ವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ ಮುಕ್ತಿ ಮೋರ್ಚಾ ಸಂಘಟನೆಯ ವತಿಯಿಂದ ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಚಿಂಚೋಳಿ ತಾಲೂಕಿನ ಚಂದಾಪೂರ ಪಟ್ಟಣದ ಕನಕ ವೃತ್ತದಿಂದ ಮೆಟ್ರಿಕ್ ಅಗ್ರೋ ಪವರ್ ಲಿಮಿಟೆಡ್ ಪೋಲಕಪಳ್ಳಿ ಕಾರ್ಖಾನೆವರೆಗೆ ಬೃಹತ್ ಪ್ರತಿಭಟನೆ ನಡೆಸುವುದರ ಮೂಲಕ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಕ್ಕೊತ್ತಾಯ ಪತ್ರವನ್ನು ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿದ ಬಳಿಕ ಮುಖಂಡ ಮಾರುತಿ ಗಂಜಗಿರಿ ಮಾತನಾಡಿ, ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಮೆಟ್ರಿಕ್ ಆಗ್ರೋ ಪವರ್ ಲಿಮಿಟೆಡನಲ್ಲಿ ಫೋಕಿಂಗ್ ಬೈಲರಗಳಿಗೆ ಸಂಬಂಧಪಟ್ಟ ಎಪಿಎಚ್ ಮತ್ತು ಈಎಸ್‌ಪಿಗಳು ಕೆಟ್ಟು ಹೋಗಿದೆ. ಇದರಿಂದ ಕಪ್ಪು ಹೊಗೆ ಹೋರ ಹೋಗದೆ ಕಂಪನಿ ಒಳಭಾಗದಲ್ಲಿಯೇ ಹೋರಸೂಸುತ್ತಿರುವುದರಿಂದ ಕೆಲಸ ಮಾಡುವ ಕಾರ್ಮಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅಲ್ಲದೆ ಸಾರ್ವಜನಿಕರಿಗೆ ಮತ್ತು ಕಂಪನಿ ಮುಂಭಾಗದಲ್ಲಿರುವ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ಕೊಡಲೆ ಕಂಪನಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾರ್ಖಾನೆ ಅಧಿನಿಯಮ ಉಲ್ಲಂಘನೆ ಮಾಡಿ ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಮತ್ತು ಸೇಪ್ಟಿ ಸಾಮಾಗ್ರಿಗಳ ನೀಡದೆ ದುಡಿಸಿಕೊಳ್ಳುತ್ತಿದೆ. ಕಾರ್ಖಾನೆ ಅಧಿನಿಯಮದ ಪ್ರಕಾರ ನೂರು ಜನ ಕಾರ್ಮಿಕರು ಕೆಲಸ ಮಾಡುವ ಕಂಪನಿಗಳಲ್ಲಿ ಕಾರ್ಮಿಕರಿಗೆ ವಿಶ್ರಾಂತಿ ಕೋಣೆ ಮತ್ತು ಶೌಚಾಲಯ ಇರಬೇಕು. ಈ ಪವರ್ ಪ್ಯಾಂಟ್ನಲ್ಲಿ ಇದಾವ ಸೌಕರ್ಯವಿಲ್ಲ. ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದರು ಕೂಡ ಈ ಕಂಪನಿಯವರು ಕನಿಷ್ಠ ವೇತನ ನೀಡದೆ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಕೂಡಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸುದ್ಧಿ ಓದಿದ್ದೀರಾ ಕಲಬುರಗಿಯಲ್ಲಿ ಮುಂದಿನ ಸಚಿವ ಸಂಪುಟ ಸಭೆ: ಒಪ್ಪಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ
ಗೋಪಾಲ ಗಾರಂಪಳ್ಳಿ, ಮೋಹನ ಐನಾಪುರ, ರಾಜಕುಮಾರ್ ಚಿಮ್ಮಾಯಿದ್ಲಾಯಿ, ಮೌನೇಶ್ ಗಾರಂಪಳ್ಳಿ, ಕಂಪನಿಯಲ್ಲಿ ಕೆಲಸ ಮಾಡುವ ಶಿವರಾಜ ಚಿಮ್ಮಾಯಿದ್ಲಾಯಿ , ಬಸವಸಾಗರ, ಮಹೇಶಕುಮಾರ, ಬಸವರಾಜ, ಉಮೇಶ್, ಶ್ರೀಮಂತ, ಪವನ, ಸಾಗರ, ದೀಲಿಪ, ಪ್ರಶಾಂತ, ಮಲ್ಲಿಕಾರ್ಜುನ, ಈಶಪ್ಪಾ, ಮಾಹಂತೇಶ, ಮಧುಸೂದನ, ವೀಠಲ್, ಸಂಜುಕುಮಾರ, ಈರಯ್ಯ, ನಾಗರಾಜ, ಅಲ್ತಾಫ್ ಖಾನ್ ಉಪಸ್ಥಿತರಿದ್ದರು.