ಅಪರಿಚಿತ ಬಂದೂಕುಧಾರಿಗಳು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಗುರುತಿನ ಚೀಟಿ ಪರಿಶೀಲಿಸಿದ ಬಳಿಕ ಬಸ್ನಲ್ಲಿ ಪ್ರಯಾಣಿಸುತ್ತಿದ್ದ 23 ಮಂದಿಗೆ ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಬಂದೂಕುಧಾರಿಗಳು ಬಸ್ ಒಂದನ್ನು ತಡೆದು ನಿಲ್ಲಿಸಿ, ಪ್ರಯಾಣಿಕರನ್ನು ಬಸ್ನಿಂದ ಕೆಳಗಿಳಿಸಿ, ಅವರ ಗುರುತಿನ ಚೀಟಿಗಳನ್ನು ಪರಿಶೀಲಿಸಿ ಬಳಿಕ ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಪಾಕಿಸ್ತಾನದ ಬಲೂಚಿಸ್ತಾನದ ಮುಸಾಖೆಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇನ್ನು ಶಸ್ತ್ರಸಜ್ಜಿತ ಗುಂಪು ಸುಮಾರು 10 ವಾಹನಗಳಿಗೆ ಬೆಂಕಿ ಹಚ್ಚಿದೆ.
ಇದನ್ನು ಓದಿದ್ದೀರಾ? ಫರಿದಾಬಾದ್| ಕಾಂಗ್ರೆಸ್ ನಾಯಕನ ಸಹೋದರನಿಗೆ ಗುಂಡಿಕ್ಕಿ ಹತ್ಯೆ; ಐವರ ಬಂಧನ
ಈ ಬಗ್ಗೆ ಮಾಹಿತಿ ನೀಡಿದ ಸಹಾಯಕ ಕಮಿಷನರ್ ಮುಸಖೈಲ್ ನಜೀಬ್ ಕಾಕರ್, “ಸಶಸ್ತ್ರ ಗುಂಪು ಮುಸಾಖೇಲ್ನ ರಾರಶಮ್ ಜಿಲ್ಲೆಯಲ್ಲಿ ಅಂತರ-ಪ್ರಾಂತೀಯ ಹೆದ್ದಾರಿಯಲ್ಲಿ ಅಡ್ಡಲಾಗಿ ನಿಂತಿತ್ತು. ಪ್ರಯಾಣಿಕರನ್ನು ಬಸ್ಗಳಿಂದ ಇಳಿಸಿದೆ. ಬಳಿಕ ಗುಂಡಿಕ್ಕಿ ಕೊಂದಿದೆ” ಎಂದು ಮಾಹಿತಿ ನೀಡಿದ್ದಾರೆ.
ಮೃತರನ್ನು ಪಂಜಾಬ್ ಪ್ರಾಂತ್ಯಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ. ಇದುವರೆಗೆ ಯಾವುದೇ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
At least 23 people from Punjab have been killed in Balochistan’s Musakhel district after BLA terrorists offloaded passengers from trucks and buses and shot at them after checking their identities : Security forces
— Malik Ali Raza (@MalikAliiRaza) August 26, 2024
Operation against terrorist still continues in #Balochistan. pic.twitter.com/PAaOCkoWNR