ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ನಿನ್ನೆ ನಡೆದ ಭೀಕರ ಅಪಘಾತ ದುರಂತಕ್ಕೀಡಾದ ಬಾಲಕರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಹಾಗೂ ಗಾಯಗೊಂಡ ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಭರಿಸಲು ಒತ್ತಾಯಿಸಿ ದಲಿತ ವಿಧ್ಯಾರ್ಥಿ ಪರಿಷತ್ ವತಿಯಿಂದ ಮಸ್ಕಿ ತಹಶೀಲ್ದಾರ್ ಮಲ್ಲಪ್ಪ ಯರಗೋಳ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವಿದ್ಯಾರ್ಥಿ ಯುವಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳ ಮೂಲಕ ಸರ್ಕಾರ ಕಾರ್ಯೋನ್ಮುಖರಾಗಿರುವ ಹಿನ್ನೆಲೆಯಲ್ಲಿ ಕೆಲವು ಸರ್ಕಾರಿ ಸಂಸ್ಥೆಯವರ ಬೇಜವಾಬ್ದಾರಿಯಿಂದ ಮತ್ತು ನಿರ್ಲಕ್ಷ್ಯದಿಂದ ಅಮಾಯಕರ ಜೀವ ಮತ್ತು ಜೀವನ ಬೀದಿ ಪಾಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆಯಲ್ಲಿ ಗುಂಡಿ ಬಿದ್ದಿರುವುದರಿಂದ ಅದನ್ನು ತಪ್ಪಿಸುವುದಕ್ಕೆ ಹೋದಾಗ ಶಾಲಾ ಬಸ್ ಸಾರಿಗೆ ಬಸ್‌ಗೆ ಡಿಕ್ಕಿಯಾಗಿ ಘಟನೆ ಸಂಭವಿಸಿದೆ. ಇದಕ್ಕೆ ನೇರ ಕಾರಣ ಕಳಪೆ ಕಾಮಗಾರಿ. ರಸ್ತೆಯನ್ನು ಮಾಡಿದ ಗುತ್ತಿಗೆದಾರರ ಲೈಸನ್ಸ್ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ರಸ್ತೆಯಲ್ಲಿ ಮಳೆಯಿಂದ ತೆಗ್ಗು, ಗುಂಡಿಗಳು ಬಿದ್ದು ಸಾವು-ನೋವು ಅನುಭವಿಸಿವೆ. ಸಂಬಂಧಪಟ್ಟ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಇಂತಹ ಭೀಕರ ಘಟನೆ ಸಂಭವಿಸಿದರೆ ಮಾತ್ರ ಕೆಲವು ದಿನ ಅರೆಬರೆ ಗುಂಡಿಗಳು ಮುಚ್ಚುತ್ತಾರೆ. ರಸ್ತೆ ಗುತ್ತಿಗೆದಾರರು ಬೇಕಾಬಿಟ್ಟಿ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಆರೋಪಿಸಿದರು. ಲೋಕೋಪಯೋಗಿ ಇಲಾಖೆ ಹಾಗೂ ಕೆ ಆರ್ ಡಿ ಎಲ್ ಇಲಾಖೆ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ
ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡ ಮೌನೇಶ್ ತುಗ್ಗಲದಿನ್ನಿ, ಹುಸೇನಪ್ಪ ಇರಕಲ್ಲ, ಅಮರೇಶ್ ಭೋವಿ , ಮಲ್ಲಿಕಾರ್ಜುನ ಭೋವಿ , ಶರಣಪ್ಪ ದಿನಸಮುದ್ರ , ಮಲ್ಲಿಕ್ ಮುರಾರಿ , ಕಾಸಿಮಪ್ಪ ಡಿ ಮುರಾರಿ , ಪ್ರಸನ್ನ ಕಟ್ಟಿಮನಿ , ಸುದೀಪ್ ಬಸಾಪುರ , ಅನಂತ ಬಿ , ಸುರೇಶ , ರಾಹುಲ್ ಮಸ್ಕಿ. ರವಿ ದೇಸಾಯಿ ಇನ್ನಿತರರು ಹಾಜರಿದ್ದರು.
