ದೆಹಲಿಯ ವಸಂತ್ ಕುಂಜ್‌ನ ಸಿ-8 ಬ್ಲಾಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಹಿರಿಯ ಪತ್ರಕರ್ತ ಉಮೇಶ್ ಉಪಾಧ್ಯಾಯ (66) ಮೃತಪಟ್ಟಿದ್ದಾರೆ.
ನಿನ್ನೆ ಬೆಳಿಗ್ಗೆ ಬೆಳಿಗ್ಗೆ 10.30ರ ಸುಮಾರಿಗೆ ತಮ್ಮ ಮನೆಯ ನವೀಕರಣ ಕಾರ್ಯ ವೀಕ್ಷಿಸಲು ತೆರಳಿದ್ದ ವೇಳೆ ನಾಲ್ಕನೇ ಮಹಡಿಯಿಂದ ಎರಡನೇ ಮಹಡಿಗೆ ಬಿದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ.
ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಎರಡಕ್ಕೂ ಕೊಡುಗೆ ನೀಡಿರುವ ಉಮೇಶ್ ಉಪಾಧ್ಯಾಯ ಟಿವಿ, ಮುದ್ರಣ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಇದನ್ನು ಓದಿದ್ದೀರಾ? ಉಕ್ರೇನ್ | ಹೋಟೆಲ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: ಸುದ್ದಿ ಸಂಸ್ಥೆ ಸುರಕ್ಷತಾ ಸಲಹೆಗಾರ ಸಾವು
ಅವರು ನೆಟ್ ವರ್ಕ್ 18 ವಾಹಿನಿಯ ಅಧ್ಯಕ್ಷರಾಗಿದ್ದರು. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಝೀ ನ್ಯೂಸ್, ಸಾಬ್ ಟಿವಿ, ಜನ್ಮತ್ ಟಿವಿ, ದೂರದರ್ಶನ ಮತ್ತು ಪಿಟಿಐ ಸೇರಿದಂತೆ ಹಲವು ಸುದ್ದಿಸಂಸ್ಥೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು.
ಇತ್ತೀಚೆಗೆ “ಭಾರತದ ಬಗ್ಗೆ ಪಾಶ್ಚಿಮಾತ್ಯ ಮಾಧ್ಯಮ ನಿರೂಪಣೆಗಳು: ಗಾಂಧಿಯಿಂದ ಮೋದಿವರೆಗೆ” (Western Media Narratives on India: From Gandhi to Modi) ಎಂಬ ಪುಸ್ತಕವನ್ನು ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಉಮೇಶ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
डिजिटल मीडिया से लेकर टेलीविजन के क्षेत्र में बहुमूल्य योगदान देने वाले वरिष्ठ पत्रकार और लेखक उमेश उपाध्याय जी के निधन से अत्यंत दुख हुआ है। उनका जाना पत्रकारिता जगत के लिए एक अपूरणीय क्षति है। शोक की इस घड़ी में उनके परिजनों के प्रति मैं अपनी संवेदनाएं व्यक्त करता हूं। ओम…
— Narendra Modi (@narendramodi) September 1, 2024
