ಕರ್ನಾಟಕ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಆಯೋಗದ ಕೊಪ್ಪಳ ಜಿಲ್ಲಾಮಟ್ಟದ ಸದಸ್ಯರನ್ನಾಗಿ ರೈತ ಹೋರಾಟಗಾರ ನಜೀರ್ ಸಾಬ್ ಮೂಲಿಮನಿ, ಸಿರಾಜ್ ಸಿದ್ದಾಪುರ ಅವರು ನಾಮನಿರ್ದೇಶನಗೊಂಡಿದ್ದಾರೆ.
ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿಗೆ ಕೊಪ್ಪಳ ಜಿಲ್ಲೆಗೆ ನಾಮನಿರ್ದೇಶನಗೊಳಿಸಿ, ಅಲ್ಪಸಂಖ್ಯಾತರ ಆಯೋಗದ ಆದೇಶ ಹೊರಡಿಸಿಗಿದೆ.
ಜಿಲ್ಲೆಯ ಅಭಿವೃದ್ಧಿ, ವಿವಿಧ ಕಾರ್ಯಕ್ರಮಗಳ ಆಯೋಜಿಸುವುದಕ್ಕೆ 6 ಜನರನ್ನು ಅಲ್ಪಸಂಖ್ಯಾತರ ಆಯೋಗಕ್ಕೆ ಸದಸ್ಯರನ್ನಾಗಿ ಸರಕಾರ ನೇಮಕ ಮಾಡಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ದುಬಾರಿ ಬೆಲೆಯ ಸೀರೆ ಕಳ್ಳತನ: ನಾಲ್ವರು ಮಹಿಳೆಯರ ಬಂಧನ; ₹17.5 ಲಕ್ಷ ಮೌಲ್ಯದ ರೇಷ್ಮೆ ಸೀರೆ ವಶ
ಕೊಪ್ಪಳ ಜಿಲ್ಲೆಯ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿಗೆ ಸದಸ್ಯರಾಗಿ ಎಂ ಡಿ ಸಿರಾಜ್ ಸಿದ್ದಾಪುರ, ಸಮೀನಾ ಬೇಗಂ, ಪ್ರಶಾಂತ ಮಾದಿನೂರು, ಮೊಹ್ಮದ್ ನಜೀರುದ್ದೀನ್ ಮೂಲಿಮನಿ, ಮೆಹಬೂಬ್ ಪಾಷಾ, ಎಂ ಮದರ್ ವಲಿ ಅವರು ನೇಮಕಗೊಂಡಿದ್ದಾರೆ.
