ಬೀದರ್‌ | ಲಿಂಗಾಯತ ಧರ್ಮಕ್ಕೆ ಎಂ.ಎಂ.ಕಲಬುರ್ಗಿ ಕೊಡುಗೆ ಅಮೋಘ : ಬಸವಲಿಂಗ ಪಟ್ಟದ್ದೇವರು

Date:

Advertisements

ಶರಣ ಸಾಹಿತ್ಯ ಲೋಕಕ್ಕೆ ಡಾ.ಎಂ.ಎಂ.ಕಲಬುರ್ಗಿ ಅವರ ಕೊಡುಗೆ ಅನನ್ಯವಾಗಿದೆ. ಅವರು ಬಸವಾದಿ ಶರಣರ ಚಿಂತನೆಗಳನ್ನು ಸಂಶೋಧನೆಯ ಮೂಲಕ ಬೆಳಕಿಗೆ ತಂದಿದ್ದರು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಸ್ಮರಿಸಿದರು.

ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಹಿರೇಮಠ ಸಂಸ್ಥಾನದಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ಎಂ.ಎಂ.ಕಲಬುರಗಿ ಅವರ 9ನೆಯ ಸ್ಮರಣೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಕಲಬುರಗಿ ಅವರ ಮಾರ್ಗ ಸಂಪುಟಗಳಲ್ಲಿ ಹೆಚ್ಚಿನ ಲೇಖನಗಳು ಶರಣ ಸಾಹಿತ್ಯ ಕುರಿತಾಗಿವೆ. ವಿಶೇಷವಾಗಿ ಸುಮಾರು 35 ಭಾಷೆಗಳಲ್ಲಿ ಪ್ರಕಟವಾಗಿರುವ ವಚನ ಗ್ರಂಥದ ಸಂಪಾದಕರಾಗಿ ಸಲ್ಲಿಸಿರುವ ಅವರ ಸೇವೆ ಅನುಪಮವಾಗಿದೆʼ ಎಂದರು.

ʼಕಲಬುರ್ಗಿ ಅವರ ಪ್ರಧಾನ ಸಂಪಾಕದತ್ವದಲ್ಲಿ ಕರ್ನಾಟಕ ಸರ್ಕಾರದಿಂದ ಜನಪ್ರಿಯ ವಚನ ಸಾಹಿತ್ಯ ಪ್ರಕಟಣೆ ಯೋಜನೆ ಕ್ರಿಯಾರೂಪಕ್ಕೆ ಬಂತು. ಅನೇಕ ಮಠಮಾನ್ಯಗಳಿಗೆ ಡಾ.ಕಲಬುರಗಿ ಅವರು ಹೊಸ ಹೊಸ ಯೋಜನೆಗಳನ್ನು ನೀಡಿ ಶರಣ ಸಾಹಿತ್ಯದ ಕುರಿತು ಶೈಕ್ಷಣಿಕ ಶಿಸ್ತಿನ ಕಾರ್ಯವನ್ನು ಮಾಡಿಸಿಕೊಂಡಿದ್ದಾರೆʼ ಎಂದು ನುಡಿದರು.

Advertisements

ʼಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಅವರು ಮಾಡಿರುವ ಅಧ್ಯಯನ, ಸಂಶೋಧನಾ ಮುಂದಿನ ಜನಾಂಗಕ್ಕೆ ದಾರಿದೀಪವಾಗಿವೆ. ಅವರ ಚಿಂತನೆಗಳನ್ನು ಸಹಿಸಲಾಗದ ಸಾಂಪ್ರದಾಯವಾದಿಗಳು ಅವರ ಹತ್ಯೆಗೈದರು. ಕಲಬುರಗಿ ಅವರು ದೇಹರೂಪದಿಂದ ನಮ್ಮಿಂದ ಅಗಲಿದರೂ ಅವರ ಸಾಹಿತ್ಯ ಸಂಶೋಧನೆಯ ಮೂಲಕ ನಮ್ಮೊಂದಿಗೆ ಶಾಶ್ವತವಾಗಿ ಉಳಿದಿದ್ದಾರೆ. ಅವರ ಬಲಿದಾನ ಇಂದಿಗೂ ಹುಸಿ ಹೋಗಲಿಲ್ಲʼ ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ‘ಈ ದಿನ’ ಫಲಶೃತಿ : ವರ್ಷದ ಬಳಿಕ ನಿಟ್ಟೂರ್ ಬಸ್‌ ನಿಲ್ದಾಣ‌ ಕಾರ್ಯಾರಂಭ

ಕಾರ್ಯಕ್ರಮದಲ್ಲಿ ಶ್ರಾವಣ ಮಾಸ ಪ್ರವಚನ ಸೇವಾ ಸಮಿತಿ ಅಧ್ಯಕ್ಷೆ ನಿರ್ಮಲಾ ಚಂದ್ರಕಾಂತ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಚಂದ್ರಕಾಂತ ಪಾಟೀಲ, ಬಾಬುರಾವ ಹುಣಜೆ, ಡಾ.ವಿಶ್ವನಾಥಪ್ಪ ಬಿರಾದಾರ ಮುಂತಾದ ಗಣ್ಯರಿದ್ದರು. ಭಂಡಾರಿ ಶರಣರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ವೀರಣ್ಣ ಕುಂಬಾರ ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X