ನನಗೆ ಸಿಎಂ ಆಗುವ ಕನಸಿಲ್ಲ. ಐದು ವರ್ಷವೂ ಸಿದ್ಧರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಆರ್ ವಿ ದೇಶಪಾಂಡೆ ಹೇಳಿದರು.
ಅವಕಾಶ ಸಿಕ್ಕರೆ ನಾನೂ ಮುಖ್ಯಮಂತ್ರಿಯಾಗಲು ಸಿದ್ಧನಿದ್ದೇನೆಂದು ಇತ್ತೀಚೆಗೆ ಹೇಳಿದ್ದ ಆರ್ ವಿ ದೇಶಪಾಂಡೆ ಅವರು ಸೆಪ್ಟೆಂಬರ್ 3ರಂದು ಧಾರವಾಡದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, “ಸಿಎಂ ಸಿದ್ಧರಾಮಯ್ಯನವರು ರಾಜ್ಯದಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಉತ್ತಮ ಯೋಜನೆಗಳನ್ನು ಜಾರಿಗೆ ತಂದು ಬಡವರ ಪಾಲಿನ ಆಶಾಕಾರಣ ಆಗಿದ್ದಾರೆ ಎಂದರೂ ತಪ್ಪಾಗದು. ಆದ್ಧರಿಂದ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನಿಯಮ ಉಲ್ಲಂಘನೆ; ಸೂಕ್ತ ಕ್ರಮಕ್ಕೆ ಡಿವಿಪಿ ಆಗ್ರಹ
“ಗ್ಯಾರಂಟಿಯಿಂದ ಜನರಿಗೆ ಅನಾನೂಕೂಲವಾಗಿದೆಯೆಂದು ಹೇಳಿರುವ ಸ್ವಾಮೀಜಿಯೊಬ್ಬರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಮಾಧ್ಯಮಗಳು ಮತ್ತು ಪತ್ರಕರ್ತರು ನನ್ನನ್ನು ಎಷ್ಟೇ ಪ್ರಚೋದಿಸಿದರೂ ನಾನು ತಾಳ್ಮೆ ಕಳೆದುಕೊಳ್ಳುವುದಿಲ್ಲ. ಐವತ್ತು ವರ್ಷಗಳಿಂದ ರಾಜಕೀಯದಲ್ಲೇ ನನ್ನ ತಲೆ ಬೆಳ್ಳಗಾಗಿದೆ” ಎಂದರು.