ಗದಗ | ಭಾರತ ವಿದ್ಯಾರ್ಥಿ ಫೆಡರೇಷನ್‌ನ ಎರಡನೇ ತಾಲೂಕು ಸಮ್ಮೇಳನ

Date:

Advertisements

ಸೌಲಭ್ಯ ವಂಚಿಸುವ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳು ಜಾಗೃತಿ ಹೊಂದಿರಬೇಕು. ಕಳೆದ 35 ವರ್ಷಗಳಿಂದ ಗಜೇಂದ್ರಗಡದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್‌ ಅನೇಕ ಚಾರಿತ್ರಿಕ ಹೋರಾಟ ಮಾಡಿ ಸೌಲಭ್ಯ ಪಡೆಯವಂತಾಗಿದೆ ಎಂದು ಎಸ್‌ಎಫ್‌ಐ ರಾಜ್ಯ ಪದಾಧಿಕಾರಿ ಗಣೇಶ್ ರಾಠೋಡ್ ಹೇಳಿದರು.

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಈಶ್ವರ್ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆಯ ಎರಡನೇ ತಾಲೂಕು ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ಗಜೇಂದ್ರಗಡ ಪಟ್ಟಣದಲ್ಲಿ ಬಾಲಕರ ಮೆಟ್ರಿಕ್ ನಂತರದ ಹಾಸ್ಟೆಲ್ ಮತ್ತು ಪಿಜಿ ಕೇಂದ್ರ ಪ್ರಾರಂಭಿಸಬೇಕು” ಎಂದು ಒತ್ತಾಯಿಸಿದರು.

Advertisements

ಎಸ್‌ಎಫ್‌ಐ ಜಿಲ್ಲಾ ಮುಖಂಡ ಚಂದ್ರು ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿ, “ಕಳೆದ ಒಂದು ವರ್ಷದಲ್ಲಿ ಎಸ್‌ಎಫ್‌ಐ ಸಂಘಟನೆಯು ಬಾಲಕರ ಹಾಸ್ಟೆಲ್‌, ಪಿಜಿ ಸೆಂಟರ್, ಬಸ್ ಸಮಸ್ಯೆ ನೀಗಿಸುವಂತೆ ಅನೇಕ ಹೋರಾಟ ಮಾಡುತ್ತ ಬಂದಿದ್ದು, ಹೋರಾಟದ ಮೂಲಕವೇ ನ್ಯಾಯ ಪಡೆಯುವ ಕೆಲಸವಾಗುತ್ತದೆ” ಎಂದರು.

ಮುಖ್ಯ ಅತಿಥಿ ಎಸ್‌ಎಫ್‌ಐ ಮಾಜಿ ಮುಖಂಡ ಬಾಲು ರಾಠೋಡ ಮಾತನಾಡಿ, “ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು. ಆಗ ಪ್ರಶ್ನೆ ಮಾಡುವ ಹವ್ಯಾಸ ಬೆಳೆಯುತ್ತದೆ. ಹಾಗಾಗಿ ಪುಸ್ತಕಗಳ ಜೊತೆಗೆ ಸಮಾಜವನ್ನು ಅಧ್ಯಯನ ಮಾಡುವ ಕೆಲಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.

ಜಿಲ್ಲಾ ಕಾರ್ಯದರ್ಶಿ ಶಿವಾಜಿ ಗಡ್ಡದ ಮಾತನಾಡಿ, “ಎಸ್‌ಎಫ್‌ಐಗೆ ಸ್ವಾತಂತ್ರ್ಯ ಚಳವಳಿಯ ಪರಂಪರೆ ಇದ್ದು, ಅದನ್ನು ಮುಂದುವರೆಸಿಕೊಂಡು ಹೋಗುವ ಕೆಲಸ ಮಾಡಬೇಕು” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರದೀಪ್ ಮಾದರ ಮಾತನಾಡಿ, “ತಾಲೂಕು ಸಮಿಯು ಕಳೆದ ಒಂದು ವರ್ಷದಲ್ಲಿ ಹಲವಾರು ಹೋರಾಟ ಮಾಡಿದ್ದು, ಮುಂದೆಯೂ ಹೋರಾಟ ಮುಂದುವರಿಕೊಂಡು ಹೋಗಬೇಕು” ಎಂದು ಹೇಳಿದರು.

ಸಮ್ಮೇಳನದ ಕಲಾಪಗಳು ನಡೆದ ನಂತರ 21 ಜನರ ನೂತನ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.

ನೂತನ ಸಮಿತಿಯ ಅಧ್ಯಕ್ಷರಾಗಿ ಅನಿಲ್ ರಾಠೋಡ, ಕಾರ್ಯದರ್ಶಿಯಾಗಿ ಪ್ರದೀಪ್ ಎಂ, ಉಪಾಧ್ಯಕ್ಷರಾಗಿ ಮಾಹಾಂತೇಶ ಪೂಜಾರ, ಸುದೀಪ್ ಹುಬ್ಬಳ್ಳಿ, ಜ್ಯೋತಿ ಮೇಟಿ ನೇಮಕಗೊಂಡಿದ್ದಾರೆ.

ಸಹಕಾರ್ಯದರ್ಶಿಗಳಾಗಿ ಬಸವರಾಜ ಎಂ, ಮುಪ್ಪಯ್ಯ ಬೆಳವನಕಿ, ಕವಿತಾ ಹೊಸಮನಿ, ಸದಸ್ಯರಾಗಿ ಗುರುನಾಥ ರಾಠೋಡ, ಕಿರಣ ಪಮ್ಮಾರ್, ಸಲೀಂ, ಅನಿಲ್, ನಾಗರಾಜ, ಕಿರಣ ರಾಠೋಡ, ಉಮಕ್ಕಾ ಮಾಳೋತ್ತರ್, ರೇಣುಕಾ ರಾಠೋಡ, ದಾಕ್ಷಾಯಿಣಿ ಜಾಲಿಹಾಳ, ಸವಿತಾ ಬಾಳನಗೌಡ್ರ, ರೂಪಾ ಹಗೇದಾಳ, ಅಂಜಿನಮ್ಮ, ಬಾಳಮ್ಮ, ಶರಣು ಎಂ, ಸುನೀಲ್ ರಾಠೋಡ, ಕೃಷ್ಣಾ ವರಗಾ ಅವರು ನೂತನ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಭಾರೀ ಮಳೆಗೆ ನಲುಗಿದ ನಿವಾಸಿಗಳು; ಸ್ಥಳೀಯ ಆಡಳಿತ ನಿರ್ಲಕ್ಷ್ಯ, ಆರೋಪ

ವಿದ್ಯಾರ್ಥಿನಿಯರ ಉಪಸಮಿತಿಯನ್ನೂ ಕೂಡಾ ಸಮ್ಮೇಳನ ಆಯ್ಕೆ ಮಾಡಿದ್ದು, ಉಪ ಸಮಿತಿಯ ಸಂಚಾಲಕಿಯಾಗಿ ಕವಿತಾ ಮೇಟಿ, ಸಹ ಸಂಚಾಲಕಿಯರಾಗಿ ರೂಪಾ ಹಗೇದಾಳ, ಬಾಳಮ್ಮ ಕೊಣೆಸಾರ್, ರಾಧಿಕಾ ಮಾಳೋತ್ತರ್ ಸದಸ್ಯರಾಗಿ ರೇಣುಕಾ ರಾಠೋಡ, ಕವಿತಾ ಹೊಸಮನಿ, ಪೂಜಾ ಭಾಂಡಗೆ, ಸವಿತಾ ಮಾಳೋತ್ತರ್, ವಿಜಯಲಕ್ಷ್ಮಿ ರಾಠೋಡ, ಪ್ರೀತಿ ಚಿಲಝರಿ, ಸೃಷ್ಟಿ ಮಡಿವಾಳ, ಸೌಮ್ಯ ಹಡಪದ, ಜ್ಯೋತಿ ಮೇಟಿ, ಐಶ್ವರ್ಯ ಹಾದಿಮನಿ, ರಾಧಿಕಾ ಮಾಳೋತ್ತರ್, ಉಮಕ್ಕಾ ಮಾಳೋತ್ತರ್ ಆಯ್ಕೆ ಆಗಿದ್ದಾರೆ.

ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಕಾಲೇಜುಗಳಿಂದ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

Download Eedina App Android / iOS

X