ಜಾರ್ಖಂಡ್ ಮಾಜಿ ಮುಖ್ಯಮಂತ್ರಿ, ಮಾಜಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಚಂಪೈ ಸೊರೇನ್ ಇಂದು ರಾಂಚಿಯಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಸೊರೇನ್ ಅವರು ತಮ್ಮ ಬೆಂಬಲಿಗರೊಂದಿಗೆ, ಜಾರ್ಖಂಡ್ ಬಿಜೆಪಿಯ ಅಧ್ಯಕ್ಷ ಬಾಬುಲಾಲ್ ಮರಾಂಡಿ, ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಬಿಜೆಪಿಯ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು.
“ನಾನು ಮುಜುಗರಕ್ಕೊಳಗಾಗಿದ್ದೇನೆ ಮತ್ತು ಅದಕ್ಕಾಗಿಯೇ ನಾನು ರಾಜಕೀಯದಿಂದ ನಿವೃತ್ತಿ ಹೊಂದಲು ನಿರ್ಧರಿಸಿದೆ. ಆದರೆ, ಜಾರ್ಖಂಡ್ ಜನರ ಪ್ರೀತಿ ಮತ್ತು ಬೆಂಬಲದಿಂದಾಗಿ, ನಾನು ರಾಜಕೀಯದಿಂದ ನಿವೃತ್ತಿಯಾಗದಿರಲು ನಿರ್ಧರಿಸಿದೆ” ಎಂದು ಬಿಜೆಪಿ ಸೇರಿದ ಬಳಿಕ ಸೊರೇನ್ ಹೇಳಿದ್ದಾರೆ.
“ನಾನು ‘ಜಾರ್ಖಂಡ್ ಆಂದೋಲನ’ ಸಮಯದ ಹೋರಾಟ ನೋಡಿದ್ದೇನೆ. ನಾನು ಹೊಸ ಪಕ್ಷವನ್ನು ಪ್ರಾರಂಭಿಸುತ್ತೇನೆ ಅಥವಾ ಬೇರೆ ಪಕ್ಷವನ್ನು ಸೇರುತ್ತೇನೆ, ನನ್ನನ್ನು ಮುಜುಗರಕ್ಕೊಳಪಡಿಸಿದ ಪಕ್ಷದಲ್ಲಿ ಉಳಿಯುವುದಿಲ್ಲ ಎಂದು ನಿರ್ಧರಿಸಿದೆ. ಅದಾದ ಬಳಿಕ ನಾನು ಜಾರ್ಖಂಡ್‌ನ ಜನರ ಸೇವೆಯನ್ನು ಮುಂದುವರಿಸಲು ಪಕ್ಷವನ್ನು (ಬಿಜೆಪಿ) ಸೇರಲು ನಿರ್ಧರಿಸಿದೆ” ಎಂದು ತಿಳಿಸಿದರು.
VIDEO | "I was embarrassed, and that's why I had decided to retire (from politics). However, because of love and support of people of Jharkhand, I decided to not to retire from politics. I have seen the struggle during the 'Jharkhand andolan'… I thought that I will launch a new… pic.twitter.com/Vlt9H8VADP
— Press Trust of India (@PTI_News) August 30, 2024
