ಕಳೆದ ಗುರುವಾರ ಶಾಲಾ ವಾಹನ ಹಾಗೂ ಸಾರಿಗೆ ಬಸ್ ನಡುವೆ ಡಿಕ್ಕಿಯಾಗಿ ಮೃತಪಟ್ಟ ಇಬ್ಬರ ವಿದ್ಯಾರ್ಥಿಗಳ ಕುಟುಂಬಕ್ಕೆ ಲೊಯೋಲಾ ಶಾಲಾಡಳಿತದ ವತಿಯಿಂದ ತಲಾ 5 ಲಕ್ಷ ರೂ ಪರಿಹಾರ ನೀಡಿ ಸಾಂತ್ವನ ಹೇಳಲಾಯಿತು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ಗುರುವಾರ ನಡೆದ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಕುರ್ಡಿ ಗ್ರಾಮದ ಸಮರ್ಥ ಮತ್ತು ಶ್ರೀಕಾಂತ ಎಂಬ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿಯಂತೆ 10 ಲಕ್ಷ ಪರಿಹಾರ ವಿತರಿಸಿದರು.
ಲೊಯೋಲಾ ಸಂಸ್ಥೆಯ ಮುಖ್ಯಸ್ಥ ಜಾನ್ ಪ್ರೇಮ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಚಿಕಿತ್ಸೆ , ಆರೋಗ್ಯ , ಬಗ್ಗೆ ಪೋಷಕರ ಬಳಿ ಮತ್ತು ವೈದ್ಯರಲ್ಲಿ ವಿಚಾರಿಸಿದರು.

ಇದನ್ನು ಓದಿದ್ದೀರಾ? ರಾಯಚೂರು | ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ
ಸಾವನ್ನಪ್ಪಿದ ಇಬ್ಬರು ಮಕ್ಕಳು ತಾಲೂಕಿನ ಕುರ್ಡಿ ಗ್ರಾಮದವರು. ಲೊಯೋಲಾ ಶಾಲೆಯಲ್ಲಿ ವಿದ್ಯಾಬ್ಯಾಸ ಪಡೆಯುತ್ತಿದ್ದರು. ಸಮರ್ಥ ಎನ್ನುವ ವಿದ್ಯಾರ್ಥಿ ಒಂದನೇ ತರಗತಿಯ ವಿದ್ಯಾರ್ಥಿ, ಮತ್ತೊಬ್ಬ ವಿದ್ಯಾರ್ಥಿ ಶ್ರೀಕಾಂತ್ ಏಳನೇ ತರಗತಿಯಲ್ಲಿ ಓದುತ್ತಿದ್ದ. ಲೊಯೋಲಾ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಮೌನಾಚರಣೆ ಮಾಡಿ, ಆತ್ಮಕ್ಕೆ ಶಾಂತಿ ಕೋರಿದರು.
