ಎಮರ್ಜೆನ್ಸಿ ಚಿತ್ರಕ್ಕೆ ಪ್ರಮಾಣಪತ್ರ ನೀಡುವಂತೆ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ನಿರ್ದೇಶಿಸಲಾಗದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಇದರಿಂದಾಗಿ ಕಂಗನಾ ರಣಾವತ್ ನಟನೆಯ ಎಮರ್ಜೆನ್ಸಿ ಸಿನಿಮಾವು ಸೆಪ್ಟೆಂಬರ್ 6ರಂದು ತೆರೆಕಾಣದು.
ಮಧ್ಯಪ್ರದೇಶ ಹೈಕೋರ್ಟ್ ಈಗಾಗಲೇ ಸೆನ್ಸಾರ್ ಮಂಡಳಿಗೆ ಎಮರ್ಜೆನ್ಸಿ ಚಿತ್ರ ಮತ್ತು ಅದರ ಟ್ರೇಲರ್‌ಗೆ ಆಕ್ಷೇಪ ವ್ಯಕ್ತಪಡಿಸಿರುವ ಜಬಲ್‌ಪುರ್ ಸಿಖ್ ಸಂಗತ್‌ನ ಅಹವಾಲು ಬಗ್ಗೆ ನಿರ್ಧರಿಸಲು ಆದೇಶಿಸಿರುವುದರಿಂದ ಸಿನಿಮಾಗೆ ಪ್ರಮಾಣಪತ್ರವನ್ನು ನೀಡುವಂತೆ ಸಿಬಿಎಫ್‌ಸಿಗೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಇದನ್ನು ಓದಿದ್ದೀರಾ? ಇಂದಿರಾಗಾಂಧಿಗೆ ಎಮರ್ಜೆನ್ಸಿ ಜೊತೆ ಕೈ ಜೋಡಿಸೋದಾಗಿ ಸಂಘ ಪರಿವಾರದ ಪತ್ರ?
ಇನ್ನು ಜಬಲ್‌ಪುರ್ ಸಿಖ್ ಸಂಗತ್ ಅಥವಾ ಬೇರೆಯವರ ಅಹವಾಲು ಬಗ್ಗೆ ಸೆಪ್ಟೆಂಬರ್ 18ರೊಳಗೆ ನಿರ್ಧರಿಸಲು ಸಿಬಿಎಫ್‌ಸಿಗೆ ಹೈಕೋರ್ಟ್ ಆದೇಶಿಸಿದೆ.
ಕಂಗನಾ ರಣಾವತ್ ಅಭಿನಯದ ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆಗಾಗಿ ಝೀ ಎಂಟರ್‌ಟೈನ್‌ಮೆಂಟ್ ಸಲ್ಲಿಸಿದ ತುರ್ತು ಅರ್ಜಿಯನ್ನು ಆಲಿಸಿದ ಬಾಂಬೆ ಹೈಕೋರ್ಟ್ ಚಲನಚಿತ್ರದ ಆಕ್ಷೇಪಣೆಗಳನ್ನು ತನಿಖೆ ಮಾಡಲು ಮಧ್ಯಪ್ರದೇಶ ಹೈಕೋರ್ಟ್ ಸಿಬಿಎಫ್‌ಸಿಗೆ ನೀಡಿದ ಆದೇಶವನ್ನು ಗೌರವಿಸಬೇಕು ಎಂದು ಒತ್ತಿ ಹೇಳಿದೆ.
“ಚಿತ್ರವನ್ನು ನೋಡದೆಯೇ ಕೆಲವರಿಗೆ ಅಸಮಾಧಾನವಾಗಿದೆ ಎಂದು ಈ ಗುಂಪುಗಳು (ಸಿಖ್ ಗುಂಪುಗಳು) ಹೇಗೆ ನಿರ್ಧರಿಸುತ್ತದೆ? ಬಹುಶಃ ಇದು ಟ್ರೇಲರ್ ಅನ್ನು ಆಧರಿಸಿರಬಹುದು. ಮಧ್ಯಪ್ರದೇಶ ಹೈಕೋರ್ಟ್ ಇದರ ಗೊಂದಲ ಪರಿಹಾರಕ್ಕೆ ಸಿಬಿಎಫ್‌ಸಿಗೆ ಸೂಚನೆ ನೀಡಿದೆ. ನಾವು (ಬಾಂಬೆ ಹೈಕೋರ್ಟ್) ಅವರಿಗೆ ಪ್ರಮಾಣಪತ್ರವನ್ನು ನೀಡಲು ನಿರ್ದೇಶಿಸಿದರೆ ನಾವು ಮತ್ತೊಂದು ಹೈಕೋರ್ಟ್‌ನ ತೀರ್ಪನ್ನು ಉಲ್ಲಂಘಿಸಿದಂತಾಗುತ್ತದೆ. ನಾವು ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಅನುಸರಿಸಬೇಕು” ಎಂದು ಕೋರ್ಟ್ ಹೇಳಿದೆ.
#Breaking: Bombay High Court says it cannot direct CBFC to issue a certificate as the Madhya Pradesh High Court has already ordered the Censor Board to decide the representations made by the Jabalpur Sikh Sangat, which have objected to the film and its Trailer.
— Live Law (@LiveLawIndia) September 4, 2024
HC orders CBFC to… https://t.co/Hyvap3YJsy
