ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್ ಮಾಧ್ಯಮ ಸಂದರ್ಶನದ ವೇಳೆ ಭಾರತದ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ‘ರಾಮ್ ಕೋವಿಡ್’ ಎಂದು ತಪ್ಪಾಗಿ ಉಚ್ಚಾರಣೆ ಮಾಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
The Lallantop ಸುದ್ದಿ ಮಾಧ್ಯಮದ ಸಂಸ್ಥಾಪಕ ಸಂಪಾದಕ ಸೌರಭ್ ದ್ವಿವೇದಿ ಜೊತೆಗಿನ ಸಂದರ್ಶನದಲ್ಲಿ ಕಂಗನಾ ರಣಾವತ್ ದೇಶದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ ನಮ್ಮ ದೇಶದ ಮೊದಲ ದಲಿತ ರಾಷ್ಟ್ರಪತಿ ‘ರಾಮ್ ಕೋವಿಡ್’ ಎಂದು ಹೇಳಿದ್ದಾರೆ.
Again a new Interview:-
— Braj shyam maurya (@brijshyam07) August 29, 2024
Kangana Ranaut is the lowest IQ Indian MP in the history of Indian Politics , she proves😂
Who all agree? pic.twitter.com/ouAuHp5hOC
ಈ ವೇಳೆ ಸಂದರ್ಶಕ ಸೌರಭ್ ದ್ವಿವೇದಿ ಮೊದಲನೆಯ ದಲಿತ ರಾಷ್ಟ್ರಪತಿ ಅಲ್ಲ ಎರಡನೇ ದಲಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಆಗಿದ್ದಾರೆ. ಮೊದಲನೆಯ ದಲಿತ ರಾಷ್ಟ್ರಪತಿ ಕೆ ಆರ್ ನಾರಾಯಣನ್ ಎಂದು ತಿಳಿಸಿದ್ದಾರೆ.
ಆ ಕೂಡಲೇ ನಟಿ, ಬಿಜೆಪಿ ಸಂಸದೆ ತನ್ನ ತಪ್ಪು ಮಾಹಿತಿಗೆ ಕ್ಷಮೆಯಿರಲಿ (Sorry for my misinformation) ಎಂದು ಹೇಳಿದ್ದಾರೆ. ಸದ್ಯ ಟ್ರೋಲಿಗರಿಗೆ ಈ ವಿಡಿಯೋ ಹಬ್ಬವಾಗಿದ್ದು, ಕಂಗನಾ ಕಾಲೆಳೆಯುತ್ತಿದ್ದಾರೆ.
ಇದನ್ನು ಓದಿದ್ದೀರಾ? ಕಂಗನಾ ರಣಾವತ್ | ಬಿಜೆಪಿ ಪಾಲಿಗೆ ಸೆರಗಿನ ಕೆಂಡವೋ, ಫೈರ್ ಬ್ರ್ಯಾಂಡೋ?
“ಮೊದಲನೆಯದಾಗಿ ಅವರ ಹೆಸರು ‘ರಾಮ್ ಕೋವಿಡ್’ ಅಲ್ಲ ರಾಮ್ ನಾಥ್ ಕೋವಿಂದ್ ಆಗಿದೆ. ಮತ್ತೆ ಅವರು ದೇಶದ ಮೊದಲ ದಲಿತ ರಾಷ್ಟ್ರಪತಿಯಲ್ಲ, ಎರಡನೇ ದಲಿತ ರಾಷ್ಟ್ರಪತಿ” ಎಂದು ನೆಟ್ಟಿಗರು ಕಂಗನಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
Ram Covid 🤣 ❌
— jp Bishnoi (@Jp_bishnoi_29) August 30, 2024
Ram Nath Kovind Ji ✅ Crying in Corner 🙄 pic.twitter.com/s6JwktasHa
ಕಂಗನಾಗೆ ಐಕ್ಯೂ ಕಡಿಮೆಯಿದೆ ಎಂದು ಕೆಲವು ನೆಟ್ಟಿಗರು ಹೇಳಿದರೆ, ಇನ್ನು ಕೆಲವು ನೆಟ್ಟಿಗರು ರಾಮ್ ನಾಥ್ ಕೋವಿಡ್ ಅವರು ಇದನ್ನು ಕೇಳಿದರೆ ಖಂಡಿತವಾಗಿಯೂ ಅಳುತ್ತಾರೆ ಎಂದಿದ್ದಾರೆ. ಇನ್ನು ಕೆಲವು ನೆಟ್ಟಿಗರು ಇದೊಂದು ಗುಪ್ತ ಪ್ರತಿಭೆ ಎಂದು ಆಡಿಕೊಂಡಿದ್ದಾರೆ. ಕೆಲವರು ಕೋವಿಡ್ ಲಸಿಕೆ ಅಡ್ಡ ಪರಿಣಾಮ ಎಂದು ಹಾಸ್ಯ ಮಾಡಿದ್ದಾರೆ.
“ಇಂತಹ ಅದ್ಭುತ ಸಂಸದರನ್ನು ಕಳುಹಿಸಿದ್ದಕ್ಕಾಗಿ ನಾವು ಹಿಮಾಚಲಕ್ಕೆ ಧನ್ಯವಾದ ಹೇಳಬೇಕು. ಇಲ್ಲದಿದ್ದರೆ ಅಂತಹ ಗುಪ್ತ ರತ್ನಗಳ ಬಗ್ಗೆ ನಮಗೆ ತಿಳಿಯುತ್ತಿರಲಿಲ್ಲ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
