ʼರಾಜ್ಯದಲ್ಲಿ ಕನ್ನಡ ಮಠವೆಂದು ಖ್ಯಾತಿ ಗಳಿಸಿದ ಭಾಲ್ಕಿ ಹಿರೇಮಠದ ನಾಡೋಜ ಡಾ.ಬಸವಲಿಂಗ ಪಟ್ಟದೇವರ ಜನ್ಮದಿನವನ್ನು ರಾಜ್ಯ ಸರ್ಕಾರದಿಂದ ಆಚರಣೆ ಆಗಬೇಕುʼ ಆಗ್ರಹಿಸಿದರು.
ದಸಂಸ ಜಿಲ್ಲಾ ಸಂಚಾಲಕ ಧನರಾಜ್ ಮುಸ್ತಾಪುರೆ ಮಾತನಾಡಿ, ʼಬಸವಲಿಂಗ ಪಟ್ಟದ್ದೇವರ ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ. ಶ್ರೀಗಳ ಸಮಾಜಮುಖಿ ಕಾರ್ಯ ಹೀಗೆ ಮುಂದುವರೆಯಲಿʼ ಎಂದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ, ʼಮಾತೃ ಹೃದಯಿ, ಶಿಕ್ಷಣ ಪ್ರೇಮಿ ಡಾ.ಬಸವಲಿಂಗ ಪಟ್ಟದ್ದೇವರು ಶಿಕ್ಷಣಕ್ಕೆ ತೋರುತ್ತಿರುವ ಆಸಕ್ತಿಯಿಂದ ಶಾಲಾ-ಕಾಲೇಜಿನಲ್ಲಿ ಪ್ರತಿಶತ ಫಲಿತಾಂಶ ಪಡೆಯುತ್ತಿವೆ. ಗಡಿ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಅನನ್ಯವಾಗಿದೆʼ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶಿವಪುತ್ರ ಧರಣಿ, ರಾಜಕುಮಾರ ಹಳ್ಳಿಕರ್, ಸುಧಾ ಕೌಟಿಗೆ, ಮೀರಾತಾಯಿ ಕಾಂಬಳೆ, ಪ್ರಿಯಾಂಕಾ ಗುನ್ನಳ್ಳಿಕರ್, ವನದೇವಿ ಎಕ್ಕಳೆ, ರೇಣುಕಾ ಜಮಾದಾರ, ಜಿತೇಂದ್ರ ಡಿಗ್ಗಿ, ಸುಧೀರ್ ಆಲೂರೆ,ಸುನೀತಾ ಮಠಪತಿ ಇದ್ದರು.