ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದ ದರ್ಶನ್ ಅವರಿಗೆ ರಾಜಾತಿಥ್ಯ ಲಭ್ಯವಾಗುತ್ತಿರುವುದನ್ನು ಸೂಚಿಸುವ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಈ ಬೆನ್ನಲ್ಲೇ ದರ್ಶನ್ ಸ್ಥಳಾಂತರ ಮಾಡಲಾಗುತ್ತಿದೆ.
ಮುಂಜಾನೆ 4 ಗಂಟೆಯಿಂದ ಸ್ಥಳಾಂತರ ಪ್ರಕ್ರಿಯೆ ಆರಂಭವಾಗಿದ್ದು, ಐದು ಗಂಟೆಗಳ ಪ್ರಯಾಣದ ಬಳಿಕ ದರ್ಶನ್ ಅವರು ಮುಂಜಾನೆ 10 ಗಂಟೆ ಸುಮಾರಿಗೆ ಅವರು ಬಳ್ಳಾರಿ ಜೈಲು ತಲುಪಿದ್ದಾರೆ.
ಇದನ್ನು ಓದಿದ್ದೀರಾ? ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ನ್ಯಾಯಾಲಯ ಒಪ್ಪಿಗೆ
ಬಿಗಿ ಭದ್ರತೆಯಲ್ಲಿ ಬಳ್ಳಾರಿಯ ಜೈಲಿಗೆ ಪೊಲೀಸ್ ವಾಹನಗಳು ತಲುಪಿದೆ. ಈ ನಡುವೆ ನೂರಾರು ಅಭಿಮಾನಿಗಳು ಬಳ್ಳಾರಿ ಜೈಲಿನ ಹೊರಗೆ ಜಮಾಯಿಸಿದ್ದರು.
VIDEO | Kannada actor Darshan Thoogudeepa, who was in judicial custody at Parappana Agrahara Central jail in #Bengaluru, in the Renukaswamy murder case, was shifted to #Ballari prison, late yesterday.
— Press Trust of India (@PTI_News) August 29, 2024
(Full video available on PTI Videos – https://t.co/n147TvqRQz) pic.twitter.com/c7q5QI8q4A
