ವಿಶ್ವೇಶ್ವರ ಭಟ್ಟರಿಗೆ ತಮ್ಮ ಕುಟುಂಬ ವರ್ಗದ ಪುರೋಹಿತರ ಭವಿಷ್ಯ ಕತ್ತಲಾಗುವ ಭಯ ಕಾಡಿದೆ. ಅದಕ್ಕಾಗಿ ‘ತಿಕ್ಕಲ’ನಂತೆ ವರ್ತಿಸಿ, ಆಕಾಶಕ್ಕೆ ಉಗುಳುತ್ತಿದ್ದಾರೆ. ಹಾಗಾಗಿ ಅಪ್ರಬುದ್ಧ, ಅಸಂಬದ್ಧ ಲೇಖನ ಬರೆದಿದ್ದಾರೆ. ಭಟ್ಟರ ತೋಳಸಂಬಟ್ಟೆ ಮಾತ್ರ ಬಹಿರಂಗವಾಗಿದೆ.
ಪತ್ರಕರ್ತ ಸ್ನೇಹಿತರೊಂದಿಗೆ ಮಾತಿಗಿಳಿದು ‘ಈ ವಿಶ್ವೇಶ್ವರ ಭಟ್ಟ ಮತ್ತೆ ಮತ್ತೆ ನಮಗೆ ತಗಲಾಕಿಕೊಳ್ಳುತ್ತಿದ್ದಾನಲ್ಲ? ಎಂದು ಕೇಳುತ್ತ, ಅವನ ತಗಡು ಪತ್ರಿಕೆಯಲ್ಲಿ ಬರೆದುಕೊಂಡ ‘ಸಾಣೇಹಳ್ಳಿ ಶ್ರೀಗಳೇ, ಸಾಕು ಮಾಡಿ ನಿಮ್ಮ ಗೊಡ್ಡು ಪುರಾಣ’ ಎಂಬ ಲೇಖನ ಉದಾಹರಿಸಿದೆ. ಆಗ ಅವರು ನಕ್ಕು ಹೇಳಿದ್ದಿಷ್ಟು “ಈ ಭಟ್ಟನಿಗೆ ಬೇರೆಯವರಿಂದ ಬೈಸಿಕೊಂಡಾಗ ಆನಂದ ಸಿಗುತ್ತೆ ಕಣ್ರೀ… ವಿಕೃತ ಕಾಮಿಗಳಂತೆ ಅವನಿಗೂ ಒಂದು ವಿಚಿತ್ರ ಕಾಯಿಲೆ ಇದೆ. ಬೇರೆಯವರಿಂದ ಉಗಿಸಿಕೊಂಡಾಗ ಮಾತ್ರ ಅವನಿಗೆ ಆನಂದ ಸಿಗುತ್ತೆ…. ಈ ಕಾಯಿಲೆ ಅನೇಕ ವರ್ಷಗಳಿಂದಲೂ ಇದೆ. ಬಿಟ್ಟಾಕಿ ಅವನನ್ನು” ಎಂದರು. ಕುತೂಹಲದಿಂದ ಮರುಪ್ರಶ್ನೆ ಮಾಡಿದೆ “ಬೈಸಿಕೊಂಡರೆ ಆನಂದ ಸಿಗುತ್ತಾ? ಇದೊಂದು ಕಾಯಿಲೆಯೇ?” ಎಂದೆ. “ಹೌದು. ಕೊಲೆಗಡುಕರು ಯಾಕೆ ಕೊಲೆ ಮಾಡುತ್ತಾರೆ ಹೇಳಿ? ಅವರಿಗೆ ಕೊಲೆ ಮಾಡಿದರೆ ಜೈಲಿಗೆ ಹೋಗುತ್ತೇವೆ ಎಂದು ತಿಳಿಯದೇ? ಹ್ಯಾಬಿಚುಅಲ್ ರೇಪಿಸ್ಟ್ ಪದೇ ಪದೇ ಅದೇ ಕೆಲಸ ಮಾಡುತ್ತಾನೆ ಏಕೆ ಹೇಳಿ? ಕಳ್ಳರ ಕಳ್ಳ ಚಾರ್ಲ್ಸ್ ಶೋಭರಾಜ್ ಮತ್ತೆ ಮತ್ತೆ ದರೋಡೆ ಮಾಡುತ್ತಿರಲಿಲ್ಲವೇ? ಇಂತಹುದೇ ರೋಗ ಈ ಭಟ್ಟರಿಗೂ ಅಂಟಿಕೊಂಡಿದೆ” ಎಂದು ಮಾತು ಬದಲಿಸಿದರು.
ಭಟ್ಟರ ವಿಷದ ಬಾಣಗಳು ನನ್ನನ್ನು ಪದೇಪದೇ ಚುಚ್ಚುತ್ತಿದ್ದವು, ಘಾಸಿಗೊಳಿಸುತ್ತಿದ್ದವು. ಒಬ್ಬ ಪತ್ರಿಕೆಯ ಸಂಪಾದಕ ಎಂದು ಹೇಳಿಕೊಳ್ಳುವವರು ಜಂಗಮರಿಗೆ, ಹಿರಿಯ ನಾಗರಿಕರಿಗೆ, ಅನೇಕ ಗ್ರಂಥ ರಚಿಸಿದ ಪ್ರಾಜ್ಞರಿಗೆ, ಪೂಜ್ಯರಾದ ಸಾಣೇಹಳ್ಳಿ ಶ್ರೀಗಳಿಗೆ ಬಳಸಿದ ಪದಗಳನ್ನು ಗಮನಿಸಿ. ಅವುಗಳ ಸ್ಯಾಂಪಲ್ ಇಲ್ಲಿವೆ ನೋಡಿ. ಅಸಂಬದ್ಧ, ತೋಳಸಂಬಟ್ಟೆ, ಅರೆಬೆಂದ, ಬುದ್ಧಿಮಟ್ಟ, ಅರಳು ಮರಳು, ಉದ್ಧಟತನ, ಬಾಲಿಶ, ಬೇಜವಾಬ್ದಾರಿ, ಎಡಬಿಡಂಗಿ, ಉಪದ್ವಾಪಿತನ, ಸಮಾಜಘಾತಕ, ಉಸಾಬರಿ, ತಿರಸಟ್ಟು, ಅವಿವೇಕ, ಅಪಕ್ವ, ನಕ್ಸಲ್ವಾದಿ… ಎಂಬಂತಹ ಅವಮಾನಕರ ಶಬ್ಧಗಳನ್ನು ಬಳಕೆ ಮಾಡಿ ಪ್ರಾಜ್ಞರ ತೇಜೋವಧೆ ಮಾಡಿದ್ದಾರೆ. ಇಂತಹ ಪದಗಳನ್ನು ಪ್ರಾಜ್ಞರಾದ ಕನ್ನಡಿಗರು ಅರಗಿಸಿಕೊಳ್ಳಬಲ್ಲರೇ?

ನಾನೊಬ್ಬ ಸಾಮಾನ್ಯನಾಗಿ ಇಂತಹ ಕನಿಷ್ಠ ಮಾತುಗಳನ್ನು ಆ ಭಟ್ಟನಿಗೆ ಬಳಸಲಾರೆ. ಕಾರಣ ಲಿಂಗಾಯತರು ಸುಸಂಸ್ಕೃತರು. ಹೀನ ಚಾಳಿಯ ಜನರು ಬಳಸುವ ಪದವು ನಮಗೆ ಬಾರದು. ಇವರಿಗೆ ಏಕವಚನದಲ್ಲಿ ಬರೆಯಲು ಸಹ ನನಗೆ ಮುಜುಗರವಾಗುತ್ತಿದೆ. ಆದರೂ ಪ್ರಜ್ಞಾಪೂರ್ವಕವಾಗಿ ‘ಇವನು’ ಎಂದು ಸಂಬೋಧಿಸ ಬಯಸುತ್ತೇನೆ. ಆದರೆ, ನನ್ನ ಹಿರಿತನ ನನಗೆ ಅಡ್ಡಬರುತ್ತಿದೆ.
‘ಗಣೇಶನ ಪೂಜೆ ಬೇಡ’ ಎಂಬ ಸ್ವಾಮೀಜಿಗಳ ಹೇಳಿಕೆಯಿಂದ ಬಹುಜನರ ನಂಬಿಕೆಗೆ ಧಕ್ಕೆಯಾಗುತ್ತದೆ ಎಂದು ಬರೆಯುತ್ತಾರೆ. ನಿಮಗೆ ಶತಶತಮಾನಗಳಿಂದ ಆಚರಿಸುತ್ತ ಬಂದಿರುವ ಆಚರಣೆ ಮತ್ತು ನಂಬಿಕೆಗಳಿಗೆ ಅವರ ಹೇಳಿಕೆಯಿಂದ ಧಕ್ಕೆಯಾದರೆ, ಅತ್ತ “ಒಬ್ಬನೇ ದೇವರು” ಎನ್ನುವ ಸಿದ್ಧಾಂತದ ಭಕ್ತರಿಗೆ ಧಕ್ಕೆ ಬಾರದೇ? ಬಹುಸಂಖ್ಯಾತ ಲಿಂಗಾಯತರು ಗಣೇಶನ ಪೂಜಿಸುವ ಬಗ್ಗೆ ಬರೆದಿದ್ದಾರೆ. ಹೌದು. ಕೆಲ ಲಿಂಗಾಯತರು ಗಣೇಶನನ್ನು ಪೂಜಿಸುತ್ತಾರೆ. ಬಹುತ್ವ ಭಾರತದ ಬಾಹ್ಯ ಧರ್ಮ, ಸಂಸ್ಕ್ರತಿ ನಮ್ಮ ಅರಿವಿಗೆ ಬಾರದೇ ಅನೇಕ ಬಾರಿ ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ಭಾರತೀಯ ಮುಸ್ಲಿಮನೂ ಹಿಂದೂ ದೇವಸ್ಥಾನಗಳಿಗೂ ಹೋಗುತ್ತಾನೆ. ಭಾರತೀಯ ಹಿಂದೂ ಕ್ರೈಸ್ತ ದೇವಾಲಯಗಳಿಗೂ ಹೋಗುತ್ತಾನೆ. ಲಿಂಗಾಯತನೂ ಇದಕ್ಕೆ ಹೊರತಲ್ಲ.
ಭಾರತ ಒಂದು ಧರ್ಮನಿರಪೇಕ್ಷತೆಯ ದೇಶವೆಂದು ನಮ್ಮ ಸಂವಿಧಾನ ಹೇಳುತ್ತದೆ. ಏನಿದು ಧರ್ಮನಿರಪೇಕ್ಷತೆ? ನ್ಯಾ. ನಾಗಮೋಹನ ದಾಸ್ ಬರೆಯುತ್ತಾರೆ, “ಸರ್ಕಾರಕ್ಕೆ ತನ್ನದೇ ಆದ ಧರ್ಮವಿರಕೂಡದು. ಸರ್ಕಾರ ಬೇರೆ ಬೇರೆ ಧರ್ಮಗಳ ಮಧ್ಯೆ ತಾರತಮ್ಯ ತೋರಬಾರದು ಮತ್ತು ಸರಕಾರದ ನೀತಿಗಳು ಯಾವುದೇ ಧರ್ಮದ ಪ್ರೇರೇಪಿತವಾಗಿರಕೂಡದು. ಇಂತಹ ರಾಜಕೀಯ ವ್ಯವಸ್ಥೆ ಧರ್ಮನಿರಪೇಕ್ಷ ವ್ಯವಸ್ಥೆ ಎಂದು ಕರೆಯಲ್ಪಡುತ್ತದೆ” ಎಂದು ದಾಖಲಿಸುತ್ತಾರೆ. ಹಾಗಿದ್ದರೆ ಇಂದಿನ ಭಾರತ ಸರಕಾರ ಧರ್ಮನಿರಪೇಕ್ಷ ಸರ್ಕಾರವೇ? ಸರ್ಕಾರದ ಈ ನೀತಿಯಿಂದ ಅನ್ಯ ಧರ್ಮೀಯರಿಗೆ ಧಕ್ಕೆಯಾಗದೇ? ಧರ್ಮನಿರಪೇಕ್ಷ ದೇಶದ ಪ್ರಧಾನಿ ಗುಡಿಗುಂಡಾರಗಳನ್ನು ಸುತ್ತುತ್ತಲಿದ್ದರೆ ಅದು ಅನ್ಯ ಧರ್ಮದವರಿಗೆ ಧಕ್ಕೆ ತರದೇ?
ಕಾನೂನಿನ ಬಗ್ಗೆ ಮಾತಾಡುವುದಾದರೆ, ಸಾಣೇಹಳ್ಳಿ ಶ್ರೀಗಳು ಯಾವ ಕಾನೂನು ಮುರಿದಿದ್ದಾರೆ? ನಮ್ಮ ಸಂವಿಧಾನದದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕನ್ನಾಗಿ ಪರಿಗಣಿಸಿ, ತಮ್ಮ ಅತ್ಮಸಾಕ್ಷಿಯಂತೆ ಯಾವುದೇ ಧರ್ಮವನ್ನು ಅವಲಂಭಿಸಿ, ಆಚರಿಸಿ, ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಭಾರತದ ಸಂವಿಧಾನ ತನ್ನ ಪ್ರತಿಯೊಬ್ಬ ಪ್ರಜೆಗೆ ನೀಡಿದೆ. ಸಾಣೇಹಳ್ಳಿ ಶ್ರೀಗಳು ಅವರ ಆತ್ಮಸಾಕ್ಷಿಯಂತೆ ಲಿಂಗಾಯತ ಸಿದ್ಧಾಂತವನ್ನು ಅವಲಂಭಿಸಿ, ಆಚರಿಸುತ್ತ ಪ್ರಚಾರ ಮಾಡುವ ಮೂಲಭೂತ ಹಕ್ಕನ್ನು ಅನುಭವಿಸುತ್ತಿದ್ದಾರೆ. ಪ್ರಾಜ್ಞರಾದ ಅವರು ಕೇವಲ ಹಕ್ಕನ್ನು ಮಾತ್ರ ಚಲಾಯಿಸದೇ ಮೂಲಭೂತ ಕರ್ತವ್ಯಗಳನ್ನು ಪಾಲಿಸಿದ್ದಾರೆ.
ಸಂವಿಧಾನದ ಐದನೆಯ ಅಂಶ ಕರ್ತವ್ಯದ ಬಗ್ಗೆ ಹೀಗೇ ಹೇಳುತ್ತದೆ. “ಧರ್ಮ, ಭಾಷೆ, ಪ್ರಾದೇಶಿಕತೆ, ಜಾತಿ ಮತ್ತು ಪಂಗಡಗಳ ಎಲ್ಲೆ ಮೀರಿ ಸಮಸ್ತ ಭಾರತೀಯರಲ್ಲಿ ಸಹೋದರತೆಯ ಭಾವನೆಗಳನ್ನು ಬೆಳೆಸುವುದು ಹಾಗೂ ಮಹಿಳೆಯರ ಗೌರವಕ್ಕೆ ಚ್ಯುತಿ ತರುವ ಆಚರಣೆಗಳನ್ನು ತ್ಯಜಿಸುವುದು, 6ನೆಯ ಅಂಶದಲ್ಲಿ ಬಹುತ್ವದ ಸಂಸ್ಕ್ರತಿಯನ್ನು ಪರಂಪರೆಯನ್ನು ಗೌರವಿಸುವುದು ಮತ್ತು ರಕ್ಷಿಸುವುದು”. ಇದರೊಂದಿಗೆ ಇನ್ನೊಂದು ಮಹತ್ವದ ಕರ್ತವ್ಯವನ್ನು ಪಾಲಿಸಲು ಹೇಳುತ್ತದೆ. ಅದು ಹೀಗಿದೆ, “ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಜಿಜ್ಞಾಸೆಯ ಮತ್ತು ಸುಧಾರಣೆಯ ಪ್ರವೃತ್ತಿಯನ್ನು ಬೆಳಸಿಕೊಳ್ಳುವುದು ಮತ್ತು ಇತರರಲ್ಲಿ ಬೆಳಸುವುದು”. ಇದನ್ನೇ ಸಾಣೆಹಳ್ಳಿ ಗುರುಗಳು ಮಾಡಿದ್ದು. ಮೌಢ್ಯಾಚರಣೆ ಬೇಡವೆಂದಿದ್ದು. ಜಗತ್ತನ್ನೇ ಸೃಷ್ಟಿಸಿದ ಪರಮಾತ್ಮನು ತನ್ನ ಹೆಂಡತಿಯ ಮೈಯ ಕೊಳೆಯಿಂದ ಮಾಡಲಾದ ಬೊಂಬೆಗೆ ಜೀವ ನೀಡಲಾರದಷ್ಟು ಅಸಮರ್ಥನೇ? ಮೌಢ್ಯದ ಪ್ರತೀಕವಾಗಿರುವ ಪುರಾಣದ ಈ ಕಥೆಯನ್ನು ಅವರು ಪಾಲಿಸಬೇಡಿ ಎಂದುದರಲ್ಲಿ ಏನು ತಪ್ಪಿದೆ? ಸಂವಿಧಾನಾತ್ಮಕವಾಗಿ ಸಾಣೇಹಳ್ಳಿ ಶ್ರೀಗಳು ತಮ್ಮ ಹಕ್ಕನ್ನು ಬಳಸಿಕೊಂಡು ಕರ್ತವ್ಯಗಳನ್ನು ಚಾಚೂ ತಪ್ಪದೆ ಪಾಲಿಸಿದ್ದಾರಲ್ಲವೇ?
ಹಾಗಿದ್ದರೆ ಈ ಭಟ್ಟರ ಪ್ರಾಬ್ಲಂ ಏನು? ಭಟ್ಟರನ್ನು ಘಾಸಿಗೊಳಿಸಿದ್ದು ಶ್ರೀಗಳು ಗಣೇಶನ ಪೂಜೆಯನ್ನು ಬೇಡವೆಂದಿದ್ದಕ್ಕಾ? ಹೌದು. ಭಟ್ಟರಿಗೆ ತಮ್ಮ ಕುಟುಂಬ ವರ್ಗದ ಪುರೋಹಿತರ ಭವಿಷ್ಯ ಕತ್ತಲಾಗುವ ಭಯ ಕಾಡಿದೆ. ಅದಕ್ಕಾಗಿ ‘ತಿಕ್ಕಲ’ನಂತೆ ವರ್ತಿಸಿ, ಆಕಾಶಕ್ಕೆ ಉಗುಳುತ್ತಿದ್ದಾರೆ. ಕಾರಣ ಅಪ್ರಬುದ್ಧ, ಅಸಂಬದ್ಧ ಲೇಖನ ಬರೆದಿದ್ದಾರೆ. ಇಲ್ಲಿ ಭಟ್ಟರ ತಿಕ್ಕಲುತನ ಮತ್ತು ತೋಳಸಂಬಟ್ಟೆ ಮಾತ್ರ ಬಹಿರಂಗವಾಗುತ್ತದೆ.
ಭಟ್ಟರೇ, ಶ್ರೀಗಳು ಲಿಂಗಾಯತ ಸಿದ್ಧಾಂತ ಸಾರುವ ಜಂಗಮರು. ಮೇಲಾಗಿ ವೈಜ್ಞಾನಿಕ ಯುಗದಲ್ಲಿ ಜನಿಸಿದವರು, ಮೌಢ್ಯವನ್ನು ತೊರೆದವರು. ಮೌಢ್ಯದ ವಿರುದ್ಧವಾಗಿ ಹೋರಾಡಿದ ಲಿಂಗಾಯತ ಧರ್ಮದ ನಿಜಜಂಗಮರು. ಪುರಾಣದ ಗಣೇಶನನ್ನು ಸಾರ್ವಜನಿಕ ಗೊಳಿಸಿದವರು ಲೋಕಮಾನ್ಯ ಟಿಳಕರೆಂದು ಎಲ್ಲರಿಗೂ ತಿಳಿದ ವಿಷಯ. ವಿಪ್ರರಾದ ಟಿಳಕರ ಬಗ್ಗೆಯೂ ಒಂದು ಸಂಶಯ ಬರುತ್ತಲಿದೆ. ಕಾರಣ ಸತ್ಯಕಂಡ ಬಸವಣ್ಣನವರ ಒಂದು ವಚನ “ಎನಯ್ಯಾ, ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ? ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ! ವಿಪ್ರರಾದ ಟಿಳಕರು ಗಣೇಶನ ಪೂಜೆಯನ್ನು ಸಾರ್ವತ್ರಿಕಗೊಳಿಸಿದ ಹಿನ್ನಲೆಯ ಬಗ್ಗೆಯೂ ಸಂಶಯ ಕಾಡತೊಡಗಿದೆ. ಬಡತನದ ಕಾರಣ ‘ದೇವರು’ ಹಾಗೂ ‘ದೇವಸ್ಥಾನ’ಗಳೆಂಬ ಶೋಷಣೆಯ ಕೇಂದ್ರಗಳು ಸುಪ್ತಾವಸ್ಥೆಗೆ ಜಾರಿದ್ದವು. ಪುರೋಹಿತಶಾಹಿ ಅರ್ಥ ಕಳೆದುಕೊಳ್ಳತೊಡಗಿತ್ತು. ಇವುಗಳಿಗೆ ಮರುಜೀವ ನೀಡುವ ಉದ್ದೇಶ ಟಿಳಕರದಾಗಿತ್ತು. ತಮ್ಮ ಹಿಡನ್ ಅಜೆಂಡಾವನ್ನು ಈ ರೀತಿಯಾಗಿ ಉಪಯೋಗಿಸಿಕೊಂಡು ಅದಕ್ಕೆ ಸಂಸ್ಕ್ರತಿಯ ಲೇಪನ ಮಾಡಿದ್ದರು. ಅದು ಇಂದು ಮರವಾಗಿ ವೈಯಕ್ತಿಕ ವರಮಾನದ ಮೇಲೆ ಹೊರೆಯಾಗುತ್ತಿದೆ.
ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ಬರೆಯುತ್ತ “ಕಾಲಕಾಲಕ್ಕೆ ಈ ವಿಚಾರ ಪ್ರಸ್ತಾಪವಾಗಿ ಅಲ್ಲಿಯೇ ಸತ್ತು, ಮತ್ತೆ ಯಾವಾಗಲೋ ಮರುಹುಟ್ಟು ಪಡೆದು, ಪುನಃ ಸಾವಿಗೀಡಾಗುವುದು” ಎಂಬ ಬೇಜವಾಬ್ದಾರಿ ಸಾಲುಗಳನ್ನು ಬರೆದು ಲಿಂಗಾಯತ ಧರ್ಮೀಯರನ್ನು ಅವಮಾನಿಸಿದ್ದಾನೆ. ಲಿಂಗಾಯತ ಹೋರಾಟಗಾರರ ಬೆನ್ನು ಮೂಳೆ ಮುರಿಯುವ ದುರಾಲೋಚನೆಗೆ ಕೈ ಹಾಕಿದ್ದಾನೆ. ಭವಿಷ್ಯದಲ್ಲಿ ಪುರೋಹಿತರಿಗೆ ಬರಬಹುದಾದ ಕರಾಳ ದಿನಗಳ ಅರಿವಿರುವ ಇವರು ಇಂದಿನಿಂದಲೇ ಲಿಂಗಾಯತರನ್ನು ಚೂಟಿ ಹಾಕುವ ಕೆಲಸಕ್ಕೆ ಕೈ ಹಾಕಿದ್ದಾರೆ. ಲಿಂಗಾಯತರಲ್ಲಿಯೇ ಒಡೆದಾಳುವ ನೀತಿಯನ್ನು ಅನುಸರಿಸಿ ಅಪಕ್ವ ಜನರನ್ನು ಬೆಂಬಲಿಸುವಂತೆ ನಾಟಕ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳುವ ಮುಂದಾಲೋಚನೆ ಈ ಪತ್ರಕರ್ತನದು.
ಭೌಗೋಳಿಕವಾಗಿ ಲಿಂಗಾಯತರು ಹಿಂದುಗಳೇ, ಆದರೆ ಸೈದ್ಧಾಂತಿಕವಾಗಿ ಅವರು ವೈದಿಕೇತರರು. ಲಿಂಗಾಯತರೂ ಶೈವರಂತೆ ಶಿವಪೂಜಕರು. ಅದರೆ ‘ಶೈವರ’ ಶಿವ ಹಾಗೂ ಲಿಂಗಾಯತ ಶಿವನ ಮಧ್ಯೆ ಭೂಮಿ ಆಕಾಶದ ವ್ಯತ್ಯಾಸವಿದೆ. ಲಿಂಗಾಯತರ ಶಿವನು ‘ಜಗದಗಲ ಮಿಗೆಯಗಲ….. ಲಿಂಗಾಯತರ ಶಿವನಿಗೆ ಹೆಂಡಿರು ಮಕ್ಕಳಿಲ್ಲ. ಆದರೆ ವೈದಿಕರು ಒಪ್ಪುವ, ಶೈವರು ಪೂಜಿಸುವ ಶಿವನು ಸಂಸಾರಸ್ಥ. ಅವನಿಗೆ ಪಾರ್ವತಿ ಎಂಬ ಹೆಂಡತಿಯನ್ನು ಕಟ್ಟಿದ್ದೀರಿ. ಷಣ್ಮುಖ ಮತ್ತು ಗಣೇಶನೆಂಬ ಮಕ್ಕಳನ್ನು ಕರುಣಿಸಿದ್ದೀರಿ. ಅವೈಜ್ಞಾನಿಕ ಕಥೆಯನ್ನು ಹೇಳಿ ಜಗತ್ತಿನಲ್ಲಿ ನಗೆಪಾಟಲಿಗೆ ಈಡಾಗಿದ್ದೀರಿ. ಲಿಂಗವನ್ನು ಪೂಜಿಸುವ ಲಿಂಗಾಯತರ ‘ಲಿಂಗ’ವು ಅವರ ‘ಪ್ರಜ್ಞೆ’ಯ ಪ್ರತೀಕ. ಲಿಂಗಾಯತರ ದೇವ ಹೃದಯದಲ್ಲಿದ್ದಾನೆ, ಉಸಿರಾಡುವ ಉಸಿರಿನಲ್ಲಿದ್ದಾನೆ. ‘ನಾ ನಿನ್ನರಿಯದ ಮುನ್ನ ನೀನೇನಾಗಿದ್ದೆಯಂದು…’ ದೇವರಿಗೆ ಸೆಡ್ಡು ಹೊಡೆದ ಲಿಂಗಾಯತ ಧರ್ಮದ ಆಳ ಆಗಲ ಬಹಳ ವಿಸ್ತಾರವಾಗಿದೆ. ಮಾಹಿತಿಯ ಕೊರತೆಯಿಂದ ಬಳಲುವ ಕೆಲ ಅಪ್ರಬುದ್ಧ ಸ್ವಾಮೀಜಿಗಳ ಮತ್ತು ಗ್ಯಾಲರಿಗಾಗಿ ಮಾತಾಡುವ ರಾಜಕೀಯ ನಾಯಕರ ಮಾತುಗಳನ್ನು ನಿಮ್ಮ ಸಮರ್ಥನೆಗೆ ಬಳಸಿಕೊಳ್ಳುತ್ತೀರಿ. ಅವರ ಸಮರ್ಥನೆಯನ್ನು ನೀವು ಬಳಸಿಕೊಂಡಿರುವ ರೀತಿಯು ‘ಓತಿಕ್ಯಾತಕ್ಕೆ ಬೇಲಿ ಸಾಕ್ಷಿ’ ಎಂಬ ಗಾದೆಯನ್ನು ನೆನಪಿಸುತ್ತಿದೆ.
ಬಹುಧರ್ಮ, ಬಹುಸಂಸ್ಕ್ರತಿ ಇರುವ ದೇಶಗಳಲ್ಲಿ ಕೊಡುಕೊಳ್ಳುವಿಕೆ ಸಾಮಾನ್ಯ. ಲಿಂಗಾಯತರು, ಜೈನರು, ಬೌದ್ಧರು, ಸಿಕ್ಕರು, ವೈದಿಕರು, ಪಾರ್ಸಿಗಳು ಕೆಲಬಾರಿ ಮಸೀದಿಗೆ ಹೋಗುತ್ತಾರೆ, ಚರ್ಚ್‌ಗೂ ಹೋಗುತ್ತಾರೆ. ಅಂದರೆ ಅವರು ಮುಸ್ಲಿಂ ಅಥವಾ ಕ್ರಿಶ್ಚಿಯನ್ ಆದಂತೆಯಾ? Be Roman in Rom ಎಂದು ನಿಮಗೆ ಹೇಳಬೇಕೇ? ಸೌಹಾರ್ದ ಜೀವನವೇ ಗೊತ್ತಿರದ ಧರ್ಮ ಧರ್ಮಗಳಲ್ಲಿ ದಳ್ಳುರಿಯನ್ನು ಹಚ್ಚುವ ಅರೆಬೆಂದ, ಬಾಲಿಶ ಯೋಚನೆಯ ನಿಮಗೆ ಹೇಗೆ ಅರ್ಥವಾದೀತು ಭಟ್ಟರೇ?
ನೀವೊಬ್ಬ ನಿಷ್ಠಾವಂತ ಪತ್ರಕರ್ತನಾಗಿದ್ದರೆ ನಾಡಿನ ಎಲ್ಲ ಧರ್ಮಗಳ ಮಠಮಾನ್ಯಗಳಲ್ಲಿ ನಡೆಯುವ ಅನೈತಿಕತೆಯನ್ನು ಜಾಹೀರುಗೊಳಿಸಿ. ಅಷ್ಟಮಠಗಳಲ್ಲಿರುವ ಕರ್ಮಠತನವನ್ನು ಬಯಲುಗೊಳಿಸಿ. ಒಂದು ಮಠದ ಪೂಜ್ಯರೊಬ್ಬರು ರೇಪಿಸ್ಟ್ ಎಂಬ ಆರೋಪಕ್ಕೆ ಒಳಗಾದಾಗ ಅಂದು ನೀವು ತಳೆದ ನಿಲುವು ಏನು ಎನ್ನುವುದು ಜಗತ್ತಿಗೆ ತಿಳಿಯದೇ? ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ ಅಲ್ಲವೇ ನಿಮ್ಮ ನಡೆ?

ಜಿ ಬಿ ಪಾಟೀಲ್
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಉತ್ತಮವಾದ ಉತ್ತರ ಕೊಟ್ಟಿದೀರಿ ಭ(ಭಂಡ)ಟ್ಟರಿಗೆ.