ಲಿಂಗಸಗೂರು ತಾಲೂಕಿನ ಐದಭಾವಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮೊದಲನೇ ಆರೋಪಿ ಲಕ್ಷ್ಮಣ ಬಸಪ್ಪ ಸೇರಿ 18 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5,500 ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಬಿ.ಬಿ .ಜಕಾತಿ ಆದೇಶ ಹೊರಡಿಸಿದ್ದಾರೆ.
2010ರಲ್ಲಿ ಐದಭಾವಿ ಗ್ರಾಮದಲ್ಲಿ ದುರುಗಮ್ಮ ದೇವಿ ಜಾತ್ರೆ ಸಂದರ್ಭದಲ್ಲಿ ಹಳೆ ದ್ವೇಷದಿಂದ ಶರಣಪ್ಪ ಎಂಬುವರನ್ನು ಅಪರಾಧಿಗಳು ಮಾರಾಕಾಸ್ರ್ತಗಳಿಂದ ಕೊಲೆ ಮಾಡಿದ್ದರು.
ಸಿಪಿಐಗಳಾದ ಪ್ರಭುಗೌಡ ಮಸ್ಕಿ ಹಾಗೂ ಜಿ.ಆರ್.ಶಿವಮೂರ್ತಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದಾರೆ.
