ವ್ಯಕ್ತಿಯೋರ್ವನಿಗೆ ಪುಣೆಯ ಹೋಟೆಲ್‌ವೊಂದರಲ್ಲಿ ಊಟ ನೀಡಲು ನಿರಾಕರಿಸಲಾಗಿದ್ದು ಅದರಿಂದ ಪಾನಮತ್ತ ಚಾಲಕ ಹೋಟೆಲ್‌ಗೆ ಟ್ರಕ್ ನುಗ್ಗಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಹಿಂಗಂಗಾವ್‌ನ ಹೋಟೆಲ್ ಗೋಕುಲ್ ಬಳಿ ನಿಂತಿದ್ದ ಕೆಲವು ಜನರು ಈ ಘಟನೆಯ ವಿಡಿಯೋವನ್ನು ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹಿಂಗಂಗಾವ್‌ನ ಹೋಟೆಲ್ ಗೋಕುಲ್ ಬಳಿ ನಿಂತಿದ್ದ ಕೆಲವು ಜನರು ಈ ಘಟನೆಯ ವಿಡಿಯೋವನ್ನು ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪಾನಮತ್ತ ಚಾಲಕ ಪದೇ ಪದೇ ತನ್ನ ಟ್ರಕ್ ಅನ್ನು ಹೊಟೇಲ್ ಕಟ್ಟಡಕ್ಕೆ ನುಗ್ಗಿಸುತ್ತಿರುವುದು ಕಾಣಬಹುದು. ಹೋಟೆಲ್‌ಗೆ ಹಾನಿ ಮಾಡಿರುವುದು ಮಾತ್ರವಲ್ಲದೇ ಈ ಟ್ರಕ್ ಚಾಲಕ ಹೋಟೆಲ್ ಹೊರಗೆ ನಿಲ್ಲಸಿದ್ದ ಕಾರಿಗೂ ಡಿಕ್ಕಿ ಹೊಡೆದಿದ್ದಾರೆ.
ವರದಿಗಳ ಪ್ರಕಾರ, ಚಾಲಕ ಸೊಲ್ಲಾಪುರದಿಂದ ಪುಣೆಗೆ ಪ್ರಯಾಣಿಸುತ್ತಿದ್ದು ಹೋಟೆಲ್ ಗೋಕುಲ್‌ನಲ್ಲಿ ನಿಲ್ಲಿಸಿ ಹೋಟೆಲ್ ಒಳಗೆ ಹೋಗಿ ಆಹಾರವನ್ನು ಕೇಳಿದ್ದ.
ಇದನ್ನು ಓದಿದ್ದೀರಾ? ಬೆಂಗಳೂರು | ಮಹಿಳೆ ಮೇಲೆ ಆಟೋ ಚಾಲಕನಿಂದ ಹಲ್ಲೆ; ವಿಡಿಯೋ ವೈರಲ್
ಆದರೆ ಹೋಟೆಲ್ ಮಾಲೀಕರು ಊಟ ಕೊಡಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಚಾಲಕ ತನ್ನ ಲಾರಿಯಲ್ಲಿ ಕುಳಿತು ಹೋಟೆಲ್ ಕಟ್ಟಡಕ್ಕೆ ಹಾನಿ ಮಾಡಿದ್ದಾನೆ.
ಚಾಲಕನನ್ನು ತಡೆಯಲು ಕೆಲವರು ಟ್ರಕ್‌ಗೆ ಕಲ್ಲು ತೂರಾಟ ಮಾಡುತ್ತಿರುವುದು ಕೂಡಾ ವಿಡಿಯೋದಲ್ಲಿ ನೋಡಬಹುದು. ಟ್ರಕ್‌ನ ಚಕ್ರವು ಸಿಲುಕಿ ಟ್ರಕ್ ಅಲ್ಲಾಡದಿದ್ದಾಗ ಕೊನೆಗೆ ಚಾಲಕ ಹೋಟೆಲ್‌ಗೆ ಹಾನಿ ಮಾಡುವುದನ್ನು ನಿಲ್ಲಿಸಿದ್ದಾನೆ.
ಪೊಲೀಸರು ಆತನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಚಾಲಕ ಪಾನಮತ್ತನಾಗಿದ್ದ ಕಾರಣ ಹೋಟೆಲ್‌ನಲ್ಲಿ ಊಟ ನೀಡಲು ನಿರಾಕರಿಸಲಾಗಿದೆಯೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದು ತಿಳಿದುಬಂದಿಲ್ಲ.
VIDEO | Maharashtra: A truck driver rammed his vehicle into a hotel building in #Pune after he was reportedly denied food. The truck driver was allegedly drunk. The incident took place on Friday night.#PuneNews #maharashtranews
— Press Trust of India (@PTI_News) September 7, 2024
(Source: Third Party)
(Full video available on… pic.twitter.com/TrPEF1ZxrA
